Varalakshmi Vratam 2021: ವರ ಮಹಾಲಕ್ಷ್ಮೀ ವ್ರತದ ಮುಹೂರ್ತ, ವರಪ್ರದ ಮಹಾಲಕ್ಷ್ಮಿಯ ಸ್ವರೂಪ ತಿಳಿದುಕೊಳ್ಳಿ

ಬಡವರ ಭಾಗ್ಯ ನಿಧಿ ಈ ವರಮಹಾಲಕ್ಷ್ಮೀ ವ್ರತ. ಈ ಚಮತ್ಕಾರದ ವ್ರತ, ಮುಹೂರ್ತ, ಪೂಜೆಯ ವಿಧಾನ ಕತೆಯನ್ನು ತಿಳಿದುಕೊಳ್ಳೋಣ ಬನ್ನೀ. ದರಿದ್ರವನ್ನು ದೂರಗೊಳಿಸುವ ಮತ್ತು ಅಖಂಡ ಸೌಭಾಗ್ಯವನ್ನು ಕಲ್ಪಿಸುವ ಈ ವ್ರತಾಚರಣೆಯನ್ನು ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಗೆ ಮುಂದಿನ ಶುಕ್ರವಾರದಂದು ವರಲಕ್ಷ್ಮೀ ವ್ರತ ಇಟ್ಟುಕೊಳ್ಳುತ್ತಾರೆ.

Varalakshmi Vratam 2021: ವರ ಮಹಾಲಕ್ಷ್ಮೀ ವ್ರತದ ಮುಹೂರ್ತ, ವರಪ್ರದ ಮಹಾಲಕ್ಷ್ಮಿಯ ಸ್ವರೂಪ ತಿಳಿದುಕೊಳ್ಳಿ
ವರಮಹಾಲಕ್ಷ್ಮೀ ವ್ರತದ ಮುಹೂರ್ತ, ಪೂಜೆಯ ವಿಧಾನ ಕತೆಯನ್ನು ತಿಳಿದುಕೊಳ್ಳಿ
Follow us
| Updated By: Digi Tech Desk

Updated on:Aug 19, 2021 | 10:34 AM

ಬಡವರ ಭಾಗ್ಯ ನಿಧಿ ಈ ವರಮಹಾಲಕ್ಷ್ಮೀ ವ್ರತ. ಈ ಚಮತ್ಕಾರದ ವ್ರತ, ಮುಹೂರ್ತ, ಪೂಜೆಯ ವಿಧಾನ ಕತೆಯನ್ನು ತಿಳಿದುಕೊಳ್ಳೋಣ ಬನ್ನೀ. ದರಿದ್ರವನ್ನು ದೂರಗೊಳಿಸುವ ಮತ್ತು ಅಖಂಡ ಸೌಭಾಗ್ಯವನ್ನು ಕಲ್ಪಿಸುವ ಈ ವ್ರತಾಚರಣೆಯನ್ನು ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಗೆ ಮುಂದಿನ ಶುಕ್ರವಾರದಂದು ವರಲಕ್ಷ್ಮೀ ವ್ರತ ಇಟ್ಟುಕೊಳ್ಳುತ್ತಾರೆ. ಈ ವರ್ಷ ಈ ವ್ರತವು ನಾಳೆ ಆಗಸ್ಟ್​ 20ರಂದು ಬಂದಿದೆ. ಈ ವ್ರತ ಆಚರಿಸುವುದರಿಂದ ಅಷ್ಟ ಲಕ್ಷ್ಮಿ ಕೃಪೆ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ವ್ರತ ಸಂಬಂಧಿತ ಮಹತ್ವದ ವಿಷಯಗಳನ್ನು ಅರಿತುಕೊಳ್ಳೋಣ.

ಶ್ರಾವಣ ಮಾಸದಲ್ಲಿ ಬರುವ ಹುಣ್ಣಿಮೆಗೆ ಮುನ್ನ ಬರುವ ಶುಕ್ರವಾರ ವರಲಕ್ಷ್ಮೀ ವ್ರತವನ್ನು(Varalakshmi Vratam) ಆಚರಿಸುತ್ತಾರೆ. ಈ ವ್ರತ ತುಂಬಾ ಪ್ರಭಾವಶಾಲಿ, ದಕ್ಷಿಣ ಭಾರತದಲ್ಲಿ ಈ ವ್ರತವನ್ನು ಬಹಳ ಭಕ್ತಿಭಾವದಿಂದ ಆಚರಿಸುತ್ತಾರೆ. ಇದರ ಫಲಾಪಲಗಳನ್ನು ಅರಿತ ಮೇಲೆ ಉತ್ತರ ಭಾರತದ ಜನರೂ ಇದನ್ನು ಆಚರಿಸತೊಡಗಿದ್ದಾರೆ.

