ಶ್ರೀಗಂಧ ಬೆಳೆಗಾರರಿಂದ ಹೆದ್ದಾರಿ ಪ್ರಾಧಿಕಾರದ ಕಚೇರಿ ಮುಂದೆ ಪ್ರತಿಭಟನೆ

| Updated By: ಸಾಧು ಶ್ರೀನಾಥ್​

Updated on: Dec 18, 2020 | 5:04 PM

ಪರಿಶೀಲನೆಯ ಪ್ರಕಾರ ಒಟ್ಟು ಎರಡುವರೆ ಸಾವಿರ ಶ್ರೀಗಂಧ ಗಿಡಗಳಿಗೆ 60 ಕೋಟಿ ರೂ ನೀಡಬೇಕು. ರಸ್ತೆ ಪ್ರಾಧಿಕಾರದವರು ಒಂದು ಗಿಡಕ್ಕೆ ಕೇವಲ 283 ರೂ. ಕೊಡುತ್ತಿದ್ದಾರೆ ಎಂದು ಶ್ರೀಗಂಧ ಬೆಳೆಗಾರ ವಿಶುಕುಮಾರ್ ಆರೋಪಿಸಿದ್ದಾರೆ

ಶ್ರೀಗಂಧ ಬೆಳೆಗಾರರಿಂದ ಹೆದ್ದಾರಿ ಪ್ರಾಧಿಕಾರದ ಕಚೇರಿ ಮುಂದೆ ಪ್ರತಿಭಟನೆ
ಶ್ರೀಗಂಧ ಬೆಳೆಗಾರ ವಿಶುಕುಮಾರ್
Follow us on

ತುಮಕೂರು: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಂದು ಶ್ರೀಗಂಧ ಗಿಡಕ್ಕೆ ಕೇವಲ 283ರೂ ಕೊಡುತ್ತಿರುವುದನ್ನು ಖಂಡಿಸಿ ಚಿಕ್ಕಮಗಳೂರು ಜಿಲ್ಲೆ‌ ತರೀಕೆರೆಯ ಶ್ರೀಗಂಧ ಬೆಳೆಗಾರರು ತುಮಕೂರಿನ ಬಟವಾಡಿಯಲ್ಲಿರುವ ಕೇಂದ್ರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಪರಿಶೀಲನೆಯ ಪ್ರಕಾರ ಒಟ್ಟು ಎರಡುವರೆ ಸಾವಿರ ಶ್ರೀಗಂಧ ಗಿಡಗಳಿಗೆ 60 ಕೋಟಿ ರೂ ನೀಡಬೇಕು. ರಸ್ತೆ ಪ್ರಾಧಿಕಾರದವರು ಒಂದು ಗಿಡಕ್ಕೆ ಕೇವಲ 283 ರೂ. ಕೊಡುತ್ತಿದ್ದಾರೆ. ಪ್ರಾಜೆಕ್ಟ್ ಡೈರೆಕ್ಟರ್ ಶ್ರೀಶಾ ಗಂಗಾಧರ್ ನಮಗೆ ಪರಿಹಾರ ಕೊಡುತ್ತಿಲ್ಲ ಎಂದು ಶ್ರೀಗಂಧ ಬೆಳೆಗಾರ ವಿಶುಕುಮಾರ್ ಆರೋಪಿಸಿದ್ದಾರೆ. ಕಚೇರಿಯ ಮುಂದೆ ಶ್ರೀಗಂಧ ಬೆಳೆಗಾರರು ಒಟ್ಟುಗೂಡಿ ಅಡುಗೆ ಮಾಡೋ ಮೂಲಕ ಪ್ರತಿಭಟನೆ ನಡೆಸಿದ್ದಾರೆ.

10-15 ವರ್ಷದಿಂದ ಬೆಳೆದಿದ್ದ ಶ್ರೀಗಂಧ ಕಳವು, ರೈತರ ಕಣ್ಣೀರು..