Sign In

By signing in or creating an account, you agree with Associated Broadcasting Company's Terms & Conditions and Privacy Policy.

Raksha Bandhan 2021: ರಾಖಿ ಕಟ್ಟುವ ಶುಭ ಮುಹೂರ್ತ ಈ ವರ್ಷ ಯಾವ ಘಳಿಗೆಯಲ್ಲಿ ಬಂದಿದೆ?

ರಕ್ಷಾ ಬಂಧನ 2021: ಹಿಂದೂ ಪಂಚಾಗದ ಪ್ರಕಾರ ಈ ರಕ್ಷಾ ಬಂಧನ ಹಬ್ಬ ಆಷಾಢ ಕಳೆದು ಶ್ರಾವಣ ಮಾಸದಲ್ಲಿ ಪೂರ್ಣಿಮೆಯ ವೇಳೆ ಬರುತ್ತದೆ. ಅದನ್ನು ರಾಖಿ ಹುಣ್ಣಿಮೆ ಎಂದೂ ಕರೆಯುತ್ತಾರೆ. ಈ ಬಾರಿ ಆಗಸ್ಟ್​ 22 ರಂದು ಭಾನುವಾರದಂದು ರಕ್ಷಾ ಬಂಧನ ಹಬ್ಬ ಆಚರಿಸಲ್ಪಡುತ್ತದೆ.

Raksha Bandhan 2021: ರಾಖಿ ಕಟ್ಟುವ ಶುಭ ಮುಹೂರ್ತ ಈ ವರ್ಷ ಯಾವ ಘಳಿಗೆಯಲ್ಲಿ ಬಂದಿದೆ?
ರಾಖಿ ಕಟ್ಟುವ ಶುಭ ಕಾಲ ಈ ಬಾರಿ ಯಾವ ಘಳಿಗೆಯದಲ್ಲಿದೆ?
Follow us
TV9 Web
| Updated By: ಆಯೇಷಾ ಬಾನು

Updated on:Aug 05, 2021 | 7:58 AM

Raksha Bandhan: ರಕ್ಷಾ ಬಂಧನ 2021: ಸೋದರ-ಸೋದರಿಯರ ನಡುವಣ ರಕ್ಷೆಯ ಬಂಧನ ಇದು. ಕಳೆದ ವರ್ಷದಂತೆ ಈ ಬಾರಿಯೂ ಕೊರೊನಾ ಸೋಂಕಿನ ಮಧ್ಯೆಯೇ ರಕ್ಷಾ ಬಂಧನ (Raksha Bandhan 2021) ಆಚರಿಸಬೇಕಿದೆ. ಸಹೋದರ ಮತ್ತು ಸಹೋದರಿಯರ ಮಧ್ಯೆ ಕಂಡುಬರುವ ಅನ್ಯೋನ್ಯತೆ, ಪ್ರೀತಿ- ಸೌಹಾರ್ಧತೆಯ ಸಂಕೇತ ಈ ರಕ್ಷಾ ಬಂಧನ. ಈ ಪವಿತ್ರ ದಿನದಂದು ಸಹೋದರಿಯು ತನ್ನ ಸಹೋದರನಿಗೆ ದೀರ್ಘಾಯುಷ್ಯ ಕೋರುತ್ತಾ, ರಾಖಿ ಬಂಧನ ತೊಡಿಸುವ ದಿನ. ಈ ದಿನದ ಮಹತ್ವ ಏನೆಂಬುದನ್ನು ಅರಿಯುವ ಚಿಕ್ಕ ಪ್ರಯತ್ನ ಇಲ್ಲಿದೆ:

