ಬಿಗ್ ಬಾಸ್ ಫೆಬ್ರವರಿ 28ರಂದು ಬಿಗ್ ಬಾಸ್ ಕಾರ್ಯಕ್ರಮ ನಡೆಯಲಿದೆ. ಅಂದು ನಡೆಯುವ ಕಾರ್ಯಕ್ರಮದಲ್ಲಿ ಎಲ್ಲಾ ಸ್ಪರ್ಧಿಗಳನ್ನು ಬರಮಾಡಿಕೊಳ್ಳಲಾಗುತ್ತದೆ. ಬಿಗ್ ಬಾಸ್ 8 ಫೆಬ್ರವರಿಯಿಂದ ಆರಂಭವಾಗಲಿದೆ ಎಂದು ವಾಹಿನಿ ಈ ಮೊದಲು ಘೋಷಣೆ ಮಾಡಿತ್ತು. ಆದರೆ, ದಿನಾಂಕವನ್ನು ಎಲ್ಲಿಯೂ ಘೋಷಣೆ ಮಾಡಿರಲಿಲ್ಲ. ಪ್ರೋಮೋ ರಿಲೀಸ್ ಮಾಡಿದ ಮೇಲೂ ಬಿಗ್ ಬಾಸ್ ಆರಂಭಕ್ಕೆ ಏಕಿಷ್ಟು ತಡ ಎನ್ನುವುದು ಸದ್ಯ ಅಭಿಮಾನಿಗಳ ಪ್ರಶ್ನೆ ಆಗಿತ್ತು ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದರು.
ಬಿಗ್ ಬಾಸ್ ಮನೆ ಒಳಗೆ ಯಾರೆಲ್ಲ ಹೋಗುತ್ತಾರೆ ಎನ್ನುವ ಚರ್ಚೆ ಜೋರಾಗಿದೆ. ಪ್ರತಿಬಾರಿಯೂ ಬಿಗ್ ಬಾಸ್ ಆರಂಭದ ದಿನವೇ ಮನೆ ಒಳಗೆ ಹೋಗುವ ಅಭ್ಯರ್ಥಿಯ ಹೆಸರು ಅಧಿಕೃತವಾಗುತ್ತದೆ. ಆದಾಗ್ಯೂ, ಕೆಲವರು ಹೆಸರು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆ ಹರಿದಾಡುತ್ತವೆ.ಈ ಬಾರಿ, ಜೊತೆ ಜೊತೆಯಲಿ ಧಾರಾವಾಹಿ ನಟ ಅನಿರುದ್ಧ ಜಕ್ಕರ್, ಗಾಯಕ ಹನುಮಂತ, ನಯನಾ, ನಟಿ ವಿನಯಾ ಪ್ರಸಾದ್, ಟಿವಿ ಆ್ಯಂಕರ್ ಅಮರ್ ಪ್ರಸಾದ್, ಕಿರುತೆರೆ ನಟಿ ವೈಷ್ಣವಿ ಗೌಡ, ನಟ ಸುನಿಲ್, ವಿನಯ್ ಗುರೂಜಿ, ರವಿಶಂಕರ್ ಗೌಡ ಬಿಗ್ ಬಾಸ್ ಮನೆ ಸೇರಲಿರುವ ಅಭ್ಯರ್ಥಿಗಳು ಎನ್ನಲಾಗುತ್ತಿದೆ.
ಇದನ್ನೂ ಓದಿ: Bigg Boss Kannada 8: ಬಿಗ್ ಬಾಸ್ ಮನೆಯಷ್ಟೇ ಅಲ್ಲ; ಸಾರಥಿ ಕಿಚ್ಚ ಚಹರೆಯೂ ಬದಲಾಗಿದೆ! ಏನದು? ಇಲ್ಲಿದೆ ನೋಡಿ…