ಗೆಲುವಿಗಾಗಿ ಉರುಳು ಸೇವೆ: ರಾಜರಾಜೇಶ್ವರಿಯ ಸನ್ನಿಧಾನದಲ್ಲಿ ‘ಕೈ’ ಅಭ್ಯರ್ಥಿ ಕುಸುಮಾ ಪ್ರಾರ್ಥನೆ

  • TV9 Web Team
  • Published On - 18:19 PM, 26 Oct 2020
ಗೆಲುವಿಗಾಗಿ ಉರುಳು ಸೇವೆ: ರಾಜರಾಜೇಶ್ವರಿಯ ಸನ್ನಿಧಾನದಲ್ಲಿ ‘ಕೈ’ ಅಭ್ಯರ್ಥಿ ಕುಸುಮಾ ಪ್ರಾರ್ಥನೆ

ಬೆಂಗಳೂರು: ದಸರಾ ಹಬ್ಬದ ಪ್ರಯುಕ್ತವಾಗಿ ಹಾಗೂ ಮುಂಬರುವ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಲು ರಾಜರಾಜೇಶ್ವರಿನಗರ ಕ್ಷೇತ್ರದ ಕಾಂಗ್ರೆಸ್​​ ಅಭ್ಯರ್ಥಿ ಕುಸುಮಾ ಹನಮಂತರಾಯಪ್ಪ ಇಂದು ಉರುಳು ಸೇವೆ ನೆರವೇರಿಸಿದರು.

ಕ್ಷೇತ್ರದಲ್ಲಿರುವ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಇಂದು ಕುಸುಮಾ ತಮ್ಮ ಹರಕೆ ತೀರಿಸಿದರು. ತಮ್ಮ ಕುಟುಂಬದವರೊಂದಿಗೆ ಆಗಮಿಸಿದ ಕುಸುಮಾ ಉರುಳು ಸೇವೆ ಮಾಡುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.