ಮದ್ಯಪ್ರಿಯರೇ ಎಚ್ರಾ.. ಕಲಬೆರಕೆ ಮದ್ಯ ಮಾರಾಟ, ಬಾಟಲಿಗಳು ಸೀಜ್! ಎಲ್ಲಿ?

ಕೊಡಗು: ವೈನ್ ಶಾಪ್​ನಲ್ಲಿ ಕಲಬೆರಕೆ ಮದ್ಯ ಮಾರಾಟ‌ ಮಾಡುತ್ತಿದ್ದ ವೈನ್ ಶಾಪ್ ಮಾಲೀಕನ ಕಳ್ಳಾಟ ಬಯಲಾಗಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆಯಲ್ಲಿರುವ ಲಕ್ಷ್ಮೀ ವೈನ್ಸ್‌ನಲ್ಲಿ ಕಲಬೆರಕೆ ಮದ್ಯ ಮಾರಾಟವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಮಾಹಿತಿ ಮೇರೆಗೆ ವಿರಾಜಪೇಟೆ ವಲಯ ಅಬಕಾರಿ ಇಲಾಖೆ ಅಧಿಕಾರಿ ಮೋಹನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಗೂ ಶಾಪ್‌ನಲ್ಲಿದ್ದ ಎಲ್ಲ ಮದ್ಯದ ಬಾಟಲ್‌ಗಳನ್ನು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಬಾಟಲ್‌ಗಳ ಸೀಲ್ ಓಪನ್ ಆಗಿರುವುದು ಪತ್ತೆಯಾಗಿದೆ. ಸೀಲ್ ಓಪನ್ […]

ಮದ್ಯಪ್ರಿಯರೇ ಎಚ್ರಾ.. ಕಲಬೆರಕೆ ಮದ್ಯ ಮಾರಾಟ, ಬಾಟಲಿಗಳು ಸೀಜ್! ಎಲ್ಲಿ?
Edited By:

Updated on: Nov 04, 2020 | 11:07 AM

ಕೊಡಗು: ವೈನ್ ಶಾಪ್​ನಲ್ಲಿ ಕಲಬೆರಕೆ ಮದ್ಯ ಮಾರಾಟ‌ ಮಾಡುತ್ತಿದ್ದ ವೈನ್ ಶಾಪ್ ಮಾಲೀಕನ ಕಳ್ಳಾಟ ಬಯಲಾಗಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆಯಲ್ಲಿರುವ ಲಕ್ಷ್ಮೀ ವೈನ್ಸ್‌ನಲ್ಲಿ ಕಲಬೆರಕೆ ಮದ್ಯ ಮಾರಾಟವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಮಾಹಿತಿ ಮೇರೆಗೆ ವಿರಾಜಪೇಟೆ ವಲಯ ಅಬಕಾರಿ ಇಲಾಖೆ ಅಧಿಕಾರಿ ಮೋಹನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಗೂ ಶಾಪ್‌ನಲ್ಲಿದ್ದ ಎಲ್ಲ ಮದ್ಯದ ಬಾಟಲ್‌ಗಳನ್ನು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಬಾಟಲ್‌ಗಳ ಸೀಲ್ ಓಪನ್ ಆಗಿರುವುದು ಪತ್ತೆಯಾಗಿದೆ. ಸೀಲ್ ಓಪನ್ ಮಾಡಿ ಕಲಬೆರಕೆ ಮಾಡಿ ಮಾರಾಟ ಮಾಡಲಾಗುತ್ತಿತ್ತು. ಮದ್ಯದ ಅಂಗಡಿ ವಿರುದ್ಧ ಕ್ರಮಕೈಗೊಳ್ಳುವಂತೆ ಪಾನಪ್ರಿಯರು ಒತ್ತಾಯಿಸಿದ್ದಾರೆ.