AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಗನ ಮುಟ್ಟಿರುವ ಖಾದ್ಯ ತೈಲಗಳ ಬೆಲೆ ನಿಯಂತ್ರಣಕ್ಕೆ ತರಲು ಸರ್ಕಾರದ ನಿರ್ಧಾರ, ಕಚ್ಚಾ ತೈಲಗಳ ಮೇಲೆ ತೆರಿಗೆ ಕಡಿತ

ಸಂಸ್ಕರಿಸಿದ ತಾಳೆ ಎಣ್ಣೆಯ ಬೆಲೆಯನ್ನು ಕಡಿಮೆ ಮಾಡಲು, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು (ಡಿಎಫ್​ಪಿಡಿ) ಆರ್​ಬಿಡಿ ಪಾಮೊಲೀನ್ ಮೇಲಿರುವ ಆಮದು ನಿರ್ಬಂಧವನ್ನು ಸಡಿಲಗೊಳಿಸಲು ಶಿಫಾರಸ್ಸು ಮಾಡಿದೆ.

ಗಗನ ಮುಟ್ಟಿರುವ ಖಾದ್ಯ ತೈಲಗಳ ಬೆಲೆ ನಿಯಂತ್ರಣಕ್ಕೆ ತರಲು ಸರ್ಕಾರದ ನಿರ್ಧಾರ, ಕಚ್ಚಾ ತೈಲಗಳ ಮೇಲೆ ತೆರಿಗೆ ಕಡಿತ
ಅಡುಗೆ ಎಣ್ಣೆಗಳು
ಅರುಣ್​ ಕುಮಾರ್​ ಬೆಳ್ಳಿ
|

Updated on: Jul 01, 2021 | 11:32 PM

Share

ನವದೆಹಲಿ: ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ತೀವ್ರ ಹೊರೆ ಎನಿಸುತ್ತಿರುವ ಖಾದ್ಯ ಎಣ್ಣೆಯ ಬೆಲೆ ಇನ್ನು ಮುಂದೆ ಕಡಿಮೆಯಾಗಲಿದೆ ಎಂದು ಮೂಲಗಳಿಂದ ಗೊತ್ತಾಗಿದೆ. ಜನರ ಬವಣೆಯನ್ನು ಅರ್ಥಮಾಡಿಕೊಂಡಂತಿರುವ ಸರ್ಕಾರ, ಕಚ್ಚಾ ತಾಳೆ ಎಣ್ಣೆ ಮೇಲಿನ ಸುಂಕವನ್ನು ತಗ್ಗಿಸುವ ನಿರ್ಧಾರ ತೆಗೆದುಕೊಂಡಿದೆ. ಹೆಚ್ಚುತ್ತಿರುವ ಹಣದುಬ್ಬರದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕಚ್ಚಾ ತಾಳೆ ಎಣ್ಣೆ ಮೇಲಿನ ತೆರಿಗೆಯನ್ನು ಶೇಕಡಾ 5 ರಷ್ಟು ಕಡಿಮೆ ಮಾಡಿದೆ. ‘ಕಳೆದೊಂದು ತಿಂಗಳ ಅವಧಿಯಲ್ಲಿ ಕಚ್ಚಾ ಖಾದ್ಯ ತೈಲ ಮತ್ತು ರಿಫೈನ್ಡ್ ತಾಳೆ ಎಣ್ಣೆಯ ಅಂತರರಾಷ್ಟ್ರೀಯ ದರ ಇಳಿಮುಖಗೊಂಡಿವೆ. ಆದರೆ ದೇಶೀಯ ಮಾರುಕಟ್ಟೆಯಲ್ಲಿ ತಾಳೆ ಎಣ್ಣೆ ಮತ್ತು ಕಚ್ಚಾ ಖಾದ್ಯ ತೈಲದ ದರ ಏರಿಕೆ ಹಂತದಲ್ಲೇ ಇದೆ. ಹಾಗಾಗಿ ಸರ್ಕಾರವು ಗ್ರಾಹಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಿಪಿಒ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿದೆ,’ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ತಿಳಿಸಿದೆ.

