Gujarat Civic Poll Results 2021: ಗುಜರಾತ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 294 ಸೀಟು ಗೆದ್ದ ಬಿಜೆಪಿ, ಸಂಭ್ರಮಾಚರಣೆ ಶುರು

Gujarat municipal election results 2021: ಅಹಮದಾಬಾದ್, ವಡೋದರಾ, ಸೂರತ್, ರಾಜ್​ ಕೋಟ್ , ಜಾಮ್ ನಗರ್ , ಭಾವ್ ನಗರ್ ಈ ಆರು ಮಹಾನಗರ ಪಾಲಿಕೆಗಳಲ್ಲಿ ಚುನಾವಣೆ ನಡೆದಿದ್ದು ಇಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೇರುವ ಸಾಧ್ಯತೆ ಬಹುತೇಕ ನಿಚ್ಚಳವಾಗಿದೆ.

  • TV9 Web Team
  • Published On - 17:21 PM, 23 Feb 2021
Gujarat Civic Poll Results 2021: ಗುಜರಾತ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 294 ಸೀಟು ಗೆದ್ದ ಬಿಜೆಪಿ, ಸಂಭ್ರಮಾಚರಣೆ ಶುರು
ಬಿಜೆಪಿ ಧ್ವಜ

ಅಹಮದಾಬಾದ್: ಗುಜರಾತ್​ನ ಆರು ಮಹಾನಗರ ಪಾಲಿಕೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಕೊನೆಯ ಹಂತಕ್ಕೆ ತಲುಪಿದ್ದು ಬಿಜೆಪಿ ಈವರೆಗೆ 294 ಸೀಟುಗಳನ್ನು ಗೆದ್ದುಕೊಂಡಿದೆ. ಅದೇ ವೇಳೆ ಕಾಂಗ್ರೆಸ್​ಗೆ​ 37 ಸೀಟು ಲಭಿಸಿದೆ. ಅಹಮದಾಬಾದ್, ವಡೋದರಾ, ಸೂರತ್, ರಾಜ್​ ಕೋಟ್ , ಜಾಮ್ ನಗರ್ , ಭಾವ್ ನಗರ್ ಈ ಆರು ಮಹಾನಗರ ಪಾಲಿಕೆಗಳಲ್ಲಿ ಚುನಾವಣೆ ನಡೆದಿದ್ದು ಇಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೇರುವ ಸಾಧ್ಯತೆ ಬಹುತೇಕ ನಿಚ್ಚಳವಾಗಿದೆ.

ಸೂರತ್ ಮಹಾನಗರ ಪಾಲಿಕೆಯ 120 ಸೀಟುಗಳ ಪೈಕಿ 107 ಸೀಟುಗಳ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ 84 ಸೀಟುಗಳನ್ನು ಗೆದ್ದುಕೊಂಡಿದ್ದು, ಆಮ್ ಆದ್ಮಿ ಪಕ್ಷ 23 ಸೀಟುಗಳಲ್ಲಿ ವಿಜಯಗಳಿಸಿದೆ. ವಿಪಕ್ಷ ಸ್ಥಾನದಲ್ಲಿದ್ದ ಕಾಂಗ್ರೆಸ್ ಈವರೆಗೆ ಇಲ್ಲಿ ಖಾತೆ ತೆರೆದಿಲ್ಲ. ಚುನಾವಣೆಯಲ್ಲಿ ಪರಾಭವಗೊಂಡ ಹಿನ್ನಲೆಯಲ್ಲಿ ಸೂರತ್ ನಗರದ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಾಬು ರಾಯ್ಕ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅಹಮದಾಬಾದ್ ಮತ ಎಣಿಕೆ ಕೇಂದ್ರದ ಹೊರಗೆ ಬಿಜೆಪಿ ಸಂಭ್ರಮಾಚರಣೆ ನಡೆಸಿದೆ.

