ನಿಲ್ದಾಣಕ್ಕೆ ಈಗತಾನೆ ಬಂದು ರೈಲು ನಿಲ್ಲುವ ವೇಳೆಯಲ್ಲಿ ಅವಸರ ಮಾಡಿ ವ್ಯಕ್ತಿ ಇಳಿಯಲು ಮುಂದಾಗಿದ್ದಾರೆ. ರೈಲಿನಿಂದ ಇಳಿಯಲು ಪ್ರಯತ್ನಿಸುವ ವೇಳೆ ಪ್ರಯಾಣಿಕ ಕೆಳಗೆ ಬಿದ್ದಿದ್ದಾರೆ. ಕೂದಲೆಳೆಯ ಅಂತರದಲ್ಲಿ ಪ್ರಯಾಣಿಕನ ಜೀವ ಉಳಿದಿದೆ. ಘಟನೆಯನ್ನು ಗಮನಿಸಿ ರೈಲು ಮೀಸಲು ಪಡೆ (ಆರ್ಪಿಎಫ್) ಪ್ರಯಾಣಿಕನ ಜೀವ ಉಳಿಸಿದ್ದಾರೆ.
ಘಟನೆ ಎರಡು ದಿನಗಳ ಹಿಂದೆ ಮುಂಬೈನ ಬೊರಿವಾಲಿ ರೈಲು ನಿಲ್ದಾಣದಲ್ಲಿ ನಡೆದಿದೆ. ಈಗತಾನೆ ರೈಲು ನಿಲ್ದಾಣಕ್ಕೆ ಬಂದು ನಿಧಾನವಾಗಿ ಚಲಿಸಬೇಕು ಅನ್ನುವಷ್ಟರಲ್ಲಿಯೇ ಪ್ರಯಾಣಿಕ ಕೆಳಗೆ ಇಳಿಯಲು ಪ್ರಯತ್ನಿಸಿದ್ದಾರೆ. ರೈಲು ಮತ್ತು ಪ್ಲಾಟ್ಫಾರಮ್ನ ಅಂಚಿಗೆ ಕಾಲು ಸಿಲುಕಿ ಕೆಳಗೆ ಬಿದ್ದಿದ್ದಾರೆ. ಹತ್ತಿರದಲ್ಲಿದ್ದ ಆರ್ಪಿಎಫ್ ಸಿಬ್ಬಂದಿ ತಕ್ಕಷಣವೇ ಓಡಿ ಬಂದು ಪ್ರಯಾಣಿಕನ ಜೀವ ಉಳಿಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
#WATCH | An RPF constable saved life of a passenger who fell while trying to get down from a running at Mumbai’s Borivali Railway Station on June 29. The passenger was dangerously close to the gap between the train & platform when the constable pulled him away: Central Railway pic.twitter.com/AVnYIwNQ7y
— ANI (@ANI) July 1, 2021
ವಿಡಿಯೋ ಇದೀಗ ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅವಸರವೇ ಅಪಘಾತಕ್ಕೆ ಕಾರಣ ಎಂಬಂತೆ ಯಾವಾಗಲೂ ವಾಹನದಲ್ಲಿ ಸಂಚರಿಸುವಾಗ ಅವಸರ ಮಾಡಬಾರದು ಎಂದು ನೆಟ್ಟಿಗರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅದೃಷ್ಟವಶಾತ್ ಪ್ರಯಾಣಕನ ಜೀವ ಉಳಿಯಿತು ಎಂದು ಇನ್ನೋರ್ವರು ಹೇಳಿದ್ದಾರೆ. ತಡಮಾಡದೇ ಬೇಗ ಬಂದು ಪ್ರಯಾಣಿಕನ ಜೀವ ಉಳಿಸಿದ್ದಕ್ಕಾಗಿ ಆರ್ಪಿಎಫ್ ಅಧಿಕಾರಿಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.
ಇದನ್ನೂ ಓದಿ:
ಹಾಯಾಗಿದೆ ಪ್ರಯಾಣವೆನ್ನುತ್ತಾ.. ಮೆಟ್ರೋ ರೈಲಿನಲ್ಲಿ ಮಂಗನ ಸ್ಟಂಟ್! ವಿಡಿಯೋ ನೋಡಿ‘
ಮೆಟ್ರೋ ಮೇಲ್ಸೇತುವೆ, ರೈಲು ಕುಸಿತ; 23 ಮಂದಿ ಸಾವು.. 50ಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಭೀರ