ಕಡಿಮೆ ಬೆಲೆಯಲ್ಲಿ ಲ್ಯಾಪ್​​ಟಾಪ್​ ನೀಡಲಿದೆ ಜಿಯೋ! ಮಾರುಕಟ್ಟೆಯಲ್ಲಿ ಹೊಸ ಸಂಚಲನ

| Updated By: ಮದನ್​ ಕುಮಾರ್​

Updated on: Mar 11, 2021 | 4:54 PM

ಜಿಯೋ ಮೊಬೈಲ್​ ಕಡಿಮೆ ದರದಲ್ಲಿ ಮಾರುಕಟ್ಟೆಗೆ ಕಾಲಿಟ್ಟಿತ್ತು. ಆಗ, ಸಾಕಷ್ಟು ಮಂದಿ ಈ ಮೊಬೈಲ್​ ಖರೀದಿಗೆ ಆದ್ಯತೆ ನೀಡಿದ್ದರು. ಈಗ ಲ್ಯಾಪ್​ಟಾಪ್​ ಕೂಡ ಕಡಿಮೆ ದರದಲ್ಲಿ ಸಿಗುವ ಸುದ್ದಿ ಹೊರ ಬಿದ್ದಿರುವುದರಿಂದ ಜನರು ಸಾಕಷ್ಟು ಕಾತುರರಾಗಿ ಕಾಯುತ್ತಿದ್ದಾರೆ.

ಕಡಿಮೆ ಬೆಲೆಯಲ್ಲಿ ಲ್ಯಾಪ್​​ಟಾಪ್​ ನೀಡಲಿದೆ ಜಿಯೋ! ಮಾರುಕಟ್ಟೆಯಲ್ಲಿ ಹೊಸ ಸಂಚಲನ
ಜಿಯೋ 888 ರೂ. ಪ್ಲ್ಯಾನ್: ಜಿಯೋ ಪ್ರಿಪೇಯ್ಡ್ ಬಳಕೆದಾರರಿಗೆ 888 ರೂ. ಪ್ರಿಪೇಯ್ಡ್ ರೀಚಾರ್ಜ್ ಆಯ್ಕೆ ನೀಡಿದ್ದು, ಇದರ ವಾಲಿಡಿಟಿ 84 ದಿನಗಳು. ಈ ಪ್ಲ್ಯಾನ್​ನಲ್ಲೂ ಅನಿಯಮಿತ ಕರೆ ಹಾಗೂ ಪ್ರತಿ ದಿನ 2GB ಡೇಟಾ ಸಿಗಲಿದೆ. ಇನ್ನು ಬೋನಸ್ ಆಗಿ 5 ಜಿಬಿ 4 ಜಿ ಡೇಟಾವನ್ನು ಕೂಡ ನೀಡಲಿದೆ. ಅದರೊಂದಿಗೆ ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಉಚಿತ ಚಂದಾದಾರಿಕೆ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋನ್ಯೂಸ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋಕ್ಲೌಡ್ ಪ್ರವೇಶ ಪಡೆಯಬಹುದು.
Follow us on

ಮೊಟ್ಟ ಮೊದಲ ಬಾರಿಗೆ ಉಚಿತವಾಗಿ ಇಂಟರ್​ನೆಟ್​ ನೀಡುವ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದ ಕೀರ್ತಿ ರಿಲಯನ್ಸ್​ ಒಡೆತನದ ಜಿಯೋಗೆ ಸಲ್ಲುತ್ತದೆ. ನಂತರ ಕಡಿಮೆ ಬೆಲೆಯಲ್ಲಿ ಮೊಬೈಲ್​ ನೀಡುವ ಕೆಲಸವನ್ನು ಕೂಡ ಜಿಯೋ ಮಾಡಿತ್ತು. ಈಗ ಲ್ಯಾಪ್​​ಟಾಪ್​ ಕ್ಷೇತ್ರಕ್ಕೂ ಜಿಯೋ ಕಾಲಿಡಲು ಸಿದ್ಧತೆ ನಡೆಸಿದೆ! ಮೂಲಗಳ ಪ್ರಕಾರ, ಜಿಯೋ ಶೀಘ್ರವೇ ಕಡಿಮೆ ಬೆಲೆಯಲ್ಲಿ ಲ್ಯಾಪ್​​ಟಾಪ್​ ನೀಡಲಿದೆಯಂತೆ.

JioBook ಹೆಸರಿನಲ್ಲಿ ಲ್ಯಾಪ್​ಟಾಪ್​​ಅನ್ನು ಮಾರುಕಟ್ಟೆಗೆ ಬಿಡಲು ಜಿಯೋ ಮುಂದಾಗಿದೆ. ಈ ಲ್ಯಾಪ್​​ಟಾಪ್​ ಫೋರ್ಕ್ಡ್​​ ಆ್ಯಂಡ್ರಾಯ್ಡ್​ ಆಧರಿಸಿ ಸಿದ್ಧಗೊಳ್ಳುತ್ತಿದೆ. ಜಿಯೋ ಆ್ಯಪ್​ಗಳು ಇದರಲ್ಲಿ ಇನ್​ಬಿಲ್ಟ್​ ಆಗಿ ಸೇವ್​ ಆಗಿರುತ್ತವೆ. ಅಲ್ಲದೆ, 4G LTE ಕೂಡ ಈ ಲ್ಯಾಪ್​ಟಾಪ್​ಗೆ ಸಪೋರ್ಟ್​ ಆಗಲಿದೆ.

