ಕೊವಿಡ್-19 ಹಾಗೂ ಲಾಕ್ಡೌನ್ ಕಾರಣದಿಂದ ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇನ್ನೇನು ಸ್ವಲ್ಪವೇ ಚೇತರಿಕೆ ಕಾಣಬೇಕು ಎಂಬಷ್ಟರಲ್ಲಿ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಇಂಧನ ದರ ಹೆಚ್ಚಳವಾಗುವ ಮೂಲಕ ಉಳಿದ ದಿನಬಳಕೆಯ ಸಾಮಾಗ್ರಿ ಲೆಕ್ಕಾಚಾರವು ಏರುಪೇರಾಗಿದೆ. ಹೀಗಾಗಿ ಮನೆ, ಸಂಸಾರ ಸಂಭಾಳಿಸುವುದು ಕಷ್ಟ ಎಂಬಂತಾಗಿದೆ. ಈ ನಡುವೆ ಮೊಬೈಲ್ ಫೋನ್, ಅಂತರ್ಜಾಲ ಬಳಸುವವರು ಫೋನ್ಗೆ ರಿಚಾರ್ಜ್ ಮಾಡಿಸಲು ಕಷ್ಟಪಡುವುದಿದೆ. ಫೋನ್ ಇಲ್ಲದವರು ಈಗ ಯಾರೂ ಇಲ್ಲವೇನೋ. ಫೋನ್ ರಿಚಾರ್ಜ್ ಮಾಡುವುದು ಎಲ್ಲರಿಗೂ ಅನಿವಾರ್ಯ.
ಪ್ರತಿ ತಿಂಗಳು ರಿಚಾರ್ಜ್ ಮಾಡಿ ಮಾಡಿ ಬೇಸತ್ತು ಹೋಗುವ ಬದಲು ಈ ಮಾರ್ಗವನ್ನು ನೀವು ಅನುಸರಿಸಬಹುದಾಗಿದೆ. ಹೊಸ ಫೋನ್, ಸಿಮ್ ಖರೀದಿಸುವವರಿಗೂ ಇಲ್ಲೊಂದು ಆಫರ್ ಇದೆ. ಬಳಕೆದಾರರಿಗೆ ವಿಧವಿಧದ ಆಫರ್ಗಳನ್ನು ನೀಡಿ ಟೆಲಿಕಾಮ್ ವಿಭಾಗದಲ್ಲಿ ಸಂಚಲನ ಮೂಡಿಸಿದ್ದ ರಿಲಯನ್ಸ್ ಜಿಯೋ ಈಗ ಹೊಸ ಆಫರ್ನ್ನು ಪರಿಚಯಿಸಿದೆ. ವರ್ಷಕ್ಕೆ ಒಂದು ಬಾರಿ ರಿಚಾರ್ಜ್ ಮಾಡಿಸಿಕೊಂಡರೆ ಬಳಿಕ ವರ್ಷಪೂರ್ತಿ ತಲೆಕೆಡಿಸಿಕೊಳ್ಳದೆ, ಆರಾಮಾಗಿರಬಹುದು.
ಕಂಪೆನಿಯ ಮಾಹಿತಿ ಪ್ರಕಾರ, ಜಿಯೋ ನೀಡುವ ಆಫರ್ ನಿನ್ನೆಯಿಂದ (ಮಾರ್ಚ್ 1) ಆರಂಭವಾಗಿದೆ. ಈ ಆಫರ್ನಂತೆ ಗ್ರಾಹಕರು ₹ 1,999ಕ್ಕೆ ಹೊಸ ಫೋನ್ ಪಡೆಯಬಹುದಾಗಿದೆ. ಜತೆಗೆ ಎರಡು ವರ್ಷಗಳಿಗೆ ಅನ್ಲಿಮಿಟೆಡ್ ಕರೆ ಮಾಡುವ ಸೌಲಭ್ಯವನ್ನು ಜಿಯೋ ನೀಡಲಿದೆ. ಇಷ್ಟೇ ಅಲ್ಲದೆ ಹೆಚ್ಚಿನ ಆಫರ್ಗಳನ್ನೂ ಬಳಕೆದಾರರು ಪಡೆಯಬಹುದಾಗಿದೆ. ಅವುಗಳು ಯಾವುವು ಎಂದು ವಿವರಿಸಲಾಗಿದೆ.