ವರಲಕ್ಷ್ಮೀ (Goddess Lakshmi) ವ್ರತವನ್ನುಮನಸ್ಸಿಟ್ಟು ಮಾಡಿದರೆ ಮನೆಯಲ್ಲಿನ ಬಡತನ ದೂರವಾಗಿ ಸುಭಿಕ್ಷವಾಗುತ್ತದೆ ಎಂಬ ಪ್ರತೀತಿಯಿದೆ. ಸಂತಾನವಿಲ್ಲದ ದಂಪತಿಗೆ ಸಂತಾನ ಸುಖ ದೊರೆತು, ಮಕ್ಕಳಾಗುತ್ತಾರೆ. ಆದರೆ ಗಮನಿಸಿ ಈ ವ್ರತ ಕುಮಾರಿಯರಿಗೆ ಅಲ್ಲ; ವಿವಾಹಿತ ಮಹಿಳೆಯರು ಈ ವ್ರತ ಪಾಲಿಸುತ್ತಾರೆ. ಅಂತಹವರಿಗೆ ಅಖಂಡ ಸೌಭಾಗ್ಯ ಪ್ರಾಪ್ತಿಯಾಗುತ್ತದೆ. ದಂಪತಿ ಸತಿ ಪತಿ ಇಬ್ಬರೂ ಈ ವ್ರತವಿಟ್ಟುಕೊಂಡು ಶ್ರದ್ಧಾ ಭಕ್ತಿಯಿಂದ ಆಚರಿಸಿದರೆ ಅತ್ಯಂತ ಶುಭವಾಗುತ್ತದೆ. ಈ ವ್ರತದ ಇತರೆ ಮಾಹಿತಿಯನ್ನೂ ತುಳಿದುಕೊಳ್ಳೋಣ ಬನ್ನೀ.

ವರಪ್ರದ ವರಲಕ್ಷ್ಮೀ ಸ್ವರೂಪ ಹೇಗಿರುತ್ತದೆ:

varalakshmi vratam 2021 5

ವರಪ್ರದ ವರಲಕ್ಷ್ಮೀ ಸ್ವರೂಪ ಹೇಗಿರುತ್ತದೆ

ವರ ಲಕ್ಷ್ಮೀ ಮಾತೆಯು ಕ್ಷೀರ ಸಾಗರದಿಂದ ಪ್ರಕಟವಾದವಳು. ಆದ್ದರಿಂದ ವರ ಲಕ್ಷ್ಮೀಯ ಬಣ್ಣ ಹಾಲಿನಂತೆ ಬಿಳುಪಾಗಿರುತ್ತದೆ. ವರ ಲಕ್ಷ್ಮೀ ಮಾತೆಯು 16 ತರಹದ ಶೃಂಗಾರಗಳನ್ನುಮಾಡಿಕೊಳ್ಳುತ್ತಾರೆ. ಮಹಾಲಕ್ಷ್ಮೀಯನ್ನು ಮನಸಿಟ್ಟು ಆರಾಧಿಸಿದರೆ ಮಹಾಮಾತೆ ಸಂತುಷ್ಟಗೊಂಡು ತನ್ನ ಭಕ್ತರ ಮನೋಕಾಮನೆಯನ್ನು ನೆರವೇರಿಸುತ್ತಾಳೆ. ಹಾಗಾಗಿಯೇ ವರ ಮಹಾಲಕ್ಷ್ಮೀ ಎಂದು ಜನಜನಿತಳಾಗಿರುವುದು. ಜೀವನದಲ್ಲಿನ ಎಲ್ಲ ಅಭಾವಗಳನ್ನು ನೀಗಿಸುವ ಮಹಾಮಾತೆ ವರ ಲಕ್ಷ್ಮೀ.

ವರಲಕ್ಷ್ಮೀ ವ್ರತದ ಶುಭ ಘಳಿಗೆ:

varalakshmi vratam 2021 6

ವರಲಕ್ಷ್ಮೀ ವ್ರತದ ಶುಭ ಘಳಿಗೆ

ಈ ಬಾರಿ ವರಮಹಾಲಕ್ಷ್ಮೀ (Goddess of Wealth) ವ್ರತ ಮುಹೂರ್ತವು ಪ್ರದೋಷ, ಸರ್ವಾರ್ಥಸಿದ್ಧಿ, ರವಿ ಯೋಗದಿಂದ ಕೂಡಿದೆ. ಹಾಗಾಗಿ ಈ ಬಾರಿಯ ವರಮಹಾಲಕ್ಷ್ಮೀ ಹಬ್ಬವು ಸಿದ್ಧಿದಾಯಕವಾಗಿದೆ. ಪೂಜೆಗಾಗಿ ವಿಶೇಷ ಮುಹೂರ್ತ ಹೀಗಿದೆ: ಆಗಸ್ಟ್​ 20 ಬೆಳಗ್ಗೆ 6.06 ನಿಮಿಷದಿಂದ 7.58 ವರೆಗೂ ಇದೆ. ಮಧ್ಯಾಹ್ನ 12.31 ನಿಮಿಷದಿಂದ 2.41 ನಿಮಿಷದವರೆಗೂ ಇದೆ. ಸಾಯಂಕಾಲ 6.41ರಿಂದ ರಾತ್ರಿ 8.11 ವರೆಗೂ ಮುಹೂರ್ತವಿದೆ. ರಾಹುಕಾಲ ಬಿಟ್ಟು ಬೇರೆ ಯಾವುದೇ ಮುಹೂರ್ತದಲ್ಲಿ ಬೇಕಾದರೂ ಈ ಬಾರಿ ವರಮಹಾಲಕ್ಷ್ಮೀ ವ್ರತ ಆಚರಿಸಬಹುದು.

(varalakshmi vratam 2021 know the varalakshmi vrat date muhurat puja vidhi and katha)

Published On - 7:29 am, Thu, 19 August 21

ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