AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ವಾಟ್ಸ್​ಆ್ಯಪ್​ ಖಾತೆ ಡಿಲೀಟ್​ ಆಗಲಿದೆ; ಪೈರಸಿ ಸಿನಿಮಾ ಲಿಂಕ್​ ಕಳಿಸುವವರಿಗೆ ಛಾಟಿ ಬೀಸಿದ ಹೈಕೋರ್ಟ್

Radhe Piracy Link: ಪೈರಸಿ ಸಿನಿಮಾದ ಲಿಂಕ್ ಫಾರ್ವರ್ಡ್​ ಮಾಡುವವರ ಖಾತೆಗಳನ್ನು ಮೊದಲು ಸಸ್ಪೆಂಡ್​ ಮಾಡಬೇಕು. ಮತ್ತೆ ತಪ್ಪು ಮುಂದುವರಿದರೆ ಖಾತೆಯನ್ನು ಶಾಶ್ವತವಾಗಿ ಡಿಲೀಟ್​ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ನಿಮ್ಮ ವಾಟ್ಸ್​ಆ್ಯಪ್​ ಖಾತೆ ಡಿಲೀಟ್​ ಆಗಲಿದೆ; ಪೈರಸಿ ಸಿನಿಮಾ ಲಿಂಕ್​ ಕಳಿಸುವವರಿಗೆ ಛಾಟಿ ಬೀಸಿದ ಹೈಕೋರ್ಟ್
ವಾಟ್ಸ್​ಆ್ಯಪ್​ - ಸಲ್ಮಾನ್​ ಖಾನ್​
ಮದನ್​ ಕುಮಾರ್​
|

Updated on: May 25, 2021 | 8:31 AM

Share

ಹಾಲಿವುಡ್​ನಿಂದ ಸ್ಯಾಂಡಲ್​ವುಡ್​ವರೆಗೆ ಎಲ್ಲ ಭಾಷೆಯ ಚಿತ್ರರಂಗಗಳಿಗೂ ಪೈರಸಿ ಎಂಬುದು ದೊಡ್ಡ ತಲೆ ನೋವು. ನೂರಾರು ಕೋಟಿ ರೂ. ಬಂಡವಾಳ ಹೂಡಿ, ನೂರಾರು ದಿನ ಕಷ್ಟಪಟ್ಟು ತಯಾರಿಸಿದ ಸಿನಿಮಾವನ್ನು ಕಳ್ಳರು ಪೈರಸಿ ಮಾಡಿಬಿಡುತ್ತಾರೆ. ಅದರಿಂದ ಸಾವಿರಾರು ಜನರ ಶ್ರಮ ನೀರಿನಲ್ಲಿ ಹೋಮ ಆದಂತೆ ಆಗುತ್ತದೆ. ಪೈರಸಿ ವಿರುದ್ಧ ಹೋರಾಡಲು ಕಠಿಣ ಕಾನೂನು ಇದ್ದರೂ ಕೂಡ ಅದರ ಹಾವಳಿ ನಿಂತಿಲ್ಲ. ಸ್ಟಾರ್​ ನಟರ ಸಿನಿಮಾಗಳು ಬಿಡುಗಡೆಯಾದ ಮೊದಲ ದಿನವೇ ಎಲ್ಲರ ಮೊಬೈಲ್​ಗೆ ಬಂದು ಬಿಡುತ್ತವೆ. ಈ ಆನ್​ಲೈನ್​ ಯುಗದಲ್ಲಂತೂ ಎಲ್ಲರೂ ಪೈರಸಿ ಲಿಂಕ್​ಗಳು ಶೇರ್​ ಮಾಡಿಕೊಳ್ಳಲು ಉತ್ಸಾಹ ತೋರಿಸುತ್ತಾರೆ. ಆದರೆ ಇನ್ಮುಂದೆ ಅಂಥ ತಪ್ಪು ಮಾಡಿದರೆ ವಾಟ್ಸ್​ಆ್ಯಪ್​ ಖಾತೆಯೇ ಡಿಲೀಟ್​ ಆಗಲಿದೆ.

ಬಹುಕೋಟಿ ವೆಚ್ಚದಲ್ಲಿ ತಯಾರಾದ, ಸಲ್ಮಾನ್​ ಖಾನ್​ ನಟನೆಯ ‘ರಾಧೆ: ಯುವರ್ ಮೋಸ್ಟ್​ ವಾಂಟೆಂಡ್​ ಭಾಯ್​’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ಈದ್​ ಹಬ್ಬದ ಪ್ರಯುಕ್ತ ಮೇ 13ರಂದು ಓಟಿಟಿಯಲ್ಲಿ ತೆರೆಕಂಡ ಆ ಚಿತ್ರವನ್ನು ಮೊದಲ ದಿನವೇ ಪೈರಸಿ ಮಾಡಲಾಯಿತು. ಪೈರಸಿ ಲಿಂಕ್​ಗಳನ್ನು ಅನೇಕರು ವಾಟ್ಸ್​ಆ್ಯಪ್​ ಮೂಲಕ ಫಾರ್ವರ್ಡ್​ ಮಾಡಿಕೊಂಡಿದ್ದಾರೆ. ಅಂಥ ತಪ್ಪು ಮಾಡಿದವರ ವಾಟ್ಸ್​ಆ್ಯಪ್​ ಖಾತೆಯನ್ನೇ ಸಸ್ಪೆಂಡ್​ ಮಾಡುವಂತೆ ದೆಹಲಿ ಹೈಕೋರ್ಟ್​ ಆದೇಶ ಹೊರಡಿಸಿದೆ.

