ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ: ಕಬ್ಬು ಕಟಾವಿಗೆ ತೆರಳುತ್ತಿದ್ದ 6 ಮಂದಿ ಸಾವು
ಬೆಳಗಾವಿ: ಖಾನಾಪುರ ತಾಲೂಕಿನ ಇಟಗಿ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸೇತುವೆ ಮೇಲಿಂದ ಕಬ್ಬಿನ ಟ್ರ್ಯಾಕ್ಟರ್ ಉರುಳಿ ಬಿದ್ದು 7 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಬೋಗೂರು ಗ್ರಾಮದ ನಿವಾಸಿಗಳಾದ ತಂಗೆವ್ವ ಹುಣಸಿಕಟ್ಟಿ(55), ಅಶೋಕ್ ಕೇದಾರಿ(38), ಶಾಂತವ್ವ ಅಳಗೋಡಿ(65), ಗುಲಾಬಿ ಹುಣಸಿಕಟ್ಟಿ(35), ನಾಗವ್ವ ಮಾತೋಳೆ(38) ಹಾಗೂ ಶಾಂತವ್ವ ಜಿಂಝರೇ(63) ಮೃತ ದುರ್ದೈವಿಗಳು. ಮೃತರೆಲ್ಲರೂ ಬೋಗೂರು ಗ್ರಾಮದ ನಿವಾಸಿಗಳಾಗಿದ್ದು, ಬೋಗೂರ ಗ್ರಾಮದಿಂದ ಇಟಗಿಗೆ ಕಬ್ಬು ಕಟಾವು ಮಾಡಲು ತೆರಳುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿ ಇಟಗಿ-ಬೋಗೂರ ಗ್ರಾಮದ ಮಧ್ಯದ […]
ಬೆಳಗಾವಿ: ಖಾನಾಪುರ ತಾಲೂಕಿನ ಇಟಗಿ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸೇತುವೆ ಮೇಲಿಂದ ಕಬ್ಬಿನ ಟ್ರ್ಯಾಕ್ಟರ್ ಉರುಳಿ ಬಿದ್ದು 7 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಬೋಗೂರು ಗ್ರಾಮದ ನಿವಾಸಿಗಳಾದ ತಂಗೆವ್ವ ಹುಣಸಿಕಟ್ಟಿ(55), ಅಶೋಕ್ ಕೇದಾರಿ(38), ಶಾಂತವ್ವ ಅಳಗೋಡಿ(65), ಗುಲಾಬಿ ಹುಣಸಿಕಟ್ಟಿ(35), ನಾಗವ್ವ ಮಾತೋಳೆ(38) ಹಾಗೂ ಶಾಂತವ್ವ ಜಿಂಝರೇ(63) ಮೃತ ದುರ್ದೈವಿಗಳು.
ಮೃತರೆಲ್ಲರೂ ಬೋಗೂರು ಗ್ರಾಮದ ನಿವಾಸಿಗಳಾಗಿದ್ದು, ಬೋಗೂರ ಗ್ರಾಮದಿಂದ ಇಟಗಿಗೆ ಕಬ್ಬು ಕಟಾವು ಮಾಡಲು ತೆರಳುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿ ಇಟಗಿ-ಬೋಗೂರ ಗ್ರಾಮದ ಮಧ್ಯದ ಸೇತುವೆ ಮೇಲಿಂದ ಟ್ರ್ಯಾಕ್ಟರ್ ಉರುಳಿಬಿದ್ದಿದೆ. ಅಪಘಡದಲ್ಲಿ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಇಬ್ಬರು ಸಾವಿಗೀಡಾಗಿದ್ದಾರೆ.
ಅಪಘಾತದಲ್ಲಿ ಚಾಲಕ ಸೇರಿದಂತೆ 16 ಜನರಿಗೆ ಗಾಯಗಳಾಗಿದ್ದು, ನೀಲವ್ವ ಮುತ್ನಾಳ್ ಎಂಬುವರಿಗೆ ವೆಂಟಿಲೇಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳಿಗೆ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಖಾನಾಪುರ ಶಾಸಕಿ ಮತ್ತು ತಹಶೀಲ್ದಾರ್ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
Published On - 12:39 pm, Sat, 8 February 20