ಜಿಯೋ ಮೊಬೈಲ್​ ಕಡಿಮೆ ದರದಲ್ಲಿ ಮಾರುಕಟ್ಟೆಗೆ ಕಾಲಿಟ್ಟಿತ್ತು. ಆಗ, ಸಾಕಷ್ಟು ಮಂದಿ ಈ ಮೊಬೈಲ್​ ಖರೀದಿಗೆ ಮುಗಿಬಿದ್ದಿದ್ದರು. ಈಗ ಲ್ಯಾಪ್​ಟಾಪ್​ ಕೂಡ ಕಡಿಮೆ ದರದಲ್ಲಿ ಸಿಗುವ ಸುದ್ದಿ ಹೊರ ಬಿದ್ದಿರುವುದರಿಂದ ಜನರು ಸಾಕಷ್ಟು ಕಾತುರರಾಗಿ ಕಾಯುತ್ತಿದ್ದಾರೆ.

ಜಿಯೋ ಬುಕ್ ವಿಶೇಷತೆಗಳು ಹೀಗಿರಬಹುದೇ…
ಜಿಯೋ ಬುಕ್​ ಯಾವ ರೀತಿಯಲ್ಲಿ ಇರಬಹುದು, ಅದರ ವೈಶಿಷ್ಟ್ಯಗಳೇನು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಮೂಲಗಳ ಪ್ರಕಾರ, JioBook ಸ್ಕ್ರೀನ್​ 1,366×768 ರೆಸಲ್ಯೂಷನ್​ ಹೊಂದಿರಲಿದ್ದು, Qualcomm Snapdragon 665 ಎಸ್​ಒಸಿ ಇರಲಿದೆ. 2ಜಿಬಿ RAM 32 ಜಿಬಿ ಸ್ಟೋರೆಜ್​ ಅನ್ನು ಇದು ಹೊಂದಿರಲಿದೆ. ಇದರ ಜತೆಗೆ, ಲ್ಯಾಪ್​ಟಾಪ್​ನಲ್ಲಿ ಬ್ಲ್ಯೂಟೂತ್​ ಹಾಗೂ ವೈ-ಫೈ ಆಯ್ಕೆ ಕೂಡ ಸಿಗಲಿದೆ. ಈ ಲ್ಯಾಪ್​ಟಾಪ್​ನಲ್ಲಿ ಜಿಯೋಸ್ಟೋರ್​, ಜಿಯೋ ಮೀಟ್​, ಜಿಯೋ ಪೇಜ್​ಗಳು ಮೊದಲೇ ಇನ್​ಸ್ಟಾಲ್​ ಆಗಿರಲಿವೆ. ಇದರ ಜತೆಗೆ ಮೈಕ್ರೋಸಾಫ್ಟ್​ ಆ್ಯಪ್​ಗಳು ಕೂಡ ಇದರಲ್ಲಿ ಇನ್​ಸ್ಟಾಲ್​ ಮಾಡಿಕೊಳ್ಳಲು ಅವಕಾಶ ಇದೆ.

ಬೆಲೆ ವಿಚಾರಕ್ಕೆ ಬರುವುದಾದರೆ, ಈ ಲ್ಯಾಪ್​ಟಾಪ್​ಗಳು ಮಾರುಕಟ್ಟೆಗೆ ಕಡಿಮೆ ದರದಲ್ಲಿ ಸಿಗಲಿದೆ ಎಂಬ ಮಾಹಿತಿ ಅಷ್ಟೇ ಹೊರ ಬಿದ್ದಿದ್ದು, ಖಚಿತ ಬೆಲೆಯ ಬಗ್ಗೆ ತಿಳಿದಿಲ್ಲ. ಇದು ಯಾವಾಗ ಮಾರುಕಟ್ಟೆಗೆ ಬರುತ್ತದೆ ಎನ್ನುವ ಬಗ್ಗೆಯೂ ಸ್ಪಷ್ಟ ಚಿತ್ರಣವಿಲ್ಲ. ಕೊರೊನಾ ವೈರಸ್​ ಕಾಣಿಸಿಕೊಂಡ ನಂತರ ಲ್ಯಾಪ್​ಟಾಪ್​ಗೆ ಬೇಡಿಕೆ ಹೆಚ್ಚಿದೆ. ಮನೆಯಿಂದ ಕೆಲಸ ಮಾಡಲು, ವಿದ್ಯಾರ್ಥಿಗಳಿಗೆ ಆನ್​ಲೈನ್​ ಶಿಕ್ಷಣ ಪಡೆಯಲು ಲ್ಯಾಪ್​ಟಾಪ್​ ಬಳಕೆ ಆಗುತ್ತಿದೆ. ಇದನ್ನು, ಜಿಯೋ ಗಮನಿಸಿದ್ದು, ಆದಷ್ಟು ಬೇಗ ಈ ಕ್ಷೇತ್ರಕ್ಕೆ ಲಗ್ಗೆ ಇಡುವ ಆಲೋಚನೆ ಸಂಸ್ಥೆಯದ್ದು.

ಇದನ್ನೂ ಓದಿ: WhatsApp: ವಾಟ್ಸ್​ಆ್ಯಪ್ ಬಳಕೆದಾರರಿಗೆ ಸಿಹಿಸುದ್ದಿ; ಡೆಸ್ಕ್​ಟಾಪ್​ ಆ್ಯಪ್​ ಮೂಲಕವೂ ವಿಡಿಯೋ, ವಾಯ್ಸ್ ಕಾಲ್ ಸೌಲಭ್ಯ