AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಾಬ್​ಗೆ ಪಂಚ್​ ಕೊಡೋಕೆ ಕೊಹ್ಲಿ ಡ್ರೆಸ್ಸಿಂಗ್ ರೂಮ್​ನಲ್ಲಿ ಹೆಣೆದಿರೋ ತಂತ್ರವೇನು?

ಮರಳುಗಾಡಿನ ಐಪಿಎಲ್ ಮಹಾಯುದ್ಧದಲ್ಲಿ ಗೆಲುವಿನ ಶುಭಾರಂಭ ಮಾಡಿರೋ ಕೊಹ್ಲಿ ಬಾಯ್ಸ್, ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ. ಮೊದಲ ಪಂದ್ಯದಲ್ಲೇ ಸನ್ ರೈಸರ್ಸ್ ಸದೆಬಡಿದಿರೋ ಕೊಹ್ಲಿ ಗ್ಯಾಂಗ್, ಇಂದು ಕನ್ನಡಿಗರೇ ತುಂಬಿರೋ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಅದೃಷ್ಟ ಪರೀಕ್ಷೆಗಿಳಿಯುತ್ತಿದೆ. ಪಂದ್ಯಕ್ಕೂ ಮುನ್ನ ಕ್ಯಾಪ್ಟನ್ ಕೊಹ್ಲಿ, ಡ್ರೆಸ್ಸಿಂಗ್ ರೂಮ್​ನಲ್ಲಿ ಆರ್​ಸಿಬಿ ಆಟಗಾರರಿಗೆ ಸ್ಫೂರ್ತಿ ತುಂಬಿದ್ದಾರೆ. ಒಂದೇ ಒಂದು ಅವಕಾಶ ಇಡೀ ಪಂದ್ಯದ ದಿಕ್ಕು ಬದಲಿಸುತ್ತೆ. ಹೀಗಾಗಿ ಆ ಒಂದು ಅವಕಾಶವನ್ನ ನಾವು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಆಟಗಾರರಿಗೆ ಕಿವಿ ಮಾತು […]

ಪಂಜಾಬ್​ಗೆ ಪಂಚ್​ ಕೊಡೋಕೆ ಕೊಹ್ಲಿ ಡ್ರೆಸ್ಸಿಂಗ್ ರೂಮ್​ನಲ್ಲಿ ಹೆಣೆದಿರೋ ತಂತ್ರವೇನು?
ಆರ್​ಸಿಬಿ ತಂಡ
ಆಯೇಷಾ ಬಾನು
| Edited By: |

Updated on:Sep 24, 2020 | 9:12 AM

Share

ಮರಳುಗಾಡಿನ ಐಪಿಎಲ್ ಮಹಾಯುದ್ಧದಲ್ಲಿ ಗೆಲುವಿನ ಶುಭಾರಂಭ ಮಾಡಿರೋ ಕೊಹ್ಲಿ ಬಾಯ್ಸ್, ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ. ಮೊದಲ ಪಂದ್ಯದಲ್ಲೇ ಸನ್ ರೈಸರ್ಸ್ ಸದೆಬಡಿದಿರೋ ಕೊಹ್ಲಿ ಗ್ಯಾಂಗ್, ಇಂದು ಕನ್ನಡಿಗರೇ ತುಂಬಿರೋ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಅದೃಷ್ಟ ಪರೀಕ್ಷೆಗಿಳಿಯುತ್ತಿದೆ.

ಪಂದ್ಯಕ್ಕೂ ಮುನ್ನ ಕ್ಯಾಪ್ಟನ್ ಕೊಹ್ಲಿ, ಡ್ರೆಸ್ಸಿಂಗ್ ರೂಮ್​ನಲ್ಲಿ ಆರ್​ಸಿಬಿ ಆಟಗಾರರಿಗೆ ಸ್ಫೂರ್ತಿ ತುಂಬಿದ್ದಾರೆ. ಒಂದೇ ಒಂದು ಅವಕಾಶ ಇಡೀ ಪಂದ್ಯದ ದಿಕ್ಕು ಬದಲಿಸುತ್ತೆ. ಹೀಗಾಗಿ ಆ ಒಂದು ಅವಕಾಶವನ್ನ ನಾವು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಆಟಗಾರರಿಗೆ ಕಿವಿ ಮಾತು ಹೇಳಿದ್ದಾರೆ.

