ವರಮಹಾಲಕ್ಷ್ಮೀ ಹಬ್ಬಕ್ಕೆ ಖರೀದಿಗೆ ಮುಗಿಬಿದ್ದ ಜನ; ಕೆ.ಆರ್.ಪುರಂನಲ್ಲಿ 2 ಕಿಲೋಮೀಟರ್​ಗೂ ಹೆಚ್ಚು ದೂರ ಟ್ರಾಫಿಕ್ ಜಾಮ್

varalakshmi vratham 2021: ಗಾಂಧಿಬಜಾರ್​ನಲ್ಲೂ ಹೂವು, ಹಣ್ಣು ಖರೀದಿಗೆ ಜನ ಜನಜಂಗುಳಿ ಸೇರಿದೆ. ಕೊರೊನಾ ಇದೆ, ಹೊರಗೆ ಬರಬೇಡಿ ಅಂತ ಹೇಳುತ್ತಾರೆ. ಜನರು ಬರದಿದ್ದರೆ ವ್ಯಾಪಾರಸ್ಥರು ನಾವೇನ್ ಮಾಡೋದು.

ವರಮಹಾಲಕ್ಷ್ಮೀ ಹಬ್ಬಕ್ಕೆ ಖರೀದಿಗೆ ಮುಗಿಬಿದ್ದ ಜನ; ಕೆ.ಆರ್.ಪುರಂನಲ್ಲಿ 2 ಕಿಲೋಮೀಟರ್​ಗೂ ಹೆಚ್ಚು ದೂರ ಟ್ರಾಫಿಕ್ ಜಾಮ್
ಕೆ.ಆರ್.ಪುರಂ ಮಾರುಕಟ್ಟೆ
Follow us
TV9 Web
| Updated By: sandhya thejappa

Updated on:Aug 19, 2021 | 9:28 AM

ಬೆಂಗಳೂರು: ನಾಳೆ (ಆಗಸ್ಟ್ 19) ವರಮಹಾಲಕ್ಷ್ಮೀ (varalakshmi vratham) ಹಬ್ಬದ ಆಚರಣೆ ಹಿನ್ನೆಲೆ ನಾಡಿದಾದ್ಯಂತ ಖರೀದಿ ಬರದಿಂದ ಸಾಗುತ್ತಿದೆ. ಇನ್ನು ಬೆಂಗಳೂರಿನ ಕೆ.ಆರ್.ಪುರಂ ರೈತರ ಮಾರುಕಟ್ಟೆಗೆ (KR Puram Market) ಜನರು ಮುಗುಬಿದ್ದಿದ್ದು, ಸುಮಾರು ಎರಡು ಕಿಲೋಮೀಟರ್ಗೂ ಹೆಚ್ಚು ದೂರ ಟ್ರಾಫಿಕ್ ಜಾಮ್ ಆಗಿದೆ. ಬೇಕಾಬಿಟ್ಟಿಯಾಗಿ ರಸ್ತೆ ಮಧ್ಯೆ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದಾರೆ. ಮುಖ್ಯರಸ್ತೆ ಬದಿಯಲ್ಲೇ ವ್ಯಾಪಾರ ವಹಿವಾಟು ನಡೆಯುತ್ತಿರುವ ಹಿನ್ನೆಲೆ ಕಿಲೋಮೀಟರ್ಗಟ್ಟಲೆ ಟ್ರಾಫಿಕ್ ಜಾಮ್ ಆಗಿದೆ. ದೈಹಿಕ ಅಂತರ ಇಲ್ಲದೇ, ಮಾಸ್ಕ್ ಕೂಡ ಧರಿಸದೇ ಜನರು ವ್ಯಾಪಾರ ವಹಿವಾಟು ಮಾಡುತ್ತಿದ್ದಾರೆ.

