ಕೊವಿಡ್​ ಅಸ್ಪತ್ರೆಗಳ ನೆಲದ ಮೇಲೆ ಸಾರ್ಸ್-ಕೊವ್-2 ವೈರಸ್ ಅಲ್ಲದಿದ್ದರೂ ಅದರ ಆನುವಂಶಿಕ ಸ್ವರೂಪ ಇರುತ್ತದೆ: ವರದಿ

ತಾವು ವೈರಸ್​ನ ಆನುವಂಶಿಕ ಸ್ವರೂಪವನ್ನು ನೆಲ ಮತ್ತು ಇತರ ಭಾಗಗಳಲ್ಲಿ ಪತ್ತೆ ಮಾಡಿರುವ ಹಿನ್ನೆಲೆಯಲ್ಲೇ ಅದಕ್ಕೆ ಜನರಲ್ಲಿ ಸೋಂಕು ಉಂಟುಮಾಡಲು ಸಾಧ್ಯವಾಗುತ್ತಿದೆ ಅಂತ ಭಾವಿಸಬಾರದೆಂದು ಸಂಶೋಧಕರು ಹೇಳಿದ್ದಾರೆ.

ಕೊವಿಡ್​ ಅಸ್ಪತ್ರೆಗಳ ನೆಲದ ಮೇಲೆ ಸಾರ್ಸ್-ಕೊವ್-2 ವೈರಸ್ ಅಲ್ಲದಿದ್ದರೂ ಅದರ ಆನುವಂಶಿಕ ಸ್ವರೂಪ ಇರುತ್ತದೆ: ವರದಿ
ಕೋವಿಡ್​​ ಆಸ್ಪತ್ರೆ
Follow us
| Edited By: Arun Kumar Belly

Updated on: Jun 12, 2021 | 6:33 PM

ಕೊವಿಡ್-19 ವ್ಯಾಧಿಯನ್ನು ಉಂಟು ಮಾಡುವ ‘ಸಾರ್ಸ್-ಕೊವ್-2’ ( SARS-CoV-2) ಸೋಂಕಿತರು ಚಿಕಿತ್ಸೆ ಪಡೆಯುವ ರೂಮಿನಲ್ಲಿ, ಬೆಡ್ ಮೇಲೆ, ಆ ರೂಮಿನ ನೆಲದ ಮೇಲೆ, ಅವರು ಬಳಸುವ ಬಾತ್​ರೂಮು ಮೊದಲಾದ ಕಡೆಗಳಲ್ಲೂ ಇರುತ್ತದೆ ಅನ್ನವುದನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಇದುವರೆಗೆ ವಿಜ್ಞಾನಿಗಳಾಗಲೀ, ಸಂಶೋಧಕರಾಗಲೀ ಯಾವ್ಯಾವ ಮೇಲ್ಮೈಗಳ ಮೇಲೆ ವೈರಸ್ ಇರೋದಿಕ್ಕೆ ಸಾಧ್ಯ ಅಂತ ಖಚಿತವಾಗಿ ಹೇಳಿರಲಿಲ್ಲ. ಆದರೆ ಮೈಕ್ರೊಬಯೋಮಿ ವೈದ್ಯಕೀಯ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯೊಂದು ‘ಸಾರ್ಸ್-ಕೊವ್-2 ವೈರಸ್ ಆಸ್ಪತ್ರೆಯ ನೆಲ ಮತ್ತು ಗೋಡೆಗಳ ಮೇಲೆ ಇರೋದನ್ನು ವಿವರಿಸುತ್ತದೆ.

ಸಂಶೋಧಕರು ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಮೊದಲು, ಅಲ್ಲಿ ಅವರು ಇರುವ ಅವಧಿ ಮತ್ತು ಡಿಸ್ಚಾರ್ಜ್ ಆದ ನಂತರ ಅವರ ಚರ್ಮ, ಮೂಗು ಮತ್ತು ಮಲದ ಸ್ಯಾಂಪಲ್​ಗಳನ್ನು ಪದೇಪದೆ ಸಂಗ್ರಹಿಸಿದ್ದಾರೆ. ಅವರ ಸ್ಯಾಂಪಲ್​ಗಳೊಂದಿಗೆ ಅವರಿಗೆ ಚಿಕಿತ್ಸೆ ನೀಡಿದ ಆರೋಗ್ಯ ಕಾರ್ಯಕರ್ತರ ಸ್ಯಾಂಪಲ್​ಗಳನ್ನೂ ಅವರು ಕಲೆಕ್ಟ್ ಮಾಡಿದ್ದಾರೆ. ವರದಿಯಲ್ಲಿ ಪ್ರಕಟವಾಗಿರುವ ಹಾಗೆ, ಎರಡು ತಿಂಗಳ ಕಾಲ ‘ಸಾರ್ಸ್-ಕೊವ್-2 ವೈರಸ್​ ಮತ್ತೆ ಮಾಡುವುದಕ್ಕೋಸ್ಕರ ಆಸ್ಪತ್ರೆಗೆ ಸಂಬಂಧಿಸಿದ 972 ಸ್ಯಾಂಪಲ್​ಗಳನ್ನು ಸಂಶೋಧಕರು ಸಂಗ್ರಹಿಸಿದ್ದರು.

