ಕೊಪ್ಪಳ: ಕೊರೊನಾ ಮಧ್ಯೆ ಇಲಿ ಜ್ವರ ಸಂಕಷ್ಟ, 6 ಮಂದಿಗೆ ಜ್ವರ
ಕೊಪ್ಪಳ: ಕೊರೊನಾ ಆತಂಕದ ಮಧ್ಯೆಯೇ ಮತ್ತೊಂದು ಸಂಕಷ್ಟ ಎದುರಾಗಿದೆ. ಜಿಲ್ಲೆಯಲ್ಲಿ 6 ಜನರು ಇಲಿ ಜ್ವರದಿಂದ ಬಳಲುತ್ತಿದ್ದಾರೆ. ಕೊಪ್ಪಳ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಇಬ್ಬರು, ಹೊಸಲಿಂಗಾಪುರ, ಕೆರಹಳ್ಳಿ ಹಾಗೂ ನರೇಗಲ್ನಲ್ಲಿ ತಲಾ ಒಬ್ಬರಲ್ಲಿ ಇಲಿ ಜ್ವರ ಕಾಣಿಸಿಕೊಂಡಿದೆ. ಹಾಗೂ ಕುಷ್ಟಗಿ ತಾಲೂಕಿನ ಶಾಖಾಪೂರ ಗ್ರಾಮದಲ್ಲೂ ಒಬ್ಬರಿಗೆ ಇಲಿ ಜ್ವರ ಬಂದಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ಇಲಿ, ಹೆಗ್ಗಣ, ಬೆಕ್ಕು, ನಾಯಿ, ಮೂತ್ರ ನೀರಿನಲ್ಲಿ ಸೇರಿ ಹರಡೋ ಖಾಯಿಲೆ ಇದಾಗಿದ್ದು, ಜನರು […]

ಕೊಪ್ಪಳ: ಕೊರೊನಾ ಆತಂಕದ ಮಧ್ಯೆಯೇ ಮತ್ತೊಂದು ಸಂಕಷ್ಟ ಎದುರಾಗಿದೆ. ಜಿಲ್ಲೆಯಲ್ಲಿ 6 ಜನರು ಇಲಿ ಜ್ವರದಿಂದ ಬಳಲುತ್ತಿದ್ದಾರೆ.
ಕೊಪ್ಪಳ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಇಬ್ಬರು, ಹೊಸಲಿಂಗಾಪುರ, ಕೆರಹಳ್ಳಿ ಹಾಗೂ ನರೇಗಲ್ನಲ್ಲಿ ತಲಾ ಒಬ್ಬರಲ್ಲಿ ಇಲಿ ಜ್ವರ ಕಾಣಿಸಿಕೊಂಡಿದೆ. ಹಾಗೂ ಕುಷ್ಟಗಿ ತಾಲೂಕಿನ ಶಾಖಾಪೂರ ಗ್ರಾಮದಲ್ಲೂ ಒಬ್ಬರಿಗೆ ಇಲಿ ಜ್ವರ ಬಂದಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ.
ಇಲಿ, ಹೆಗ್ಗಣ, ಬೆಕ್ಕು, ನಾಯಿ, ಮೂತ್ರ ನೀರಿನಲ್ಲಿ ಸೇರಿ ಹರಡೋ ಖಾಯಿಲೆ ಇದಾಗಿದ್ದು, ಜನರು ಮುನ್ನೆಚ್ಚರಿಕೆ ಇಂದ ಇರಲು ಅಧಿಕಾರಿಗಳು ಸೂಚಿಸಿದ್ದಾರೆ. ಹಾಗೂ ಇದರಿಂದ ಜನ ಯಾವುದೇ ಆತಂಕ ಪಡೋ ಅಗತ್ಯ ಇಲ್ಲ ಎಂದ ತಿಳಿಸಿದ್ದಾರೆ.
Published On - 10:02 am, Wed, 4 November 20