ಗಾಂಧಿಬಜಾರ್​ನಲ್ಲೂ ಹೂವು, ಹಣ್ಣು ಖರೀದಿಗೆ ಜನ ಜನಜಂಗುಳಿ ಸೇರಿದೆ. ಕೊರೊನಾ ಇದೆ, ಹೊರಗೆ ಬರಬೇಡಿ ಅಂತ ಹೇಳುತ್ತಾರೆ. ಜನರು ಬರದಿದ್ದರೆ ವ್ಯಾಪಾರಸ್ಥರು ನಾವೇನ್ ಮಾಡೋದು. ಸರ್ಕಾರ ಗ್ಯಾಸ್ ಬೆಲೆ ಸೇರಿದಂತೆ ಎಲ್ಲಾ ರೇಟ್ ಜಾಸ್ತಿ ಮಾಡ್ತಾ ಇದೆ. ಹೀಗಾದರೆ ವ್ಯಾಪಾರನೂ ಇಲ್ಲದೆ ನಾವು ಹೇಗೆ ಬದುಕುವುದು ಅಂತ ವ್ಯಾಪಾರಸ್ಥರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಟಿವಿ9ಗೆ ಪ್ರತಿಕ್ರಿಯೆ ನೀಡಿದ ಗ್ರಾಹಕರು, ಎಲ್ಲಾ ಬೆಲೆ ಜಾಸ್ತಿ ಆಗಿದೆ. 50 ರೂಪಾಯಿ ಇದ್ದ ಹೂವಿಗೆ 150 ರೂಪಾಯಿ ಅಂತಾರೆ. ಗ್ಯಾಸ್, ಅಡುಗೆ ಎಣ್ಣೆ ಬೆಲೆ ಎಲ್ಲವೂ ಜಾಸ್ತಿ ಆಗಿದೆ. ಆದ್ರೂ ಖರೀದಿಸಲೇಬೇಕು, ಜೀವನ ಮಾಡಲೇಬೇಕು ಅಂತ ಅಳಲು ತೋಡಿಕೊಂಡರು.

ಜನವೋ ಜನ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ವರಮಹಾಲಕ್ಷ್ಮೀ ಹಬ್ಬ ಆಚರಣೆ ಹಿನ್ನೆಲೆ ಖರೀದಿ ಜೋರಾಗಿ ನಡೆಯುತ್ತಿದೆ. ಗಾಂಧಿ ಮಾರುಕಟ್ಟೆಯಲ್ಲಿ ಜನ ಜಾತ್ರೆಯೆ ಸೇರಿದೆ. ಮಾಸ್ಕ್ ಹಾಕದೆ, ದೈಹಿಕ ಅಂತರ ಮರತು ಜನ ನಿರ್ಲಕ್ಷ್ಯ ತೋರುತ್ತಿದ್ದಾರೆ. ಕೊರೊನಾ ಮೂರನೇ ಅಲೆಯ ಮೂನ್ಸುಚನೆ ಇದ್ದರೂ ಯಾವುದಕ್ಕೂ ಕೇರ್ ಮಾಡದೆ ಖರೀದಿಯಲ್ಲಿ ತೊಡಗಿದ್ದಾರೆ. ಗಿರಿನಾಡು ಯಾದಗಿರಿಯಲ್ಲಿ ಹಬ್ಬದ ಸಿದ್ಧತೆ ಭರದಿಂದ ಸಾಗುತ್ತಿದೆ. ನಗರದ ತರಕಾರಿ ಮಾರುಕಟ್ಟೆಗೆ ಜನ ಬರುತ್ತಿದ್ದಾರೆ. ಮಾರುಕಟ್ಟೆಗೆ ಕಡಿಮೆ ಸಂಖ್ಯೆಯಲ್ಲಿ ಬಂದರೂ ಕೊವಿಡ್ ರೂಲ್ಸ್ ಬ್ರೇಕ್ ಮಾಡಿದ್ದಾರೆ.

ಇದನ್ನೂ ಓದಿ

Goravanahalli Sri Mahalakshmi Temple: ವರಮಹಾಲಕ್ಷ್ಮೀ ಹಬ್ಬಕ್ಕೆ ಭಕ್ತರಿಗಿಲ್ಲ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದರ್ಶನ ಭಾಗ್ಯ, ದೇಗುಲ ನಾಳೆ ಬಂದ್

Varalakshmi Vrata 2021: ವರ ಮಹಾಲಕ್ಷ್ಮೀ ವ್ರತದ ಮುಹೂರ್ತ, ವರಪ್ರದ ಮಹಾಲಕ್ಷ್ಮಿಯ ಸ್ವರೂಪ ತಿಳಿದುಕೊಳ್ಳಿ

(People are coming to KR Puram market to buy puja things for Varamahalakshmi festival benagluru)

Published On - 9:28 am, Thu, 19 August 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್