Raksha Bandhan 2021: ಅಶುಭ ಘಳಿಗೆಯಲ್ಲಿ ರಾಖಿ ಕಟ್ಟಲೇ ಬಾರದು; ಯಾವ ಮುಹೂರ್ತದಲ್ಲಿ ರಾಖಿ ಕಟ್ಟಬೇಕು ಇಲ್ಲಿದೆ ಮಾಹಿತಿ

| Updated By: ಆಯೇಷಾ ಬಾನು

Updated on: Aug 20, 2021 | 7:21 AM

ತ್ರೇತಾಯುಗದಲ್ಲಿ ಬರುವ ಸನ್ನಿವೇಶದ ಪ್ರಕಾರ ರಾವಣನಿಗೆ ಭದ್ರಾ ಕಾಲದಲ್ಲಿ ಆತನ ತಂಗಿ ರಾಖಿ ಕಟ್ಟಿದ್ದಳು ಎಂದು ತಿಳಿದುಬರುತ್ತದೆ. ಅದಾದ ಬಳಿಕವೇ ರಾವಣನ ಪತನ ಶುರುವಾಗಿದ್ದು. ಕೊನೆಗೆ ಸರ್ವನಾಶವಾಗಿ ಬಿಡುತ್ತಾನೆ ರಾವಣ. ಅದಕ್ಕೇ ಹೇಳಿದ್ದು ಸಹೋದರಿಯರು ಈ ಭದ್ರಾ ಕಾಲದಲ್ಲಿ ಅಪ್ಪಿತಪ್ಪಿಯೂ ರಕ್ಷಾ ಬಂಧನ ರೂಪದಲ್ಲಿ ರಾಖಿ ಕಟ್ಟಬಾರದು.

Raksha Bandhan 2021: ಅಶುಭ ಘಳಿಗೆಯಲ್ಲಿ ರಾಖಿ ಕಟ್ಟಲೇ ಬಾರದು; ಯಾವ ಮುಹೂರ್ತದಲ್ಲಿ ರಾಖಿ ಕಟ್ಟಬೇಕು ಇಲ್ಲಿದೆ ಮಾಹಿತಿ
ಇಂದು ಇಡೀ ದೇಶವೇ ಸಹೋದರತ್ವದ ಭಾವ ಬೆಸೆಯುವ ರಕ್ಷಾ ಬಂಧನದ ಸಂಭ್ರಮದಲ್ಲಿದೆ. ಈ ಸಂಭ್ರಮಕ್ಕೆ ಕಿಚ್ಚು ಹಚ್ಚುವಂತೆ ಐಪಿಎಲ್ ಫ್ರಾಂಚೈಸಿಗಳು ಕೂಡ ಶುಭಾಶಯ ತಿಳಿಸಿದ್ದಾರೆ. ಹೀಗೆ ಪಂಜಾಬ್ ಕಿಂಗ್ಸ್ ತಂಡ ತಮ್ಮ ಆಟಗಾರರ ಮತ್ತು ಅವರ ಸಹೋದರಿಯರ ಫೋಟೋವನ್ನು ಪ್ರಕಟಿಸಿ ವಿಶೇಷವಾಗಿ ಶುಭಕೋರಿದ್ದಾರೆ.
Follow us on

ರಕ್ಷಾ ಬಂಧನ​ ದಿನ ಅಪ್ಪಿತಪ್ಪಿಯೂ ನಿಮ್ಮ ಸೋದರನಿಗೆ ಅಶುಭವಾದ ಘಳಿಗೆಯಲ್ಲಿ ರಾಖಿ ಕಟ್ಟಬೇಡಿ. ರಕ್ಷಾ ಬಂಧನ್ ನಿಜಕ್ಕೂ ಒಂದು ಪವಿತ್ರ ಹಬ್ಬ. ಸಹೋದರ- ಸಹೋದರಿಯರ ನಡುವೆ ಸಂಭ್ರಮ ಸಡಗರ ಮನೆಮಾಡುವ ದಿನವದು. ಈ ಸಂದರ್ಭದಲ್ಲಿ ಸಹೋದರಿಯರು ತಮ್ಮಸೋದರರಿಗೆ ರಾಖಿ ಕಟ್ಟಿ, ಅವರಿಗೆ ಆಯುರಾರೋಗ್ಯ, ಉಜ್ವಲ ಭವಿಷ್ಯ ಬಯಸುವ ದಿನ. ಆದರೆ ರಕ್ಷಾ ಬಂಧನ್​ ದಿನ ಅಪ್ಪಿತಪ್ಪಿಯೂ ನಿಮ್ಮ ಸೋದರನಿಗೆ ಅಶುಭವಾದ ಘಳಿಗೆಯಲ್ಲಿ ರಾಖಿ ಕಟ್ಟಬೇಡಿ.

