ಬೆಂಗಳೂರು: ರಾಜ್ಯದಲ್ಲಿ ಮದರಸಾ ಶಾಲೆಗಳನ್ನು ಕೈಬಿಡಿ ಇಲ್ಲವೇ ಕೇಸರಿ ಶಾಲೆ ಆರಂಭಿಸಿ ಎಂದು ರಾಜ್ಯ ಕೇಸರಿ ಒಕ್ಕೂಟ ಹಾಗೂ ಹಿಂದೂ ಸಂಘಟನೆಗಳು ಸಚಿವರಿಗೆ ಮನವಿ ನೀಡಲು ಮುಂದಾಗಿದೆ. ಇದರಿಂದ ಶಿಕ್ಷಣ ಸಚಿವರಿಗೆ ಹಾಗೂ ಸರ್ಕಾರಕ್ಕೆ ಹೊಸ ತಲೆ ಬಿಸಿ ಶುರು ಮಾಡಿದ ಹಿಂದೂಪರ ಸಂಘಟನೆಗಳು. ರಾಜ್ಯದಲ್ಲಿ ಹಿಜಾಬ್ನಿಂದ ಶುರುವಾಗಿರುವ ಧರ್ಮ ದಂಗಲ್ ದಿನದಿಂದ ದಿನಕ್ಕೆ ಹೊಸ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಇದೀಗ ಕೇಸರಿ ಶಾಲೆ ಆರಂಭಿಸಬೇಕು ಎನ್ನುವ ಕೂಗು ಕೇಳಿಬರುತ್ತಿದೆ.
ಇನ್ನು ಕೇಸರಿ ಶಾಲೆಗಳು ಹೇಗಿರಬೇಕು ಎಂದು ಕೆಲ ಡಿಮ್ಯಾಂಡ್ ಮಾಡಿರುವ ಸಂಘಟನೆಗಳು, ಕೇಸರಿ ಶಾಲೆಗಳಲ್ಲಿ ಪ್ರತ್ಯೇಕ ಪಠ್ಯ ಇರಬೇಕು. ಪಠ್ಯ ಪುಸ್ತಕಗಳಲ್ಲಿ ಹಿಂದುತ್ವದ ಹಿನ್ನೆಲೆ ಇರುವ ಪಾಠಗಳು ಜೊತೆಗೆ ಹಿಂದುತ್ವದ ಹಿನ್ನೆಲೆ ಇರುವ ಪ್ರಾಧ್ಯಾಪಕರು ಇರಬೇಕು, ಕೇಸರಿ ಕಾಲೇಜಿಗೆ ಕೇಸರಿ ಬಣ್ಣ ಹಾಗೂ ಎಲ್ಲಾ ವಿದ್ಯಾರ್ಥಿಗಳು ಕೇಸರಿ ಬಣ್ಣದ ವೇಷಭೂಷಣದಲ್ಲಿ ಇರಬೇಕು, ಶಾಲೆಯಲ್ಲಿ ಎಲ್ಲಾ ಫೋಟೋಗಳು ಹಿಂದೂ ಧರ್ಮದ ಫೋಟೋಗಳೇ ಇರಬೇಕು.
ಇದನ್ನೂ ಓದಿ:ಉತ್ತರ ಪ್ರದೇಶ: ಹಿಂದೂ ಯುವಕರನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಇಬ್ಬರು ಮುಸ್ಲಿಂ ಯುವತಿಯರು!
ಈಗಾಗಲೇ ಕೆಲ ರಾಜ್ಯದಲ್ಲಿ ಮದರಸಾ ಬ್ಯಾನ್ ಮಾಡಿದ್ದಾರೆ. ಯುಪಿ,ಅಸ್ಸಾಂಗಳಲ್ಲಿ ಮದರಸಾಕ್ಕೆ ಬ್ರೇಕ್ ಹಾಕಿದ್ದಾರೆ. ನೀವು ಮದರಸಾಗಳನ್ನ ರಾಜ್ಯದಲ್ಲಿ ಕೈಬಿಡಬೇಕು ಇಲ್ಲವೇ ಮುಸ್ಲಿಂ ಸಮುದಾಯದವರಿಗೆ ಇರುವ ಹಾಗೆ ಹಿಂದೂ ರಾಷ್ಟ್ರ ಕಟ್ಟುವ ಪ್ರತ್ಯೇಕ ಕೇಸರಿ ಶಾಲಾ, ಕಾಲೇಜ್ ಬೇಕು. ನೀವು ಮದರಸಾಗಳನ್ನ ಬ್ಯಾನ್ ಮಾಡಿದರೆ ಸರಿ, ಇಲ್ಲವಾದರೆ ನಮಗೂ ರಾಜ್ಯದಲ್ಲಿ ಕೇಸರಿ ಶಾಲೆಗಳನ್ನ ನಿರ್ಮಾಣ ಮಾಡಿ ಕೊಡಿ. ಇಲ್ಲವಾದರೆ ರಾಜ್ಯಾದ್ಯಂತ ಕೇಸರಿ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ರಾಷ್ಟ್ರೀಯ ಕೇಸರಿ ಒಕ್ಕೂಟದ ರಾಜ್ಯಧ್ಯಕ್ಷ ಹರೀಶ್ ಎಚ್ಚರಿಕೆ ನೀಡಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