VERY URGENT: ತನಗೊಂದು ಮನೆ ಬೇಕು ಎಂದು ಕ್ರಿಕೆಟಿಗ ಪಂತ್ ಟ್ವಿಟರ್ನಲ್ಲಿ ಏನು ಮಾಡಿದರು ನೋಡಿ..!
ನಾನು ಆಸ್ಟ್ರೇಲಿಯಾದಿಂದ ಬಂದಾಗಿನಿಂದ, ಹೊಸ ಮನೆ ತೆಗೆದುಕೊಳ್ಳುವಂತೆ ಕುಟುಂಬಸ್ಥರು ನನ್ನ ಹಿಂದೆ ಬಿದ್ದಿದ್ದಾರೆ. ಹೀಗಾಗಿ ಹೊಸ ಮನೆ ಖರೀದಿ ಮಾಡಲು ನನಗೆ ಗುರಗಾಂವ್ ಸರಿಯಾದ ಆಯ್ಕೆ ಎನಿಸುತ್ತದೆ.
ಆಸ್ಟ್ರೇಲಿಯಾ ಪ್ರವಾಸದ ನಂತರ ಭಾರತೀಯ ಬ್ಯಾಟ್ಸ್‌ಮನ್ ರಿಷಭ್ ಪಂತ್ ವಿಶ್ವಾಸಾರ್ಹ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ. ಆಸಿಸ್ ಸರಣಿಯಲ್ಲಿ ಪಂತ್ ಬ್ಯಾಟಿಂಗ್ನಲ್ಲಿ ತೋರಿದ ಅಬ್ಬರ, ಟೀಮ್ ಇಂಡಿಯಾವನ್ನು ಗೆಲುವಿನತ್ತ ಕೊಂಡೊಯ್ಯಿತು.
ಆದರೆ ಆಸಿಸ್ ನಾಡಲ್ಲಿ ಅಬ್ಬರಿಸಿ ತವರಿಗೆ ಹಿಂದಿರುಗಿದ ಪಂತ್ ಈಗ ಹೊಸ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ. ಭಾರತಕ್ಕೆ ವಾಪಾಸ್ಸಾಗಿರುವ ಪಂತ್ ಸದ್ಯ ತಮ್ಮ ಕುಟುಂಬದೊಂದಿಗೆ ಮನೆಯಲ್ಲಿ ಕಾಲ ಕಳೆಯುತ್ತಿದ್ದು, ಮನೆಯವರು ಕಾಟ ಕೊಡುತ್ತಿದ್ದಾರಂತೆ. ಇದರಿಂದ ಪಂತ್ ರೋಸಿ ಹೋಗಿದ್ದಾರೆ. ಈಗಾಗಿ ಪಂತ್ ಟ್ವಿಟ್ಟರ್ನಲ್ಲಿ ತಮಗಾಗುತ್ತಿರುವ ಹಿಂಸೆಗೆ ನೆಟ್ಟಿಗರ ಬಳಿ ಉಪಾಯ ಕೇಳಿದ್ದಾರೆ.
ನಾನು ಆಸ್ಟ್ರೇಲಿಯಾದಿಂದ ಬಂದಾಗಿನಿಂದ, ಹೊಸ ಮನೆ ತೆಗೆದುಕೊಳ್ಳುವಂತೆ ಕುಟುಂಬಸ್ಥರು ನನ್ನ ಹಿಂದೆ ಬಿದ್ದಿದ್ದಾರೆ. ಹೀಗಾಗಿ ಹೊಸ ಮನೆ ಖರೀದಿ ಮಾಡಲು ನನಗೆ ಗುರಗಾಂವ್ ಸರಿಯಾದ ಆಯ್ಕೆ ಎನಿಸುತ್ತದೆ. ಇದಲ್ಲದೆ ನಿಮ್ಮ ಬಳಿ ಯಾವೂದಾದರು ಬೇರೆ ಆಯ್ಕೆ ಇದ್ದರೆ ಹೇಳಿ ಎಂದು ಪಂತ್ ಅವರು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ಪಂತ್ ಅವರ ಈ ತಮಾಷೆಯ ಟ್ವೀಟ್‌ಗೆ ಅಭಿಮಾನಿಗಳು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡಿದ್ದು, ಕೆಲವರು ದೆಹಲಿಯಲ್ಲಿರಲು ಹೇಳಿದರೆ, ಇನ್ನೂ ಕೆಲವರು ಹೈದರಾಬಾದ್ನಲ್ಲಿ ತೆಗೆದುಕೊಳ್ಳಲು ಸಲಹೆ ನೀಡಿದ್ದಾರೆ. ಆದರೆ ಕೆಲವು ಅಭಿಮಾನಿಗಳು, ನಿಮಗೆ ಮನೆ ಹುಡುಕಿಕೊಡಲು ನಾವು ನಿಮ್ಮ ಸೇವಕರಲ್ಲ ಎಂದು ಪಂತ್ ಅವರ ಟ್ವೀಟ್‌ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
Jabse Australia se aaya hoon gharwale peeche pade hain ki naya ghar le lo ab. Gurgaon sahi rahega? Aur koi option hai toh batao.
— Rishabh Pant (@RishabhPant17) January 28, 2021
Published On - 2:39 pm, Thu, 28 January 21