ಈ ಬಾರಿ ರಕ್ಷಾ ಬಂಧನ್ (Raksha Bandhan 2021) ಆಗಸ್ಟ್​ 22ರಂದು ಭಾನುವಾರ ಬಂದಿದೆ. ಹಾಗಾಗಿ ರಾಖಿ ಕಟ್ಟಲು ಶುಭ ಮತ್ತು ಅಶುಭ ಸಮಯ ಯಾವುದು ಎಂಬುದರ ಬಗ್ಗೆ ತಿಳಿಯೋಣ ಬನ್ನೀ.

ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಹುಣ್ಣಿಮೆಯ ಸಂದರ್ಭದಲ್ಲಿ ರಕ್ಷಾ ಬಂಧನ್ ದಿನ ಆಚರಿಸಲ್ಪಡುತ್ತದೆ. ಇದು ಹಿಂದೂ ಧರ್ಮೀಯರಲ್ಲಿ ಅತ್ಯಂತ ಖಾಸಾ ಎಂದು ಪರಿಗಣಿಸಲ್ಪಡುವ ಹಬ್ಬ. ಇದು ಅಣ್ಣ ಮತ್ತು ತಂಗಿಯ ನಡುವಣ ಆತ್ಮೀಯ ಸಂಬಂಧದ ಹಬ್ಬ. ಅಣ್ಣನ ಉಜ್ವಲ ಭವಿಷ್ಯವನ್ನು ಪ್ರಾರ್ಥಿಸಿ, ಮುಂಗೈಗೆ ರಾಖಿ ಕಟ್ಟುವ ದಿನವಿದು. ಅದೇ ರೀತಿಯಾಗಿ ಸಹೋದರರು ತಮ್ಮ ಸಹೋದರಿಯರಿಗೆ ಸದಾ ರಕ್ಷಕನಾಗಿ ನಿಲ್ಲುತ್ತೇನೆ ಎಂದು ಅಭಯ ನೀಡುವ ಸಮಯ.

ಸಹೋದರರು ತಮ್ಮ ಸಹೋದರಿಯರಿಗೆ ಕಾಣಿಕೆ ನೀಡಿ, ಹರಸುವ ದಿನ. ಇದರಿಂದ ಸಹೋದರರು ಮತ್ತು ಸಹೋದರಿಯರ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳವ ಸುಸಂದರ್ಭ. ಹಾಗಾಗಿ ಇಲ್ಲಿ ಎಚ್ಚರವಹಿಸುವ ಕೆಲಸವೂ ಆಗಬೇಕಿದೆ. ಅಂದರೆ ಕೆಲವೊಂದು ಅಶುಭ ಸಮಯಗೂ ಇರತ್ತವೆ. ಅಂತಹ ವಿಷಮ ಕಾಲದಲ್ಲಿ ಸಹೋದರ-ಸಹೋದರಿಯ ನಡುವೆ ರಕ್ಷಾ ಬಂಧನ ಕಟ್ಟುವ, ಕಾಣಿಕೆ ನೀಡುವ ಕೆಲಸ ನಡೆಯದಿರಲಿ.

ಅಶುಭ ಕಾಲಗಳು ಎರಡು ಇವೆ:
ಪಂಚಾಂಗದ ಪ್ರಕಾರ ಬೆಳಗ್ಗೆ 6.16 ರವರೆಗೂ ಭದ್ರಾ ಕಾಲ ಉಪಸ್ಥಿತಿ ಇರುತ್ತದೆ. ಯಾವುದೇ ರೀತಿಯಲ್ಲೂ ಈ ಭದ್ರಾ ಕಾಲದಲ್ಲಿ ರಾಖಿ ಕಟ್ಟಬೇಡಿ. ಭದ್ರಾ ಕಾಲವನ್ನು ವಿನಾಶಕಾರಿ ಸಮಯ ಎಂದು ಪರಿಗಣಿಸಲ್ಪಟ್ಟಿದೆ. ಧಾರ್ಮಿಕ ಶಾಸ್ತ್ರಗಳಲ್ಲಿರುವ ಉಲ್ಲೇಖದ ಪ್ರಕಾರ ಅದರಲ್ಲೂ ತ್ರೇತಾಯುಗದಲ್ಲಿ ಬರುವ ಸನ್ನಿವೇಶದ ಪ್ರಕಾರ ರಾವಣನಿಗೆ ಭದ್ರಾ ಕಾಲದಲ್ಲಿ ಆತನ ತಂಗಿ ರಾಖಿ ಕಟ್ಟಿದ್ದಳು ಎಂದು ತಿಳಿದುಬರುತ್ತದೆ. ಅದಾದ ಬಳಿಕವೇ ರಾವಣನ ಪತನ ಶುರುವಾಗಿದ್ದು. ಕೊನೆಗೆ ಸರ್ವನಾಶವಾಗಿ ಬಿಡುತ್ತಾನೆ ರಾವಣ. ಅದಕ್ಕೇ ಹೇಳಿದ್ದು ಸಹೋದರಿಯರು ಈ ಭದ್ರಾ ಕಾಲದಲ್ಲಿ ಅಪ್ಪಿತಪ್ಪಿಯೂ ರಕ್ಷಾ ಬಂಧನ ರೂಪದಲ್ಲಿ ರಾಖಿ ಕಟ್ಟಬಾರದು.

