DCM ಲಕ್ಷಣ ಸವದಿ ಕ್ಷೇತ್ರದಲ್ಲಿ ಇದೆಂಥ ಅಂತ್ಯಸಂಸ್ಕಾರ..

| Updated By: ಸಾಧು ಶ್ರೀನಾಥ್​

Updated on: Jul 04, 2020 | 12:14 PM

ಬೆಳಗಾವಿ: ರಾಜ್ಯದಲ್ಲಿ ಸೋಂಕಿತರ ಅಂತ್ಯಕ್ರಿಯೆ ವೇಳೆ ಆಡಳಿತವು ಸಾಕಷ್ಟು ಎಡವಟ್ಟುಗಳನ್ನು ಮಾಡಿವೆ. ಇದರ ಬೆನ್ನಲ್ಲೇ ಡಿಸಿಎಂ‌ ಲಕ್ಷಣ ಸವದಿ ತವರು ಕ್ಷೇತ್ರವಾದ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಇಂಥದ್ದೇ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.  ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 54 ವರ್ಷದ ಕೊರೊನಾ ಶಂಕಿತನನ್ನ ಕಳೆದ ನಾಲ್ಕು ದಿನಗಳ ಹಿಂದೆ ಅಥಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಆತ ಸಾವನ್ನಪ್ಪಿದ್ದ ಎಂದು ತಿಳಿದುಬಂದಿದೆ. ಈ ವೇಳೆ ಶಂಕಿತನ ಅಂತ್ಯಕ್ರಿಯೆ ಮಾಡಲು ಮುಂದಾಗದ ಆಸ್ಪತ್ರೆ ಸಿಬ್ಬಂದಿ […]

DCM ಲಕ್ಷಣ ಸವದಿ ಕ್ಷೇತ್ರದಲ್ಲಿ ಇದೆಂಥ ಅಂತ್ಯಸಂಸ್ಕಾರ..
Follow us on

ಬೆಳಗಾವಿ: ರಾಜ್ಯದಲ್ಲಿ ಸೋಂಕಿತರ ಅಂತ್ಯಕ್ರಿಯೆ ವೇಳೆ ಆಡಳಿತವು ಸಾಕಷ್ಟು ಎಡವಟ್ಟುಗಳನ್ನು ಮಾಡಿವೆ. ಇದರ ಬೆನ್ನಲ್ಲೇ ಡಿಸಿಎಂ‌ ಲಕ್ಷಣ ಸವದಿ ತವರು ಕ್ಷೇತ್ರವಾದ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಇಂಥದ್ದೇ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

 ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 54 ವರ್ಷದ ಕೊರೊನಾ ಶಂಕಿತನನ್ನ ಕಳೆದ ನಾಲ್ಕು ದಿನಗಳ ಹಿಂದೆ ಅಥಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಆತ ಸಾವನ್ನಪ್ಪಿದ್ದ ಎಂದು ತಿಳಿದುಬಂದಿದೆ. ಈ ವೇಳೆ ಶಂಕಿತನ ಅಂತ್ಯಕ್ರಿಯೆ ಮಾಡಲು ಮುಂದಾಗದ ಆಸ್ಪತ್ರೆ ಸಿಬ್ಬಂದಿ ಪೋಸ್ಟ್ ಮಾರ್ಟ್ಂ ಮಾಡಿ ನೇರವಾಗಿ ಶವವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಿ ಕೈತೊಳೆದುಕೊಂಡಿದ್ದಾರೆ.

ಕೊನೆಗೆ, ತಮ್ಮ ಸ್ವಂತ ಹಣದಲ್ಲೇ PPE ಕಿಟ್​ಗಳನ್ನ ಖರೀದಿಸಿದ ಕುಟುಂಬಸ್ಥರು ಬೆಡ್​ಶೀಟ್​ನಲ್ಲೇ ಮೃತದೇಹವನ್ನ ಹೊತ್ತೊಯ್ದು ನಿನ್ನೆ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿಸಿದರು. ಈ ಮಧ್ಯೆ ಹ್ಯಾಂಡ್ ಗ್ಲೌಸ್ ಕೂಡ ಧರಿಸದೆ ಕೆಲ ಸಂಬಂಧಿಗಳು ಸಹ ಭಾಗಿಯಾದರು. ಆದರೆ, ಆರೋಗ್ಯ ಅಧಿಕಾರಿಗಳು ಇತ್ತ ಸುಳಿಯಲೇ ಇಲ್ಲ ಎಂದು ಮೃತನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.