ಅಹಮದಾಬಾದ್ ಮಹಾನಗರ ಪಾಲಿಕೆಯಲ್ಲಿ ಈವರೆಗೆ 67 ಸೀಟುಗಳ ಪೈಕಿ 57 ಸೀಟು ಬಿಜೆಪಿ ಗೆದ್ದು ಕೊಂಡಿದೆ . ರಾಜ್ ಕೋಟ್ ನಲ್ಲಿ 55 ಸೀಟುಗಳ ಪೈಕಿ 51, ಜಾಮ್ ನಗರದಲ್ಲಿ 60ಸೀಟುಗಳ ಪೈಕಿ 46, ಭಾವ್ ನಗರದಲ್ಲಿ 36 ಸೀಟುಗಳ ಪೈಕಿ 31, ವಡೋದರಾದಲ್ಲಿ 76 ಸೀಟುಗಳ ಪೈಕಿ 61 , ಸೂರತ್ ವಲ್ಲಿ 48 ಸೀಟುಗಳ ಪೈಕಿ 40 ಸೀಟುಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಕಾಂಗ್ರೆಸ್ ಪಕ್ಷ ಅಹಮದಾಬಾದ್ ನಲ್ಲಿ 10, ರಾಜ್ ಕೋಟ್ ನಲ್ಲಿ 4, ಜಾಮ್ ನಗರ್ ನಲ್ಲಿ 11, ಭಾವ್ ನಗರ್ ನಲ್ಲಿ 5, ವಡೋದರಾದಲ್ಲಿ 7 ಸೀಟು ಗೆದ್ದುಕೊಂಡಿದೆ.

ವಡೋದರಾಕ್ಕೆ ಕಿರಿ ವಯಸ್ಸಿನ ಕೌನ್ಸಿಲರ್
ವಡೋದರಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ ಶ್ರೀರಂಗ್ ಅಯರೆ ವಿಜಯಗಳಿಸಿದ್ದಾರೆ. 22ರ ಹರೆಯದ ಶ್ರೀರಂಗ್ ಅತೀ ಕಿರಿಯ ಕೌನ್ಸಿಲರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಚಿರಾಗ್ ಜವೇರಿ ವಡೋದರಾದಲ್ಲಿ ಪರಾಭವಗೊಂಡಿದ್ದಾರೆ. ಅಹಮದಾಬಾದ್​ನ ದನಿಲಿಂದಾದ ಎಲ್ಲ ವಾರ್ಡ್​ಗಳಲ್ಲಿಯೂ ಕಾಂಗ್ರೆಸ್ ಗೆದ್ದಿದೆ

ರಾಜ್ ಕೋಟ್ ನಗರ ಕಾಂಗ್ರೆಸ್ ಘಟಕ ಅಧ್ಯಕ್ಷ ಅಶೋಕ್ ದಂಗಾರ್ ರಾಜ್ ಕೋಟ್ ಮುನ್ಸಿಪಲ್ ಕಾರ್ಪರೇಷನ್​ನ ವಾರ್ಡ್ 17ರಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ರಾಜ್ ಕೋಟ್ ನಲ್ಲಿ ಕಾಂಗ್ರೆಸ್ 4 ಸ್ಥಾನಗಳಿಸಿದೆ. ರಾಜ್ ಕೋಟ್ ನಲ್ಲಿ 72 ಸೀಟುಗಳ ಪೈಕಿ 52 ಸೀಟು ಗೆದ್ದುಕೊಂಡು ಮತ್ತೆ ಅಧಿಕಾರಕ್ಕೇರಿದೆ.

 ಇದನ್ನೂ ಓದಿ: Gujarat Municipal Election Results: ಗುಜರಾತ್ ಮಹಾನಗರ ಚುನಾವಣೆ: 236 ಸೀಟುಗಳಲ್ಲಿ ಬಿಜೆಪಿ ಮುನ್ನಡೆ