ಬೆಳಗಾವಿ: ಜಾರಕಿಹೊಳಿ ಕುಟುಂಬ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ತೀವ್ರ ಜಿದ್ದಾಜಿದ್ದಿಯಿಂದ ಬೈ ಎಲೆಕ್ಷನ್ ಎದುರಿಸಿತ್ತು. ಇನ್ನೇನು ಡಿಸೆಂಬರ್ 9ರಂದು ಉಪಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಈ ಮಧ್ಯೆ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ.
ಬೈ ಎಲೆಕ್ಷನ್ ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರೋದು ಕಡಿಮೆ. ಮತ್ತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಹೊಂದಾಣಿಕೆ ಆಗುವುದು ಕಷ್ಟ ಎಂದು ಹೇಳಿದ್ದಾರೆ. ಜೊತೆಗೆ ನಮ್ಮ ಅಸ್ತಿತ್ವ ಮತ್ತು ಕ್ಷೇತ್ರ ಉಳಿಸಿಕೊಳ್ಳಲು ಫೈಟ್ ಮಾಡಿದ್ದೇವೆ ಎಂದೂ ಕೈ ಶಾಸಕ ಸತೀಶ್ ಹೇಳಿದ್ದಾರೆ.
ಇನ್ನು ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ.ಜಿ.ಪರಮೇಶ್ವರ್ ಪ್ರಚಾರಕ್ಕೆ ಬಾರದ ವಿಚಾರವಾಗಿ ಮಾತನಾಡಿರುವ ಅವರು ಪರಮೇಶ್ವರ್ ಐಟಿ ದಾಳಿ ವಿಚಾರದಲ್ಲಿ ಬ್ಯುಸಿಯಾಗಿದ್ದರು. ಖರ್ಗೆ ಮಹಾರಾಷ್ಟ್ರ ಸರ್ಕಾರ ರಚನೆಯಲ್ಲಿ ಬ್ಯುಸಿಯಿದ್ದರು. ಹೀಗಾಗಿ ಅವರು ಉಪಚುನಾವಣೆಯ ಪ್ರಚಾರಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.
Published On - 2:29 pm, Sat, 7 December 19