ಹಣಕಾಸು ಸಚಿವಾಲಯವು. ಜೂನ್ 29, 2021 ರಂದು ನೋಟಿಫಿಕೇಶನ್ ನಂ. 34/2021-ಕಸ್ಟಮ್ಸ್ ಮುಖಾಂತರ ಸಿಪಿಒ ಮೇಲಿನ ತೆರಿಗೆಯನ್ನು ಜೂನ್ 30, 2021 ರಿಂದ ಶೇಕಡಾ 15ರಿಂದ ಶೇಕಡಾ 15ಕ್ಕೆ ಇಳಿಸಿದ್ದು ಇದು ಸೆಪ್ಟಂಬರ್ 30, 2021 ರವರೆಗೆ ಜಾರಿಯಲ್ಲಿರುತ್ತದೆ.’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ತೆರಿಗೆ ಕಡಿತದ ನಂತರ ಸಿಪಿಒ ಮೆಲಿನ ತೆರಿಗೆ ದರ; ಹೆಚ್ಚುವರಿ ಕೃಷಿ ಸೆಸ್ ಮತ್ತು ಸಮಾಜ ಕಲ್ಯಾಣ ಸೆಸ್ ಶೇಕಡಾ 17.5 ಸೇರಿದಂತೆ ಶೇಕಡಾ 30.25 ಆಗಲಿದೆ. ಈ ಕಡಿತವು ಖಾದ್ಯ ತೈಲಗಳ ಚಿಲ್ಲರೆ ದರವನ್ನು ಕಡಿಮೆ ಮಾಡಲಿದ್ದು ತಗ್ಗಿದ ದರ ಸೆಪ್ಟಂಬರ್ 30ವರೆಗೆ ಜಾರಿಯಲ್ಲಿರುತ್ತದೆ.

ಸಂಸ್ಕರಿಸಿದ ತಾಳೆ ಎಣ್ಣೆಯ ಬೆಲೆಯನ್ನು ಕಡಿಮೆ ಮಾಡಲು, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು (ಡಿಎಫ್​ಪಿಡಿ) ಆರ್​ಬಿಡಿ ಪಾಮೊಲೀನ್ ಮೇಲಿರುವ ಆಮದು ನಿರ್ಬಂಧವನ್ನು ಸಡಿಲಗೊಳಿಸಲು ಶಿಫಾರಸ್ಸು ಮಾಡಿದೆ. ಹಾಗೆಯೇ, ಗ್ರಾಹಕರಿಗೆ ಸಂಸ್ಕರಿತ ತಾಳೆ ಎಣ್ಣೆ ಕಡಿಮೆ ದರಕ್ಕೆ ಸಿಗುವಂತಾಗಲು, ಇಲಾಖೆಯು ಅದನ್ನು ಬಹಿರಂಗ ಸಾಮಾನ್ಯ ವರ್ಗಕ್ಕೆ ಸೇರಿಸಿದೆ. ವಾಣಿಜ್ಯ ಇಲಾಖೆಯು ಜೂನ್ 30, 2021 ರಂದು ನೋಟಿಫಿಕೇಶನ್ ನಂ. 10/2015-2020 ಜಾರಿ ಮಾಡಿ ರಿಫೈನ್ಡ್ ಬ್ಲೀಚ್ಡ್ ಡಿಒಡೊರೈಸ್ಡ್ (ಆರ್​ಬಿಡಿ) ಪಾಮ್ ಎಣ್ಣೆ ಮತ್ತು ಆರ್​ಬಿಡಿ ಪಾಮೋಲೀನ್ ಎರಡನ್ನೂ ನಿರ್ಬಂಧಿತ ಉಚಿತ ಕಟೆಗೆರಿಯಿಂದ ತೆಗೆದು ಪರಿಷ್ಕೃತ ಆಮದು ನೀತಿಯನ್ನು ಜಾರಿಗೊಳಿದ್ದು ಇದು 31-12-2021 ರವರೆಗೆ ಜಾರಿಯಲ್ಲಿರುತ್ತದೆ.

ದರ ನಿಯಂತ್ರಣಕ್ಕೆ ತರಲು ಸರ್ಕಾರ ತೆಗೆದುಕೊಂಡಿರುವ ಇತರ ಕ್ರಮಗಳಲ್ಲಿ ಒಂದು ಹೊಸ ಪದ್ಧತಿಯನ್ನು ಜಾರಿಗೆ ತಂದಿದ್ದು ಇದು ಕಸ್ಟಮ್ಸ್ ಇಲಾಖೆಯ ನೋಡಲ್ ಕಚೇರಿಗಳು, ಎಫ್​ಎಸ್​ಎಸ್​ಎಐ, ಪ್ಲಾಂಟ್ ಕ್ವಾರಂಟೀನ್ ವಿಭಾಗ ಮೊದಲಾದವು ಆಹಾರ ಧಾನ್ಯ ಮತ್ತು ಕಚ್ಚಾ ತಾಳೆ ಎಣ್ಣೆಗಳು ಬಣದರುಗಳಿಂದ ಬೇಗ ಕ್ಲೀಯರನ್ಸ್ ಆಗುವುದನ್ನು ಮಾನಿಟರ್ ಮಾಡುತ್ತದೆ.

