ಸಿನಿ ದುನಿಯಾದಲ್ಲಿ ಸದ್ಯ ಮಲ್ಟಿ ಸ್ಟಾರ್ ಸಿನಿಮಾಗಳು ಹೆಚ್ಚು ಗಮನ ಸೆಳೆಯುತ್ತಿವೆ. ಒಂದೇ ಸಿನಿಮಾದಲ್ಲಿ ತಮ್ಮ ತಮ್ಮ ನೆಚ್ಚಿನ ನಟನಟಿಯರನ್ನ ನೋಡೋಕೆ ಸಿನಿಮಾ ಅನೌನ್ಸ್ ಆದಾಗಿನಿಂದ್ಲೂ ಅಭಿಮಾನಿಗಳು ಬೆಳ್ಳಿ ಪರದೆ ಮೇಲೆ ಕಣ್ತುಂಬಿಕೊಳ್ಳೋವರೆಗೂ ಕಾದು ಕುಳಿತಿರ್ತಾರೆ.
ಆರಂಭದಿಂದ್ಲೇ ಸ್ಟಾರ್‌ಗಳೂ ಕೂಡ ತಮ್ಮ ಪಾತ್ರಕ್ಕೆ ಎಷ್ಟು ಇಂಪಾರ್ಟೆನ್ಸ್ ಇದೆ ಅನ್ನೋದನ್ನ ಲೆಕ್ಕ ಹಾಕಿಯೇ ಸಿನಿಮಾಗೆ ಸೈನ್ ಮಾಡಿರ್ತಾರೆ. ಸದ್ಯ ಟಾಲಿವುಡ್ ಹಾಗೂ ಕಾಲಿವುಡ್ ನಟಿಮಣಿಯರಾದ ಸಮಂತ ಹಾಗೂ ನಯನತಾರಾ ಒಂದೇ ಚಿತ್ರದಲ್ಲಿ ನಟಿಸ್ತಾರೆ ಅನ್ನೋ ಮಾತು ಕೇಳಿ ಬಂದಿತ್ತು.
ನಯನತಾರಾ ಬಾಯ್ ಫ್ರೆಂಡ್ ವಿಗ್ನೇಶ್ ಶಿವನ್ ಆ್ಯಕ್ಷನ್ ಕಟ್ ಹೇಳ್ತಿರೋ ಕಾತುವಕ್ಕಲು ರೆಂಡು ಕಾದಲ್ ಸಿನಿಮಾದಲ್ಲಿ ಸಮಂತ ಹಾಗೂ ನಯನತಾರಾ ನಟಿಸ್ತಾರೆ ಅನ್ನೋ ಮಾತು ಕೇಳಿ ಬಂದಿತ್ತು. ಈಗಾಗ್ಲೇ ಆಗಿರೋ ಮಾತು ಕಥೆ ಪ್ರಕಾರ ಇಬ್ಬರೂ ನಟಿಮಣಿಯರು ಕಥೆ ಕೇಳಿ ಪಾತ್ರಕ್ಕೂ ಓಕೆ ಅಂತ ಹೇಳಿದ್ರು. ಆದ್ರೀಗ ಕಾತುವಕ್ಕಲು ರೆಂಡು ಕಾದಲ್ ಸಿನಿಮಾದಿಂದ ಸಮಂತ ಹೊರ ನಡೆದಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ.
ಒಂದೇ ಚಿತ್ರದಲ್ಲಿ ನಟಿಸ್ತಿಲ್ಲ ಸಮಂತಾ, ನಯನತಾರಾ:
ಅಷ್ಟಕ್ಕೂ ಈ ಚಿತ್ರದಲ್ಲಿ ಸಮಂತಾ ಪಾತ್ರಕ್ಕೆ ಅಂದುಕೊಂಡಷ್ಟು ಪ್ರಾಮುಖ್ಯತೆ ಇಲ್ವಂತೆ. ಹೀಗಾಗಿ ಸಮಂತಾ ಆ ಸಿನಿಮಾದಿಂದ ಹೊರ ಬಂದಿದ್ದಾರೆ ಅನ್ನೋ ಮಾತು ಕೇಳಿಬರ್ತಿದೆ. ಆದ್ರೆ ಈ ಸುದ್ದಿ ಎಷ್ಟು ನಿಜ ಅನ್ನೋದನ್ನ ಚಿತ್ರತಂಡ ಅಧಿಕೃತವಾಗಿ ಕನ್ ಫರ್ಮ್ ಮಾಡಬೇಕಿದೆ. ಸದ್ಯ ಹರಿದಾಡ್ತಿರೋ ಮಾಹಿತಿ ಪ್ರಕಾರ ಸಮಂತಾ ಪಾತ್ರಕ್ಕೆ ನಟಿ ಕೀರ್ತಿ ಸುರೇಶ್ ಅಥವಾ ತ್ರಿಶಾರನ್ನ ಕರೆತರೋಕೆ ಚಿತ್ರತಂಡ ಫ್ಲ್ಯಾನ್ ಮಾಡ್ತಿದೆಯಂತೆ.
ಒಟ್ನಲ್ಲಿ ನಟರ ಮಸ್ಟಿ ಸ್ಟಾರ್ ಸಿನಿಮಾ ರೀತಿಯೇ ನಟಿಮಣಿಯರೂ ಒಂದಾಗಿ ಸಿನಿಮಾದಲ್ಲಿ ಅಭಿನಯಿಸ್ತಾರೆ ಅನ್ನೋದನ್ನ ಕೇಳಿ ಫುಲ್ ಖುಷಿಯಲ್ಲಿದ್ದ ಅಭಿಮಾನಿಗಳಿಗೆ ಈಗ ಈ ಸುದ್ದಿ ನಿರಾಸೆ ಮೂಡಿಸಿದೆ. ಹಾಗಾಗಿ ಕಾತುವಕ್ಕಲು ರೆಂಡು ಕಾದಲ್ ಚಿತ್ರದಲ್ಲಿ ಸಮಂತಾ ನಟಿ ಗಾಳಿ ಸುದ್ದಿಗೆ ಬ್ರೇಕ್ ಹಾಕ್ತಾರಾ. ಬೇರೆ ನಟಿ ಬಂದು ಕಮಾಲ್ ಮಾಡ್ತಾರಾ ಅನ್ನೋದು ಸದ್ಯದ ಕುತೂಹಲ.