ಸಂಶೋಧಕರು ಪರೀಕ್ಷೆಗಳನ್ನು ನಡೆಸಿ ವರದಿ ಮಾಡಿರುವ ಹಾಗೆ ವೈರಸ್ ಅಲ್ಲದಿದ್ದದರೂ ಅದರ ಆನುವಂಶಿಕ ಸ್ವರೂಪ ಪತ್ತೆಯಾಗಿದೆ. ಕೊವಿಡ್​ ರೋಗಿಗಳ ಬೆಡ್ ಪಕ್ಕದ ನೆಲದ ಮೇಲೆ (ಟೆಸ್ಟ್​ ಮಾಡಿದ ಶೇಕಡಾ 39 ಸ್ಯಾಂಪಲ್​ಗಳಲ್ಲಿ), ರೋಗಿಯ ರೂಮಿನ ಹೊರಗಿನ ನೆಲದ ಮೇಲೆ (ಟೆಸ್ಟ್​ ಮಾಡಿದ ಶೇಕಡಾ 29 ಸ್ಯಾಂಪಲ್​ಗಳಲ್ಲಿ) ಮತ್ತು ರೂಮಿನ ಒಳಭಾಗದ ನೆಲದ ಮೇಲೆ (ಟೆಸ್ಟ್​ ಮಾಡಿದ ಶೇಕಡಾ 16 ಸ್ಯಾಂಪಲ್​ಗಳಲ್ಲಿ) ವೈರಸ್ ಪತ್ತೆಯಾಗಿದೆ, ರೋಗಿಯಲ್ಲಿ ಸೋಂಕು ಕಾಣಿಸಿಕೊಂಡ ಮೊದಲ ಐದು ದಿನಗಳ ಅವದಧಿಯಲ್ಲಿ ವೈರಸ್​ನ ಪತ್ತೆ ಜಾಸ್ತಿಯಾಗಿತ್ತು ಎಂದು ಅವರ ಸಂಶೋಧನೆ ಹೇಳುತ್ತದೆ.

ತಾವು ವೈರಸ್​ನ ಆನುವಂಶಿಕ ಸ್ವರೂಪವನ್ನು ನೆಲ ಮತ್ತು ಇತರ ಭಾಗಗಳಲ್ಲಿ ಪತ್ತೆ ಮಾಡಿರುವ ಹಿನ್ನೆಲೆಯಲ್ಲೇ ಅದಕ್ಕೆ ಜನರಲ್ಲಿ ಸೋಂಕು ಉಂಟುಮಾಡಲು ಸಾಧ್ಯವಾಗುತ್ತಿದೆ ಅಂತ ಭಾವಿಸಬಾರದೆಂದು ಸಂಶೋಧಕರು ಹೇಳಿದ್ದಾರೆ.

ವಿಜ್ಞಾನಿಗಳು ಕೊರೋನಾ ವೈರಸ್ ಬಗ್ಗೆ ಸಂಶೋಧನೆ ಶುರು ಮಾಡಿದಾಗಿನಿಂದ ಈ ಸೋಂಕು ಮಾನವರ ನಡುವಿನ ಒಡನಾಟ, ಸಂಪರ್ಕದಿಂದ ಹರಡುತ್ತದೆ ಎಂದು ಹೇಳುತ್ತಾ ಬಂದಿದ್ದಾರೆ. ನೆಲದ ಮೇಲಾಗಲಿ ಅಥವಾ ಇನ್ಯಾವುದೇ ವಸ್ತುವಿನ ಮೇಲ್ಮೈಯಲ್ಲಿರಬಹುದಾದ ವೈರಸ್​ನಿಂದ ಸೋಂಕು ಹರಡೋದು ಬಹಳ ಅಪರೂಪ ಎಂದು ಅವರು ಹೇಳುತ್ತಾರೆ. ಅವರು ಸಂಶೋಧನೆಗಾಗಿ ಸ್ಯಾಂಪಲ್​ಗಳನ್ನು ಸಂಗ್ರಹಿಸಿ ಪರೀಕ್ಷೆಗಳನ್ನು ನಡೆಸಿದಾಗ, ರೋಗಿಗಳ ಆರೈಕೆಯಲ್ಲಿದ್ದವರ ಪೈಕಿ ಯಾರೊಬ್ಬರೂ ಸೋಂಕಿಗೊಳಗಾಗಲಿಲ್ಲ ಅನ್ನುವುದು ಪತ್ತೆಯಾಗಿದೆ.

ಈ ಅಧ್ಯಯನಕ್ಕಾಗಿ ಸಂಶೋಧಕರು ಕೇವಲ ಒಂದು ಆಸ್ಪತ್ರೆಯಿಂದ ಸ್ಯಾಂಪಲ್​ಗಳನ್ನು ಸಂಗ್ರಹಿಸಿದ್ದರು, ಅದರೆ ಅವರು ಹೇಳುವ ಪ್ರಕಾರ ಕೊವಿಡ್​ ಸೋಂಕಿನಿಂದ ಬಳಲುತ್ತಿರುವ ರೋಗಿಗಳನ್ನು ಆರೈಕೆ ಮಾಡುತ್ತಿರುವ ಯಾವುದೇ ಆಸ್ಪತ್ರೆಗಳ ನೆಲ ಮತ್ತು ಇತರ ವಸ್ತುಗಳು ಮೇಲ್ಮೈಗಳನ್ನು ಪರಿಕ್ಷಿಸಿದರೂ ಇದೇ ಬಗೆಯ ಫಲಿತಾಂಶಗಳು ಲಭ್ಯವಾಗಲಿವೆ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: Bribe for Corona Vaccine : ವ್ಯಾಕ್ಸಿನ್ ಹಾಕಲು 500 ರೂ. ಫಿಕ್ಸ್ .. ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಆರೋಗ್ಯ ಸಹಾಯಕಿ…

ತಾಜಾ ಸುದ್ದಿ
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