ಅಣ್ಣ-ತಂಗಿಯರ ನಡುವೆ ಸದಾ ಅನ್ಯೋನ್ಯ, ಅಮೂಲ್ಯ ಸಂಬಂಧ ನೆಲೆಸಿರುತ್ತದೆ. ಪ್ರೀತಿಪೂರ್ವಕವಾದ ನೆರಳು ಅವರಿಬ್ಬರ ಮಧ್ಯೆ ಸುಳಿದಾಡುತ್ತಿರುತ್ತದೆ. ಇದನ್ನು ಹಿಂದೂ ಧರ್ಮದಲ್ಲಿ ವಿಶಿಷ್ಟ ಹಬ್ಬದ ಮಾದರಿಯಲ್ಲಿ ಆಚರಿಸಲ್ಪಡುತ್ತದೆ. ಈ ಪವಿತ್ರ ದಿನದಂದು ಸಹೋದರಿ ತನ್ನ ಸಹೋದರನಿಗೆ ಮುಂಗೈ ಮಣಿಕಟ್ಟಿನಲ್ಲಿ ರಾಖಿ ಕಟ್ಟಿ. ಆತನಿಗೆ ದೀರ್ಘಾಯುಷ್ಯ ಬೇಡಿಕೊಳ್ಳುತ್ತಾಳೆ. ಅದಕ್ಕೆ ಪ್ರತಿಯಾಗಿ ಆ ಸಹೋದರ ಸದಾ ತನ್ನ ಸೋದರಿಯ ರಕ್ಷಣೆಗೆ ನಿಲ್ಲುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತಾನೆ.

ಹಿಂದೂ ಪಂಚಾಗದ ಪ್ರಕಾರ ಶ್ರಾವಣ ಮಾಸದಲ್ಲಿ ಬರುವ ರಾಖಿ ಹುಣ್ಣಿಮೆ: ಹಿಂದೂ ಪಂಚಾಗದ ಪ್ರಕಾರ ಈ ರಕ್ಷಾ ಬಂಧನ ಹಬ್ಬ ಆಷಾಢ ಕಳೆದು ಶ್ರಾವಣ ಮಾಸದಲ್ಲಿ ಪೂರ್ಣಿಮೆಯ ವೇಳೆ ಬರುತ್ತದೆ. ಅದನ್ನು ರಾಖಿ ಹುಣ್ಣಿಮೆ ಎಂದೂ ಕರೆಯುತ್ತಾರೆ. ಈ ಬಾರಿ ಆಗಸ್ಟ್​ 22 ರಂದು ಭಾನುವಾರದಂದು ರಕ್ಷಾ ಬಂಧನ ಹಬ್ಬ ಆಚರಿಸಲ್ಪಡುತ್ತದೆ.

ಇನ್ನು ಪೌರಾಣಿಕ ಕತೆಯನುಸಾರ ಭಗವಂತ ವಿಷ್ಣು ಬಲಿ ಚಕ್ರವರ್ತಿಯ ಕೋರಿಕೆಯ ಮೇರೆಗೆ ಪಾತಾಳ ಲೋಕಕ್ಕೆ ಸಂಚಾರ ಕೈಗೊಳ್ಳುತ್ತಾರೆ. ಅದು ಶ್ರಾವಣ ಮಾಸದ ಹುಣ್ಣಿಮೆಯ ದಿನವಾಗಿರುತ್ತದೆ.

ರಾಖಿ ಹುಣ್ಣಿಮೆಯ ಶುಭ ಘಳಿಗೆ: ರಾಖಿ ಹುಣ್ಣಿಮೆಯ ತಿಥಿ ಇದೇ ಆಗಸ್ಟ್​ 21ರ ಸಾಯಂಕಾಲ 7 ಗಂಟೆಗೆ ಆರಂಭವಾಗುತ್ತದೆ. ಅದು ಆಗಸ್ಟ್​ 22ರ ಸಾಯಂಕಾಲ 5 ಗಂಟೆ 31 ನಿಮಿಷದವರೆಗೂ ಇರುತ್ತದೆ. ಪೂಜಾ ವೇಳೆಯು ಬೆಳಗ್ಗೆ 6 ಗಂಟೆ 15 ನಿಮಿಷದಿಂದ ಸಂಜೆ 5 ಗಂಟೆ 31 ನಿಮಿಷದವರೆಗೂ ಜಾರಿಯಲ್ಲಿರುತ್ತದೆ. ಅದರಲ್ಲೂ ರಾಖಿ ಕಟ್ಟುವ ಶುಭ ಘಳಿಗೆ ಈ ಬಾರಿ ಯಾವ ಕಾಲದಲ್ಲಿದೆ ಅಂದರೆ ಮಧ್ಯಾಹ್ನ 1 ಗಂಟೆ 42 ನಿಮಿಷದಿಂದ ಸಂಜೆ 4 ಗಂಟೆ 18 ನಿಮಿಷದವರೆಗೂ ಇರುತ್ತದೆ.