ಪೈರಸಿ ಮಾಡುವುದು ಎಷ್ಟು ತಪ್ಪೋ, ಪೈರಸಿ ಸಿನಿಮಾದ ಲಿಂಕ್​ ಹರಡುವುದು ಕೂಡ ಅಷ್ಟೇ ತಪ್ಪು. ಪೈರಸಿ ಸಿನಿಮಾ ನೋಡುವುದು ಕೂಡ ಅಪರಾಧದ ಭಾಗವೇ ಆಗಿದೆ. ಹಾಗಾಗಿ ಇದರ ವಿರುದ್ಧ ‘ರಾಧೆ’ ಚಿತ್ರತಂಡ ಹೈಕೋರ್ಟ್​ ಮೆಟ್ಟಿಲೇರಿತ್ತು. ಪ್ರಕರಣವನ್ನು ಆಲಿಸಿರುವ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಪೈರಸಿ ಸಿನಿಮಾದ ಲಿಂಕ್ ಫಾರ್ವರ್ಡ್​ ಮಾಡುವವರ ವಾಟ್ಸ್​ಆ್ಯಪ್​ ಖಾತೆಗಳನ್ನು ಮೊದಲು ಸಸ್ಪೆಂಡ್​ ಮಾಡಬೇಕು. ಮತ್ತೆ ತಪ್ಪು ಮುಂದುವರಿದರೆ ಖಾತೆಯನ್ನು ಶಾಶ್ವತವಾಗಿ ಡಿಲೀಟ್​ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ವಾಟ್ಸ್​ಆ್ಯಪ್​ ಬಳಕೆದಾರರು intellectual property rights ಉಲ್ಲಂಘನೆ ಮಾಡುವಂತಿಲ್ಲ ಎಂಬ ನಿಯಮ ಇದೆ. ಇದರ ಆಧಾರದ ಮೇಲೆ ಕೋರ್ಟ್​ ತೀರ್ಪು ನೀಡಿದೆ. ಸಿನಿಮಾಗಳನ್ನು ಪೈರಸಿ ಮಾಡುವುದು ಕೂಡ intellectual property rights ಉಲ್ಲಂಘನೆಯೇ ಆಗಿರುವುದರಿಂದ ಪೈರಸಿ ಲಿಂಕ್​ ಫಾರ್ವರ್ಡ್​ ಮಾಡುವವರ ಖಾತೆಗಳನ್ನು ಅಮಾನತುಗೊಳಿಸಬೇಕು ಎಂದು ಆದೇಶ ಹೊರಡಿಸಿದೆ. ಹಾಗಾಗಿ, ಪೈರಸಿ ಸಿನಿಮಾ ಲಿಂಕ್​ ಉಚಿತವಾಗಿ ಸಿಕ್ಕಿದೆ ಎಂದ ಕೂಡಲೇ ಅದನ್ನು ಊರಿಗೆಲ್ಲ ಫಾರ್ವರ್ಡ್​ ಮಾಡುವವರು ಇನ್ನುಂದೆ ವಾಟ್ಸ್​ಆ್ಯಪ್ ಖಾತೆ ಹೊಂದುವ ಆಸೆಯನ್ನು ಬಿಟ್ಟುಬಿಡುವುದು ಒಳಿತು.

ಇದನ್ನೂ ಓದಿ:

ಥಿಯೇಟರ್​ನಲ್ಲಿ ಬಹುಕೋಟಿ ಬಾಚುತ್ತಿದ್ದ ಸಲ್ಮಾನ್​ ಖಾನ್​ ಈಗ ರಾಧೆ ಚಿತ್ರದಿಂದ ಮೊದಲ ದಿನ ಗಳಿಸಿದ್ದು ಬರೀ 10 ಸಾವಿರ

ಲಾಕ್​ಡೌನ್​ ನಿಯಮ ಮೀರಿದ್ರೆ ರಾಧೆ ಚಿತ್ರವನ್ನು ಪದೇಪದೇ ತೋರಿಸಲಾಗುತ್ತದೆ; ಬೆಂಗಳೂರು ಸಿಟಿ ಪೊಲೀಸ್​ ಹೀಗೆ ಟ್ವೀಟ್​ ಮಾಡಿದ್ದು ನಿಜವೇ?

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು