ಕೋವಿಡ್- 19ರ ಎರಡನೇ ಅಲೆ ಎಷ್ಟು ಬೇಗ ತಡೆಯುತ್ತೇವೋ ಅದರ ಮೇಲೆ ಆಧಾರವಾಗಿದೆ ಭಾರತದ ಬೆಳವಣಿಗೆ: ಆರ್​ಬಿಐ

ಕೊರೊನಾ ಎರಡನೇ ಅಲೆಯನ್ನು ಎಷ್ಟು ವೇಗವಾಗಿ ತಡೆಯಲು ಸಾಧ್ಯವಾಗುತ್ತದೋ ಅದರ ಮೇಲೆ ಭಾರತದ ಬೆಳವಣಿಗೆ ಆಧಾರವಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಾರ್ಷಿಕ ವರದಿ ಹೇಳಿದೆ.

ಕೋವಿಡ್- 19ರ ಎರಡನೇ ಅಲೆ ಎಷ್ಟು ಬೇಗ ತಡೆಯುತ್ತೇವೋ ಅದರ ಮೇಲೆ ಆಧಾರವಾಗಿದೆ ಭಾರತದ ಬೆಳವಣಿಗೆ: ಆರ್​ಬಿಐ
ಆರ್​ಬಿಐ (ಸಾಂದರ್ಭಿಕ ಚಿತ್ರ)
Follow us
|

Updated on: May 27, 2021 | 2:10 PM

ಭಾರತವು ಕೋವಿಡ್- 19 ಎರಡನೇ ಅಲೆಯನ್ನು ಎಷ್ಟು ವೇಗವಾಗಿ ತಡೆಯುತ್ತದೆ ಎಂಬುದರ ಮೇಲೆ ದೇಶದ ಬೆಳವಣಿಗೆ ಆಧಾರವಾಗಿದೆ ಎಂದು ಗುರುವಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಕೊರೊನಾ ಮೊದಲ ಅಲೆಯಲ್ಲಿ ಈ ಮಟ್ಟದ ತನಕ ಆರ್ಥಿಕತೆ ಹೋಗಿರಲಿಲ್ಲ. ತಕ್ಷಣದ ಸ್ಥಿತಿಯಲ್ಲಿ ಸುತ್ತಮುತ್ತಲ ಅನಿಶ್ಚಿತತೆಯ ಕಾರಣಕ್ಕೆ ಇಳಿಕೆಯತ್ತ ದೂಡಿದೆ. “ಕೊರೊನಾ ಎರಡನೇ ಅಲೆಯಿಂದ ಭಾರತದ ಆರ್ಥಿಕತೆ ಮೇಲೆ ಪ್ರಭಾವ ಆಗಿದ್ದು, ಮತ್ತೊಂದು ಬಂಪರ್ ರಾಬಿ ಬೆಳೆಯ ಕಾರಣಕ್ಕೆ ಬೆಂಬಲ ಸಿಕ್ಕಿದಂತಾಗಿದೆ. ಇದರಿಂದಾಗಿ ಆರ್ಥಿಕತೆಯ ಹಲವು ವಲಯಗಳಲ್ಲಿ ಮಾರ್ಚ್​ ತನಕ ಚಲನೆ ಅದರಲ್ಲೂ ಹೌಸಿಂಗ್, ರಸ್ತೆ ನಿರ್ಮಾಣ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ವಲಯಕ್ಕೆ ಚೇತರಿಕೆಯನ್ನು ದೊರಕಿಸಿತು,” ಎಂದು ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.

ಕೋವಿಡ್- 19ನಿಂದ ಆರ್ಥಿಕ ಚೇತರಿಕೆಯು ಅತಿ ಮುಖ್ಯವಾಗಿ ಖಾಸಗಿ ಬೇಡಿಕೆ ಮೇಲೆ ಅವಲಂಬನೆ ಆಗಿದೆ. ಅದು ಕೂಡ ಅಲ್ಪಾವಧಿಯಲ್ಲಿ ಹೆಚ್ಚು ಬಳಕೆ ಪ್ರಮಾಣದಿಂದ ಆಗಿದ್ದು, ಇದಕ್ಕಾಗಿ ಹೂಡಿಕೆಯು ವೇಗ ಪಡೆದುಕೊಂಡಲ್ಲಿ ಚೇತರಿಕೆ ಸ್ಥಿರವಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ವಿವಿಧ ವಲಯಗಳಲ್ಲಿನ ಸುಧಾರಣೆ ಕ್ರಮಗಳು ಭಾರತದಲ್ಲಿ ಬೆಳವಣಿಗೆ ಸಾಧ್ಯತೆಯನ್ನು ಸುಸ್ಥಿರತೆ ಆಧಾರದಲ್ಲಿ ಹೆಚ್ಚಿಸಿತು. ಮುಖ್ಯವಾಗಿ ಈಕ್ವಿಟಿ ಮಾರುಕಟ್ಟೆ 2020ರ ಮಾರ್ಚ್​ನ ಕನಿಷ್ಠ ಮಟ್ಟದಿಂದ ಭಾರೀ ವೇಗದಲ್ಲಿ ಚೇತರಿಕೆ ಕಾಣಿಸಿಕೊಂಡಿತು.

ಅಂದಹಾಗೆ, ಭಾರತದಲ್ಲಿ ಹಣದುಬ್ಬರದ ನಿಯಂತ್ರಣಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇನ್ನು ಕೋವಿಡ್- 19 ಮೊದಲನೇ ಅಲೆಯಿಂದ ಚೇತರಿಸಿಕೊಳ್ಳುವ ಕಾಲಕ್ಕೆ ಎರಡನೇ ಅಲೆಯು ತೀಕ್ಷ್ಣವಾಗಿ ಪ್ರಭಾವ ಬೀರಿದ್ದರಿಂದ ಆರ್ಥಿಕತೆ ಬಗ್ಗೆ ಆತಂಕ ಹೆಚ್ಚಾಗಿದೆ. ಈಚೆಗಷ್ಟೇ ಆರ್​ಬಿಐನಿಂದ 99 ಸಾವಿರ ಕೋಟಿ ರೂಪಾಯಿಯನ್ನು ಸರ್ಕಾರಕ್ಕೆ ವರ್ಗಾವಣೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಇನ್ನು ದೇಶದ ಆರ್ಥಿಕ ಸ್ಥಿತಿಯ ಬಗ್ಗೆ ವಿವಿಧ ವಲಯಗಳಿಂದ ಆತಂಕ ವ್ಯಕ್ತವಾಗುತ್ತಲೇ ಇದೆ.

ಇದನ್ನೂ ಓದಿ: ಆರ್ಥಿಕತೆ ಮೇಲೆ ಕೋವಿಡ್- 19 ಪರಿಣಾಮ ಅಗಾಧ; ಈ ಬಿಕ್ಕಟ್ಟಿನ ನಂತರ ಜಗತ್ತು ಹೀಗಿರುವುದಿಲ್ಲ ಎಂದ ಪಿಎಂ ಮೋದಿ

(RBI in it’s annual report said that, India growth prospects depend on how fast covid-19 can arrest)

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