‘ಸಿದ್ದರಾಮಯ್ಯ ಇಲ್ಲದೆ ಕಾಂಗ್ರೆಸ್ ಕಷ್ಟ ಪಡಬೇಕಾಗುತ್ತೆ.. ಇದು ರಿಯಾಲಿಟಿ’
ಬೆಂಗಳೂರು: ಕೊವಿಡ್ ಸೋಂಕಿನ ಬಳಿಕ ನಾಳೆಯಿಂದ ಚುನಾವಣಾ ಪ್ರಚಾರ ಮಾಡ್ತೀನಿ. ಶಿರಾದಲ್ಲಿ ನಾವು ಗೆಲ್ತೀವಿ. ರಾಜರಾಜೇಶ್ವರಿನಗರದಲ್ಲಿ ಫೈಟ್ ಇದೆ. ಆದರೂ, ಎರಡರಲ್ಲೂ ಗೆಲ್ತೀವಿ ಎಂದು ಮಾಜಿ ಸಚಿವ MB ಪಾಟೀಲ್ ಹೇಳಿದ್ದಾರೆ. ಉಪಚುನಾವಣೆ ಕಾಂಗ್ರೆಸ್ ಅಸ್ತಿತ್ವದ ಮಾನದಂಡವಲ್ಲ . ಇದು ಕಾಂಗ್ರೆಸ್ನಿಂದ ಹೋದವರ ಸರ್ಕಾರ ಆಗಿದೆ. ಬಿಜೆಪಿಯಲ್ಲಿ ಗೊಂದಲ ಇದೆ. ಕಾಂಗ್ರೆಸ್ ಒಗ್ಗಟ್ಟಾಗಿದೆ. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಎಲ್ಲರೂ ಪ್ರಚಾರ ಮಾಡ್ತಾಯಿದ್ದಾರೆ ಎಂದು ಪಾಟೀಲ್ ಹೇಳಿದರು. ಸಿಎಂ ಆಗಲು ನಾನು ಸೇರಿದಂತೆ ಎಲ್ಲರಿಗೂ ಅರ್ಹತೆ ಇದೆ. ಜಮೀರ್ […]

ಬೆಂಗಳೂರು: ಕೊವಿಡ್ ಸೋಂಕಿನ ಬಳಿಕ ನಾಳೆಯಿಂದ ಚುನಾವಣಾ ಪ್ರಚಾರ ಮಾಡ್ತೀನಿ. ಶಿರಾದಲ್ಲಿ ನಾವು ಗೆಲ್ತೀವಿ. ರಾಜರಾಜೇಶ್ವರಿನಗರದಲ್ಲಿ ಫೈಟ್ ಇದೆ. ಆದರೂ, ಎರಡರಲ್ಲೂ ಗೆಲ್ತೀವಿ ಎಂದು ಮಾಜಿ ಸಚಿವ MB ಪಾಟೀಲ್ ಹೇಳಿದ್ದಾರೆ. ಉಪಚುನಾವಣೆ ಕಾಂಗ್ರೆಸ್ ಅಸ್ತಿತ್ವದ ಮಾನದಂಡವಲ್ಲ . ಇದು ಕಾಂಗ್ರೆಸ್ನಿಂದ ಹೋದವರ ಸರ್ಕಾರ ಆಗಿದೆ. ಬಿಜೆಪಿಯಲ್ಲಿ ಗೊಂದಲ ಇದೆ. ಕಾಂಗ್ರೆಸ್ ಒಗ್ಗಟ್ಟಾಗಿದೆ. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಎಲ್ಲರೂ ಪ್ರಚಾರ ಮಾಡ್ತಾಯಿದ್ದಾರೆ ಎಂದು ಪಾಟೀಲ್ ಹೇಳಿದರು.
ಸಿಎಂ ಆಗಲು ನಾನು ಸೇರಿದಂತೆ ಎಲ್ಲರಿಗೂ ಅರ್ಹತೆ ಇದೆ. ಜಮೀರ್ ಪ್ರೀತಿಯಿಂದ ಸಿದ್ದರಾಮಯ್ಯ ಸಿಎಂ ಅಂದ್ರು, ಅದರಲ್ಲಿ ತಪ್ಪೇನಿಲ್ಲ. ಸಿದ್ದರಾಮಯ್ಯ ಪಕ್ಷದಲ್ಲಿ ಪ್ರಶ್ನಾತೀತ ನಾಯಕರು. ಸಿದ್ದರಾಮಯ್ಯ ಮಾಸ್ ಲೀಡರ್, ಅವರಿಂದ ಪಕ್ಷಕ್ಕೆ ಮತಗಳು ಬರುತ್ತೆ. ಸಿದ್ಧರಾಮಯ್ಯ ಒಂದು ಶಕ್ತಿ. ಸಿದ್ದರಾಮಯ್ಯ ಇಲ್ಲದೇ ಕಾಂಗ್ರೆಸ್ ಕಷ್ಟ ಪಡಬೇಕಾಗುತ್ತೆ. ಅಧಿಕಾರಕ್ಕೆ ಬರಲು ಸಿದ್ಧರಾಮಯ್ಯ ಬೇಕೇ ಬೇಕು, ಇದು ರಿಯಾಲಿಟಿ ಎಂದು ಮಾಜಿ ಸಚಿವ MB ಪಾಟೀಲ್ ಹೇಳಿದ್ದಾರೆ.
ಕಾಂಗ್ರೆಸ್ನಲ್ಲಿ ಎಂದೂ ಸಿಎಂ ಅಭ್ಯರ್ಥಿ ಘೋಷಣೆ ಮಾಡಿಲ್ಲ. ನಾನು ಸಿಎಂ ಆಗ್ತೀನಿ ಅಂದ ಮಾತ್ರಕ್ಕೆ ಸಿಎಂ ಆಗಲು ಸಾಧ್ಯವಿಲ್ಲ. ನಮ್ಮ ಪಕ್ಷ ಮೊದಲು ಅಧಿಕಾರಿಕ್ಕೆ ಬರಬೇಕು. ಆದರೆ, ನಾನು ಸಿಎಂ ಆಗಲು ಅರ್ಹತೆ ಹೊಂದಿದ್ದೀನಿ. ಆಸೆ ಪಡೋದ್ರಲ್ಲಿ ತಪ್ಪೇನು ಇಲ್ಲ ಎಂದು ಟಿವಿ9 ಗೆ MB ಪಾಟೀಲ್ ಹೇಳಿದರು.