ಭಾರತದಲ್ಲಿ ಪ್ರಮುಖವಾಗಿ ಬಳಸಲಾಗುವ ಖಾದ್ಯ ತೈಲಗಳೆಂದರೆ ಸಾಸಿವೆ, ಸೋಯಾಬೀನ್, ಶೇಂಗಾ, ಸೂರ್ಯಾಕಾಂತಿ, ನೈಗರ್, ಸ್ಯಾಫ್ಲವರ್ ಸೀಡ್, ಔಡಲು ಮತ್ತು ಅಗಸೆ ಬೀಜಗಳ ಎಣ್ಣೆ, ಕೊಬ್ಬರಿ, ತಾಳೆ, ಹತ್ತಿಬೀಜ, ರೈಸ್ ಬ್ರಾನ್. ದ್ರಾವಕಗಳಿಂದ ಹೊರತೆಗೆದ ಎಣ್ಣೆ ಮತ್ತು ಅರಣ್ಯ ಮೂಲ ತೈಲ ಮೊದಲಾದವುಗಳು. ಖಾದ್ಯತೈಲಗಳ ದೇಶೀಯ ವಾರ್ಷಿಕ ಬೇಡಿಕೆ 250 ಎಲ್​ಎಮ್​ಟಿ ಆಗಿದೆ. ತನ್ನ ವಾರ್ಷಿಕ ಬೇಡಿಕೆಯ ಶೇಕಡಾ 60 ರಷ್ಟನ್ನು ಭಾರತ ಆಮದು ಮಾಡಿಕೊಳ್ಳುತ್ತದೆ. ದೇಶೀಯ ಮಾರುಕಟ್ಟೆಯಲ್ಲಿ ಖಾದ್ಯತೈಲಗಳ ಬೆಲೆ ಅಂತರರಾಷ್ಟ್ರೀಯ ಕಚ್ಚಾ ಎಣ್ಣೆ ಬೆಲೆಗಳ ಮೇಲೆ ಅವಲಂಬಿತವಾಗಿರುತ್ತದೆ.

‘ಖಾದ್ಯ ತೈಲಗಳಿಗೆ ಸಂಬಂಧಿಸಿದಂತೆ ಭಾರತವನ್ನು ‘ಆತ್ಮ ನಿರ್ಭರ್’ ಮಾಡುವುದು ನಮ್ಮ ಮಹತ್ವಾಕಾಂಕ್ಷೆಯ ಗುರಿಯಾಗಿದೆ ಮತ್ತು ವಿದೇಶಿ ವ್ಯಾಪಾರಕ್ಕೆ ಸಂಬಂಧಿಸಿದ ನೀತಿಗಳನ್ನು ಸರಿಹೊಂದಿಸುವ ಮೂಲಕ ಅಂದುಕೊಂಡಿರುವ ಗುರಿ ಸಾಧಿಸಲು ರಾಷ್ಟ್ರೀಯ ತೈಲಬೀಜಗಳ ಮಿಷನ್ ಬದ್ಧವಾಗಿದೆ. ಸರ್ಕಾರವು ಪ್ರತಿದಿನವೂ ಬೆಲೆಗಳನ್ನು ಮೇಲ್ವಿಚಾರಣೆ ಮಾಡಲಿದೆ ಮತ್ತು ಉದ್ಯಮವು ಸಂಪೂರ್ಣ ಪ್ರಯೋಜನಗಳನ್ನು ಗ್ರಾಹಕರಿಗೆ ವರ್ಗಾಯಿಸಲಿ ಎನ್ನುವುದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಇಚ್ಛೆಯಾಗಿದೆ,’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Labour Codes: ಹೊಸ ಕಾರ್ಮಿಕ ಕಾನೂನಿಂದ ಟೇಕ್ ಹೋಮ್ ವೇತನದಲ್ಲಿ ಇಳಿಕೆ; ಮಾಲೀಕರ ಪಿಎಫ್ ಕೊಡುಗೆ ಏರಿಕೆ

ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