ರಕ್ಷಾ ಶ್ಲೋಕವನ್ನು ಹೀಗೆ ಜಪಿಸಿ: ಯೇನ್ ಬುದ್ಧೌ ಬಲಿಃ ರಾಜಾ ದಾನವೇಂದ್ರ ಮಹಾಬಲ ತೇನ ತ್ವಾಮಪಿ ಬಧ್ರಾಮಿ ರಕ್ಷೆ ಮಾ ಚಲ್ ಮಾ ಚಲ್

ಈ ಶ್ಲೋಕದ ಅರ್ಥ ಹೀಗಿದೆ: ಸೋದರಿಯು ತನ್ನ ಸೋದರನ ಕಣಿಕಟ್ಟಿಗೆ ರಾಖಿ ಕಟ್ಟುತ್ತಾ ಹೇಳುವ ಈ ಮಂತ್ರದ ಪ್ರಕಾರ ಬಲಿ ಚಕ್ರವರ್ತಿಗೆ ರಾಖಿ ಕಟ್ಟಲಾಗಿತ್ತು. ಅದೇ ರಕ್ಷಾ ಸೂತ್ರವನ್ನು ಪ್ರಯೋಗಿಸಿ ಯಾವುದೇ ಸಂದರ್ಭದಲ್ಲೂ ವಿಚಲಿತಗೊಳ್ಳದೆ, ಧೈರ್ಯಗೆಡದೆ, ಧೃತಿಗೆಡದೆ ತನ್ನ ಸೋದರಿಯನ್ನು ರಕ್ಷಿಸಿಕೊಳ್ಳುವುದಾಗಿ ಹೇಳುವ ಪರಿಪಾಠವಿದು.

ರಾಖಿ ಹುಣ್ಣಿಮೆಯ ತಯಾರಿಯು ಸಂಭ್ರಮದಿಂದ ಮುಂಚಿತವಾಗಿಯೇ ಆರಂಭವಾಗುತ್ತದೆ. ಒಂದು ಬೆಳ್ಳಿ ತಟ್ಟೆಯಲ್ಲಿ ಕುಂಕುಮ, ಅಕ್ಷತೆ, ದೀಪ, ಸಿಹಿ ಮಿಠಾಯಿ ಮತ್ತು ಮುಖ್ಯವಾಗಿ ರಾಖಿ ತೆಗೆದಿರಿಸಿಕೊಳ್ಳಲಾಗುತ್ತದೆ. ಸೋದರನಿಗೆ ಹಣೆಗೆ ತಿಲಕವಿಟ್ಟು ಮುಂಗೈಗೆ ರಕ್ಷಾ ಸೂತ್ರವನ್ನು ಕಟ್ಟಲಾಗುತ್ತದೆ. ಆದಾದನಂತರ ಆರತಿ ಎತ್ತಲಾಗುತ್ತದೆ. ಬಳಿಕ, ಮಿಠಾಯಿ ತಿನ್ನಿಸಲಾಗುತ್ತದೆ. ಆದಾದ ಮೇಲಿನದು ಮುಖ್ಯವಾಗುತ್ತದೆ. ರಾಖಿ ಕಟ್ಟಿಸಿಕೊಂಡ ಸಹೋದರ ತನ್ನ ಸಹೋದರಿಗೆ ಉಡುಗೊರೆ ನೀಡುತ್ತಾನೆ.

ಸೂಚನೆ: ಇಲ್ಲಿ ಪ್ರಸ್ತುತಪಡಿಸಿರುವ ಮಾಹಿತಿಯು ಧಾರ್ಮಿಕ ತಳಹದಿಯ ಮೇಲಿದೆ. ಇದು ಯಾವುದೇ ವೈಜ್ಞಾನಿಕ ಪ್ರಮಾಣೀಕೃತವಲ್ಲ. ಜನ ಪರಿಚಿತವಾದ ಆಶಯದಂತೆ ಇದನ್ನು ಸಾದರಪಡಿಸಲಾಗಿದೆ.

(Raksha Bandhan 2021 date shubh muhurat Raksha Bandhan significance in Kannada)

Published On - 6:28 am, Thu, 5 August 21