ಇದರ ಬದಲಿಗೆ ಸಾಯಂಕಾಲ 5.05 ಗಂಟೆಯ ನಂತರ 6.39 ರವರೆಗೂ ಶುಭ ರಕ್ಷಾ ಬಂಧನ ಯೋಗವಿದ್ದು, ಈ ಸಮಯದಲ್ಲಿ ತಮ್ಮ ಸಹೋದರರಿಗೆ ರಾಖಿ ಕಟ್ಟುವುದರಿಂದ ಅತ್ಯಂತ ಶುಭಪ್ರದವಾಗುತ್ತದೆ. ಗಮನಾರ್ಹವೆಂದರೆ ರಾಹುಕಾಲದಲ್ಲಿ ಮಾಡಿದ ಯಾವುದೇ ಕೆಲಸವೂ ಊರ್ಜಿತವಾಗುವುದಿಲ್ಲ. ಹಾಗಾಗಿ ರಅಹು ಕಾಲದಲ್ಲಿಯೂ ರಾಖಿ ಬಂಧನ ನಡೆಯಬಾರದು.

ಹಾಗಾದರೆ ರಾಖಿ ಕಟ್ಟಲು ಶುಭ ಘಳಿಗೆ ಯಾವುದು?
ಹಾಗಾದರೆ ರಾಖಿ ಕಟ್ಟಲು ಅತ್ಯಂತ ಶುಭ ಘಳಿಗೆ ಅಂದರೆ ಬಂಧನ ದಿನ ಅತ್ಯಂತ ಶುಭಮಯ ದಿನವಾಗಿರುತ್ತದೆ. ಅಂತಹುದರಲ್ಲಿ ವಿಶೇಷ ಶುಭಪ್ರದ ಸಮಯವನ್ನು ಅರಿತು, ರಾಖಿ ಕಟ್ಟುವುದು ವಿಹಿತ. ಧನಿಷ್ಠಾ ನಕ್ಷತ್ರದಲ್ಲಿ ಶುಭ ಘಳಿಗೆಯಿದೆ. ಇದು ಅತ್ಯಂತ ಶುಭ ಕಾಲ. ಇದರ ಹೊರತಾಗಿ ಬೆಳಗ್ಗೆ ಮಾತಂಗ ಮತ್ತು ಸರ್ವಾರ್ಥ ಸಿದ್ಧಿ ಯೋಗ ಕಾಲವೂ ಇದೆ. ಈ ಘಳಿಗೆಗಳು ರಕ್ಷಾ ಬಂಧನದ ದಿನ ಮಾತ್ರವೇ ಬರುವುದು. ಹಾಗಾಗಿಯೇ ಈ ದಿನಕ್ಕೆ ಅಷ್ಟೊಂದು ಅಣ್ಣ-ತಂಗಿಯರ

ಆಗಸ್ಟ್​ 22 ಬೆಳಗ್ಗೆ 10.34 ವರೆಗೂ ಶೋಭಾನಮಾಯ ಯೋಗವಿರುತ್ತದೆ. ಧನಿಷ್ಟಾ ನಕ್ಷತ್ರ ಕಾಲವು ಸಂಜೆ 7.40 ವರೆಗೂ ಇರುತ್ತದೆ. ಇದು ಅತ್ಯಂತ ಶುಭಮಯ ಸಮಯವಾಗಿದ್ದು, ಈ ಸಮಯದಲ್ಲಿ ರಾಖಿ ಕಟ್ಟಬೇಕು. ಇದು ಬಿಟ್ಟರೆ ಭದ್ರಾ ಕಾಲ ಮತ್ತು ರಾಹುಕಾಲ ಹೊರತುಪಡಿಸಿ ಯಾವುದೇ ಘಳಿಗೆಯಲ್ಲಿ ಸಮಯಾವಕಾಶ ನೋಡಿಕೊಂಡು ರಾಖಿ ಕಟ್ಟಬಹುದು.

Raksha Bandhan 2021: ರಾಖಿ ಕಟ್ಟುವ ಶುಭ ಮುಹೂರ್ತ ಈ ವರ್ಷ ಯಾವ ಘಳಿಗೆಯಲ್ಲಿ ಬಂದಿದೆ?

(raksha bandhan 2021 dont tie rakhi on brother wrist at auspicious time)