ರಾಮನಗರದಲ್ಲಿ ಕೆಂಡ ಹಾಯುವ ವೇಳೆ ಕೊಂಡಕ್ಕೆ ಬಿದ್ದ ಅರ್ಚಕ: ಗ್ರಾಮಸ್ಥರಿಂದ ರಕ್ಷಣೆ
ಗ್ರಾಮದ ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಕೊಂಡ ಕಾರ್ಯಕ್ರಮದಲ್ಲಿ ಅರ್ಚಕರು ದೊಡ್ಡಸ್ವಾಮಪ್ಪ ಕೊಂಡ ಹಾಯುವಾಗ ಕೊಂಡಕ್ಕೆ ಬಿದ್ದಿದ್ದು, ತಕ್ಷಣವೇ ಭಕ್ತರು ಕೊಂಡಕ್ಕೆ ಬಿದ್ದ ಅರ್ಚಕರನ್ನು ಮೇಲಕ್ಕೆ ಎತ್ತಿದ್ದಾರೆ.
ರಾಮನಗರ: ಕೆಂಡ ಹಾಯುವ ವೇಳೆ ಕೊಂಡಕ್ಕೆ ಅರ್ಚಕ ಬಿದ್ದ ಘಟನೆ ರಾಮನಗರ ಜಿಲ್ಲೆ ಗುಡಿಸರಗೂರು ಗ್ರಾಮದಲ್ಲಿ ನಡೆದಿದ್ದು, ಅರ್ಚಕರಾದ ದೊಡ್ಡಸ್ವಾಮಪ್ಪನಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಗ್ರಾಮದ ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಕೊಂಡ ಕಾರ್ಯಕ್ರಮದಲ್ಲಿ ಅರ್ಚಕರು ದೊಡ್ಡಸ್ವಾಮಪ್ಪ ಕೊಂಡ ಹಾಯುವಾಗ ಕೊಂಡಕ್ಕೆ ಬಿದ್ದಿದ್ದು, ತಕ್ಷಣವೇ ಭಕ್ತರು ಕೊಂಡಕ್ಕೆ ಬಿದ್ದ ಅರ್ಚಕರನ್ನು ಮೇಲಕ್ಕೆ ಎತ್ತಿದ್ದಾರೆ.
ಕಳೆದ ಹಲವು ವರ್ಷಗಳಿಂದ ಈ ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಕೊಂಡ ಹಾಯುವ ಕಾರ್ಯಕ್ರಮ ನಡೆದು ಬಂದಿದ್ದು, ಹಲವು ವರ್ಷಗಳಿಂದ ಅರ್ಚಕರಾದ ದೊಡ್ಡಸ್ವಾಮಪ್ಪನವರೇ ಕೊಂಡ ಹಾಯುತ್ತಿದ್ದರು. ಆದರೆ ಈ ಬಾರಿ ಇಂತಹ ಅಚಾತುರ್ಯ ನಡೆದಿದ್ದು ಸದ್ಯ ದೊಡ್ಡಬಸಪ್ಪನವರು ಚೆತರಿಸಿಕೊಳ್ಳುತ್ತಿದ್ದಾರೆ. ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.