ವಾಟ್ಸ್​ಆ್ಯಪ್​ ಹೂಡಿದ ಮೊಕದ್ದಮೆಗೆ ಕೇಂದ್ರ ಸರ್ಕಾರದ ಉತ್ತರ; ಬಳಕೆದಾರರಿಗೆ ತೊಂದರೆ ಕೊಡೋದಿಲ್ಲವೆಂದು ಹೇಳಿಕೆ ಬಿಡುಗಡೆ

ಕೇಂದ್ರಸರ್ಕಾರದ ಹೊಸ ಡಿಜಿಟಲ್​ ನಿಯಮಗಳು ಇಂದಿನಿಂದ ಜಾರಿಗೆ ಬರಲಿದೆ. ಆದರೆ ಈ ನಿಯಮಗಳು ನಮ್ಮ ಬಳಕೆದಾರರ ಗೌಪ್ಯತೆಯನ್ನು ಮುರಿಯುವಂತಿದೆ ಎಂದು ಆರೋಪಿಸಿ ವಾಟ್ಸ್​ಆ್ಯಪ್​ ದೆಹಲಿ ಹೈಕೋರ್ಟ್​ನಲ್ಲಿ ಕೇಸ್​ ದಾಖಲಿಸಿತ್ತು.

ವಾಟ್ಸ್​ಆ್ಯಪ್​ ಹೂಡಿದ ಮೊಕದ್ದಮೆಗೆ ಕೇಂದ್ರ ಸರ್ಕಾರದ ಉತ್ತರ; ಬಳಕೆದಾರರಿಗೆ ತೊಂದರೆ ಕೊಡೋದಿಲ್ಲವೆಂದು ಹೇಳಿಕೆ ಬಿಡುಗಡೆ
ವಾಟ್ಸ್​​ಆ್ಯಪ್​
Follow us
Lakshmi Hegde
|

Updated on: May 26, 2021 | 8:54 PM

ಕೇಂದ್ರ ಸರ್ಕಾರದ ಹೊಸ ಐಟಿ ನಿಯಮ (ಮಾಹಿತಿ-ತಂತ್ರಜ್ಞಾನ ನಿಯಮ)ಗಳ ವಿರುದ್ಧ ವಾಟ್ಸ್​ಆ್ಯಪ್​ ಹೂಡಿರುವ ಮೊಕದ್ದಮೆಗೆ ತಂತ್ರಜ್ಞಾನ ಸಚಿವಾಲಯ ಉತ್ತರ ನೀಡಿದ್ದು, ವಾಟ್ಸ್​ಆ್ಯಪ್​ ಸಂಸ್ಥೆಯ ಎದುರು ಭಾರತ ಪ್ರಸ್ತಾಪ ಮಾಡಿರುವ ಯಾವುದೇ ಕ್ರಮಗಳು ಅದರ ಬಳಕೆದಾರರ ಮೇಲೆ ಪರಿಣಾಮ ಬೀರುವಂಥದ್ದಲ್ಲ ಹಾಗೂ ವಾಟ್ಸ್​ಆ್ಯಪ್​​ ಈಗಿರುವ ಸಹಜ ಕಾರ್ಯಚಟುವಟಿಕೆ ಮೇಲೆಯೂ ಪ್ರಭಾವ ಬೀರುವುದಿಲ್ಲ ಎಂದು ಹೇಳಿದೆ. ವಾಟ್ಸ್​ಆ್ಯಪ್ ತನ್ನ ಬಳಕೆದಾರರ ಗೌಪ್ಯತೆ ದೃಷ್ಟಿಯಿಂದ ರೂಪಿಸಿರುವ ನಿಯಮಗಳನ್ನು ನಾವು ಗೌರವಿಸುತ್ತೇವೆ. ಅದನ್ನು ಉಲ್ಲಂಘಿಸುವ ಆಶಯ ನಮಗಿಲ್ಲ ಎಂದು ಹೇಳಿದೆ. ಹಾಗೇ, ಭಾರತದ ಸಮಗ್ರತೆ, ಯಾವುದೇ ರಾಜ್ಯಗಳ ಭದ್ರತೆ, ವಿದೇಶಗಳೊಂದಿಗಿನ ಸ್ನೇಹಕ್ಕೆ ಸಂಬಂಧಪಟ್ಟ ಅಪರಾಧಗಳು ನಡೆದಾಗ, ಅತ್ಯಾಚಾರ, ಲೈಂಗಿಕ ದೌರ್ಜನ್ಯದಂಥಹ ಪ್ರಕರಣಗಳು ನಡೆದಾಗ ವಾಟ್ಸ್​ಆ್ಯಪ್​ ಮೆಸೇಜ್​ಗಳಿಗೆ ಸಂಬಂಧಪಟ್ಟ ತನಿಖೆಯೂ ನಡೆಯುತ್ತದೆ. ಆ ಸಂದರ್ಭದಲ್ಲಿ ವಾಟ್ಸ್​ಆ್ಯಪ್​ ನಿರ್ದಿಷ್ಟ ಸಂದೇಶದ ಮೂಲವನ್ನು ಬಹಿರಂಗಪಡಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕೇಂದ್ರಸರ್ಕಾರದ ಹೊಸ ಡಿಜಿಟಲ್​ ನಿಯಮಗಳು ಇಂದಿನಿಂದ ಜಾರಿಗೆ ಬರಲಿದೆ. ಆದರೆ ಈ ನಿಯಮಗಳು ನಮ್ಮ ಬಳಕೆದಾರರ ಗೌಪ್ಯತೆಯನ್ನು ಮುರಿಯುವಂತಿದೆ ಎಂದು ಆರೋಪಿಸಿ ವಾಟ್ಸ್​ಆ್ಯಪ್​ ದೆಹಲಿ ಹೈಕೋರ್ಟ್​ನಲ್ಲಿ ಕೇಸ್​ ದಾಖಲಿಸಿತ್ತು. ಅದಕ್ಕೆ ಉತ್ತರಿಸಿರುವ ಕೇಂದ್ರ ಸರ್ಕಾರ ಈ ಮೇಲಿನ ಸ್ಪಷ್ಟನೆಯನ್ನು ನೀಡಿದೆ. ವಾಟ್ಸ್​ಆ್ಯಪ್​ ಬಳಕೆದಾರರ ಗೌಪ್ಯತೆಗೆ ಪ್ರಾಮುಖ್ಯತೆ ನೀಡುವಷ್ಟೇ, ರಾಷ್ಟ್ರೀಯ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಗೂ ಪ್ರಾಮುಖ್ಯತೆ ಕೊಡುವುದು ನಮ್ಮ ಜವಾಬ್ದಾರಿಯಾಗಿದೆ. ಆದರೆ ವಾಟ್ಸ್​​ಆ್ಯಪ್​ ಹೊಸ ನಿಯಮಗಳನ್ನು ಅನುಸರಿಸಲು ನಿರಾಕರಣೆ ಮಾಡುತ್ತಿರುವುದು ದುರದೃಷ್ಟ. ನಮ್ಮ ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಇದನ್ನೂ ಓದಿ: ನಿಮ್ಮ ವಾಟ್ಸ್​ಆ್ಯಪ್​ ಖಾತೆ ಡಿಲೀಟ್​ ಆಗಲಿದೆ; ಪೈರಸಿ ಸಿನಿಮಾ ಲಿಂಕ್​ ಕಳಿಸುವವರಿಗೆ ಛಾಟಿ ಬೀಸಿದ ಹೈಕೋರ್ಟ್

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್