₹ 1,999 ಜಿಯೋಫೋನ್ ಖರೀದಿಸಿದರೆ ಉಳಿದದ್ದೆಲ್ಲವೂ ಉಚಿತ
ಈ ಆಫರ್ ಜಿಯೋದ ಹೊಸ ಬಳಕೆದಾರರಿಗೆ ಮಾತ್ರ ಲಭ್ಯವಿರಲಿದೆ. ಗ್ರಾಹಕರು ಮೊದಲ ಬಾರಿಗೆ ಜಿಯೋಫೋನ್ ಖರೀದಿಸಿದರೆ ಕೆಲ ಆಫರ್ಗಳು ಸಿಗಲಿವೆ. ಅನ್ಲಿಮಿಟೆಡ್ ಕರೆ ಸೌಲಭ್ಯ ಮತ್ತು ತಿಂಗಳಿಗೆ 2GB ಡಾಟಾ ಲಭ್ಯವಾಗಲಿದೆ.
₹ 1499 ಫೋನ್ನೊಂದಿಗೆ 1 ವರ್ಷ ಎಲ್ಲವೂ ಉಚಿತ
ಈ ಆಫರ್ ಕೂಡ ಜಿಯೋದ ಹೊಸ ಗ್ರಾಹಕರಿಗೆ ಮಾತ್ರ ಸಿಗಲಿದೆ. ಹೊಸದಾಗಿ ₹ 1499 ಜಿಯೋ ಫೋನ್ ಖರೀದಿ ಮಾಡಿದವರಿಗೆ ಅನ್ಲಿಮಿಟೆಡ್ ಕಾಲ್ ಸೌಲಭ್ಯ ಮತ್ತು ತಿಂಗಳಿಗೆ 2GB ಹೈ ಸ್ಪೀಡ್ ಡಾಟಾ ಸೇವೆ ಸಿಗಲಿದೆ.
₹ 749 ಆಕರ್ಷಕ ಆಫರ್ಗಳು
ಈ ಆಫರ್ ಈಗಾಗಲೇ ಜಿಯೋಫೋನ್ ಗ್ರಾಹಕರಾದವರಿಗೂ ಲಭ್ಯವಾಗಲಿದೆ. ಈ ಪ್ಲಾನ್ನಂತೆ ಅನ್ಲಿಮಿಟೆಡ್ ಕರೆ, ತಿಂಗಳಿಗೆ 2GB ಹೈ ಸ್ಪೀಡ್ ಡಾಟಾ ಲಭ್ಯವಾಗಲಿದೆ. 749₹ಗೆ ಒಂದು ವರ್ಷದ ಅವಧಿಗೆ ಈ ಸೇವೆ ಸಿಗಲಿದೆ. ಬಳಕೆದಾರರು ಈ ಎಲ್ಲಾ ಆಫರ್ಗಳನ್ನು ಎಲ್ಲಾ ರಿಲಯನ್ಸ್ ಹಾಗೂ ಜಿಯೋ ಸ್ಟೋರ್ಗಳಿಂದ ಪಡೆಯಬಹುದಾಗಿದೆ.
ಇದನ್ನೂ ಓದಿ: Debit Credit Card: ಆನ್ಲೈನ್ ಶಾಪಿಂಗ್ಗೆ ನೀವು ಕಾರ್ಡ್ ಬಳಸ್ತೀರಾ? ಮೋಸ ಆಗದಿರಲು ಹೀಗೆ ಮಾಡಿ
ಇದನ್ನೂ ಓದಿ: ಇಂಧನ ದರ ಏರಿಕೆ ಬಿಸಿ ತಡೆಯದೆ ಪೆಟ್ರೋಲ್ ಇಂಜಿನ್ ಬದಲು ಬ್ಯಾಟರಿ ಅಳವಡಿಕೆ! ಹೀಗೆ ಮಾಡಬಹುದೇ?
Published On - 5:48 pm, Tue, 2 March 21