ಕೊರೊನಾ ನಿಯಮ: ದೆಹಲಿಯಲ್ಲೇ ಸುರೇಶ್ ಅಂಗಡಿ ಅಂತ್ಯಕ್ರಿಯೆ, 20 ಮಂದಿಗೆ ಮಾತ್ರ ಅವಕಾಶ
[lazy-load-videos-and-sticky-control id=”NiFkDMAHpgg”] ದೆಹಲಿ: ಸರಳ, ಸಜ್ಜನ ರಾಜಕಾರಣಿ, ಅಜಾತಶತ್ರು ಅಂತಲೇ ಕರೆಸಿಕೊಳ್ತಿದ್ದ ರೈಲ್ವೆ ಇಲಾಖೆ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರು ನಿನ್ನೆ ರಾತ್ರಿ ಕೊರೊನಾಗೆ ಬಲಿಯಾಗಿದ್ದಾರೆ. ಸುರೇಶ್ ಅಂಗಡಿಯವರ ನಿಧನದ ಸುದ್ದಿ ಬೆಳಗಾವಿಗೆ ಬರಸಿಡಿಲಿನಂತೆ ಬಂದೆರಗಿದ್ದು, ಪ್ರತಿಯೊಬ್ಬರೂ ಶಾಕ್ ಆಗಿದ್ದಾರೆ. ಸುರೇಶ್ ಅಂಗಡಿ ಪುತ್ರಿ ದೆಹಲಿಗೆ ಬಂದ ಬಳಿಕ ಅಂತ್ಯಸಂಸ್ಕಾರ ನಡೆಸಲಾಗುತ್ತೆ. ಅಂತ್ಯಕ್ರಿಯೆಯಲ್ಲಿ ಕೇವಲ 20 ಜನರು ಮಾತ್ರ ಭಾಗಿಯಾಗುವ ಸಾಧ್ಯತೆ ಇದೆ. ಕೊವಿಡ್ ಮುಂಜಾಗ್ರತಾ ಕ್ರಮಗಳೊಂದಿಗೆ ಅಂಗಡಿ ಅಂತ್ಯಕ್ರಿಯೆ ನಡೆಯುತ್ತೆ. ಬಾಳಯ್ಯ ಗುರುಗಳ ಸಮ್ಮುಖದಲ್ಲಿ […]

[lazy-load-videos-and-sticky-control id=”NiFkDMAHpgg”]
ದೆಹಲಿ: ಸರಳ, ಸಜ್ಜನ ರಾಜಕಾರಣಿ, ಅಜಾತಶತ್ರು ಅಂತಲೇ ಕರೆಸಿಕೊಳ್ತಿದ್ದ ರೈಲ್ವೆ ಇಲಾಖೆ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರು ನಿನ್ನೆ ರಾತ್ರಿ ಕೊರೊನಾಗೆ ಬಲಿಯಾಗಿದ್ದಾರೆ. ಸುರೇಶ್ ಅಂಗಡಿಯವರ ನಿಧನದ ಸುದ್ದಿ ಬೆಳಗಾವಿಗೆ ಬರಸಿಡಿಲಿನಂತೆ ಬಂದೆರಗಿದ್ದು, ಪ್ರತಿಯೊಬ್ಬರೂ ಶಾಕ್ ಆಗಿದ್ದಾರೆ.
ಸುರೇಶ್ ಅಂಗಡಿ ಪುತ್ರಿ ದೆಹಲಿಗೆ ಬಂದ ಬಳಿಕ ಅಂತ್ಯಸಂಸ್ಕಾರ ನಡೆಸಲಾಗುತ್ತೆ. ಅಂತ್ಯಕ್ರಿಯೆಯಲ್ಲಿ ಕೇವಲ 20 ಜನರು ಮಾತ್ರ ಭಾಗಿಯಾಗುವ ಸಾಧ್ಯತೆ ಇದೆ. ಕೊವಿಡ್ ಮುಂಜಾಗ್ರತಾ ಕ್ರಮಗಳೊಂದಿಗೆ ಅಂಗಡಿ ಅಂತ್ಯಕ್ರಿಯೆ ನಡೆಯುತ್ತೆ. ಬಾಳಯ್ಯ ಗುರುಗಳ ಸಮ್ಮುಖದಲ್ಲಿ ಅಂತಿಮ ವಿಧಿವಿಧಾನ ನಡೆಯಲಿದ್ದು, ಈಗಾಗಲೇ ಬೆಳಗಾವಿಯಿಂದ ದೆಹಲಿಗೆ ಗುರುಗಳು ಪ್ರಯಾಣ ಬೆಳೆಸಿದ್ದಾರೆ. ಜೊತೆಗೆ ಅಂಗಡಿ ಕುಟುಂಬಸ್ಥರು ದೆಹಲಿಯತ್ತ ಹೊರಟಿದ್ದಾರೆ.

Published On - 9:52 am, Thu, 24 September 20




