ತಮಿಳುನಾಡು ರಾಜಕೀಯದಲ್ಲಿ ರಜನಿ ಅಲೆ… ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ಗಳ ಪ್ರವಾಹ

ತಲೈವಾ ಅಭಿಮಾನಿಗಳನ್ನು ಸದ್ಯಕ್ಕೆ ದೇವರು ಸಹ ತಡೆದು ನಿಲ್ಲಿಸಲಾರನೇನು! ಸೋಶಿಯಲ್ ಮೀಡಿಯಾ ತುಂಬಾ ರಜನೀಕಾಂತ್ ಓಡಾಟ...

ತಮಿಳುನಾಡು ರಾಜಕೀಯದಲ್ಲಿ ರಜನಿ ಅಲೆ... ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ಗಳ ಪ್ರವಾಹ
ರಜನೀಕಾಂತ್
Edited By:

Updated on: Dec 07, 2020 | 11:52 AM

ಚೆನ್ನೈ: ರಜನೀಕಾಂತ್ ರಾಜಕೀಯ ಪ್ರವೇಶಕ್ಕೆ ರಂಗಸಜ್ಜಿಕೆ ಸಿದ್ಧವಾಗುತ್ತಿದ್ದಂತೆಯೇ ಅಭಿಮಾನಿಗಳ ಉತ್ಸಾಹ ಮುಗಿಲುಮುಟ್ಟಿದೆ. ರಜನಿ ಹೊಸ ಹೆಜ್ಜೆಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ಗಳ ಪ್ರವಾಹ ಶುರುವಾಗಿದೆ.


ತಮಿಳುನಾಡು ರಾಜಕಾರಣದಲ್ಲಿ ತಲೈವಾ ಎಂಟ್ರಿ ಭಾರೀ ಸಂಚಲನ ಮೂಡಿಸಿದೆ.


ರಜನೀ ಸಿನಿಮಾಗಳ ತುಣುಕುಗಳನ್ನು, ಅವರ ಡೈಲಾಗ್​ಗಳನ್ನು, ಅವರ ಡಿಫರೆಂಟ್​ ಸ್ಟೈಲ್​ಗಳನ್ನು ಟ್ವಿಟರ್, ಫೇಸ್​ಬುಕ್ ಸೇರಿದಂತೆ ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ತಲೈವಾ ಅಭಿಮಾನಿಗಳನ್ನು ಸದ್ಯಕ್ಕೆ ದೇವರು ಸಹ ತಡೆದು ನಿಲ್ಲಿಸಲಾರನೇನು!

ರಜನೀಕಾಂತ್ ದೇಶವ್ಯಾಪಿ ಅಭಿಮಾನಿಗಳನ್ನು ಹೊಂದಿರುವುದರಿಂದ ಹಲವು ಭಾಷೆಗಳಲ್ಲಿ ಪೋಸ್ಟ್​ಗಳು ಕಾಣಸಿಗುತ್ತಿವೆ. ತಲೈವಾ ರಾಜಕಾರಣದ ಕುರಿತಾದ ಪೋಸ್ಟ್ ಒಂದಕ್ಕೆ ಪ್ರತಿಕ್ರಿಯಿಸಿರುವ ರವೀಂದರ್ ಜಲಾಲಿ ಎಂಬುವವರು ರಜನೀ ನಿವೃತ್ತ ಜೀವನವನ್ನು ಕಳೆಯೋದಕ್ಕೆ ಇದು ಒಳ್ಳೇ ಪ್ಲ್ಯಾನ್ ಎಂದು ಕಿಚಾಯಿಸಿದ್ದಾರೆ.

Published On - 3:57 pm, Thu, 3 December 20