ಬ್ಯಾಟಿಂಗ್ ವಿಭಾಗದಲ್ಲಿ ಆರ್​ಸಿಬಿ ಸಾಮರ್ಥ್ಯವನ್ನ ಪ್ರಶ್ನೆ ಮಾಡೋ ಹಾಗಿಲ್ಲ. ಕನ್ನಡಿಗ ದೇವದತ್ ಪಡಿಕ್ಕಲ್ ಚೊಚ್ಚಲ ಪಂದ್ಯದಲ್ಲೇ ದಾಖಲೆ ವೀರನಾಗಿ ಹೊರ ಹೊಮ್ಮಿದ್ದಾರೆ. ಌರೋನ್ ಫಿಂಚ್ ಡೀಸೆಂಟ್ ಓಪನಿಂಗ್ ನೀಡ್ತಿದ್ರೆ, ಎಬಿ.ಡಿವಿಲಿಯರ್ಸ್ ಸಾಲಿಡ್ ಫಾರ್ಮ್​ನಲ್ಲಿದ್ದಾರೆ. ಆದ್ರೆ ನಾಯಕ ಕೊಹ್ಲಿ ವಿರಾಟ ರೂಪ ತೋರಿಸೊ ಅಗತ್ಯವಿದೆ.

ಪ್ರತಿ ಸೀಸನ್​ನಲ್ಲೂ ಆರ್​ಸಿಬಿ ಬೌಲಿಂಗ್ ವೈಫಲ್ಯತೆಯನ್ನ ಅನುಭವಿಸುತ್ತಿತ್ತು. ಆದ್ರೆ ಈ ಸೀಸನ್​ನಲ್ಲಿ ಆ ಸಮಸ್ಯೆ ಎದುರಾಗಿಲ್ಲ. ವೇಗಿಗಳ ವಿಭಾಗದಲ್ಲಿ ಡೇಲ್ ಸ್ಟೇನ್, ನವದೀಪ್ ಸೈನಿ, ಆಲ್​ರೌಂಡರ್ ಶಿವಂ ದುಬೆ ಸಾಲಿಡ್ ಸ್ಪೆಲ್ ಮಾಡಿದ್ರೆ, ಸ್ಪಿನ್ ಕೋಟಾದಲ್ಲಿ ಚಹಲ್ ಮ್ಯಾಚ್ ವಿನ್ನಿಂಗ್ ಸ್ಪೆಲ್ ಮಾಡುತ್ತಿದ್ದಾರೆ.

ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಫಸ್ಟ್ ಕ್ಲಾಸ್ ಆಗಿರೋ ಕೊಹ್ಲಿ ಹುಡುಗ್ರು, ಫೀಲ್ಡಿಂಗ್​ನಲ್ಲಿ ಅಷ್ಟೇನು ಚುರುಕಾಗಿಲ್ಲ. ಹೈದ್ರಾಬಾದ್ ವಿರುದ್ಧ ಬೆರಿಸ್ಟೋ ನೀಡಿದ ಮೂರು ಕ್ಯಾಚ್ ಕೈ ಚೆಲ್ಲಿ ಸೋಲಿನಂಚಿಗೆ ಬಂದು ಮುಟ್ಟಿದ್ರು.

ಮೊದಲ ಪಂದ್ಯದಲ್ಲೇ ಸೋಲು.. ಸಿಡಿದೇಳುತ್ತಾ ಪಂಜಾಬ್? ಇನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ಆಡಿದ ಮೊದಲ ಪಂದ್ಯದಲ್ಲೇ ಡೆಲ್ಲಿ ವಿರುದ್ಧ ಮುಗ್ಗರಿಸಿದೆ. ಸಹಜವಾಗೇ ಆರ್​ಸಿಬಿ ವಿರುದ್ಧದ ಪಂದ್ಯ ರಾಹುಲ್ ಹುಡುಗರಿಗೆ ಒತ್ತಡ ಹೆಚ್ಚಾಗುವಂತೆ ಮಾಡಿದ್ರೂ, ಕೊಹ್ಲಿ ಪಡೆ ಅದೇ ವೀಕ್ನೆಸ್ ಅಂದುಕೊಳ್ಳಬಾರದು. ಮೊದಲ ಪಂದ್ಯದ ಗೆಲುವು ಆರ್​ಸಿಬಿ ಆಟಗಾರರ ಜೋಷ್ ಹೆಚ್ಚಿಸಿದೆ. ಅತ್ತ ಕನ್ನಡಿಗರಿಂದ ತುಂಬಿರೋ ಪಂಜಾಬ್ ಸೋಲಿನ ನೋವಿನಲ್ಲಿದೆ. ಹೀಗಾಗಿ ಪಂಜಾಬ್ ಗೆಲ್ಲಲೇಬೇಕು ಅಂತಾ ಕಣಕ್ಕಿಳಿದ್ರೆ, ಆರ್​ಸಿಬಿ ಮತ್ತೊಂದು ಗೆಲುವಿನ ನಿರೀಕ್ಷೆಯೊಂದಿಗೆ ಹೋರಾಡಲಿದೆ. ಹೀಗಾಗಿ ಇಂದು ದುಬೈ ಮೈದಾನ ರಣರಂಗವಾಗೋದ್ರಲ್ಲಿ ಅನುಮಾನವೇ ಇಲ್ಲ.

Published On - 9:08 am, Thu, 24 September 20