ಪಟಾಕಿ ಸದ್ದಿಗೆ ಬೆದರಿದ ಗೂಳಿ, ನಾಲ್ವರಿಗೆ ಗಾಯ

|

Updated on: Jan 16, 2020 | 9:16 AM

ಮಂಡ್ಯ: ಪಟಾಕಿ ಸದ್ದಿಗೆ ಬೆದರಿದ ಗೂಳಿ ಜನರ ಮಧ್ಯೆ ನುಗ್ಗಿದ ಪರಿಣಾಮ ನಾಲ್ವರಿಗೆ ಗಾಯಗಳಾಗಿರುವ ಘಟನೆ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದಿದೆ. ನಿನ್ನೆ ಸಂಜೆ ಸಂಕ್ರಾಂತಿ ಕಿಚ್ಚು ಹಾಯಿಸುವಾಗ ಬೆಂಕಿ ಹಾಗೂ ಪಟಾಕಿ ಶಬ್ದಕ್ಕೆ ಬೆದರಿದ ಗೂಳಿ ಏಕಾಏಕಿ ಸಂಕ್ರಾಂತಿ ಕಿಚ್ಚು ವೀಕ್ಷಣೆಗೆ ನಿಂತಿದ್ದ ಜನರ ಮಧ್ಯೆ ನುಗ್ಗಿದೆ. ಗೂಳಿ ಓಟದ ರಭಸಕ್ಕೆ ನಾಲ್ವರಿಗೆ ಗಾಯಗಳಾಗಿವೆ. ಭಯಭೀತ ಗೊಂಡಿದ್ದ ಗೂಳಿ ಹಿಡಿಯಲು ಜನ ಪರದಾಡಿದ್ದಾರೆ. ಸುಮಾರು ಅರ್ಧ ಗಂಟೆಯ ಬಳಿಕ ಗೂಳಿ ನಿಯಂತ್ರಣಕ್ಕೆ ಬಂದಿದೆ.

ಪಟಾಕಿ ಸದ್ದಿಗೆ ಬೆದರಿದ ಗೂಳಿ, ನಾಲ್ವರಿಗೆ ಗಾಯ
Follow us on

ಮಂಡ್ಯ: ಪಟಾಕಿ ಸದ್ದಿಗೆ ಬೆದರಿದ ಗೂಳಿ ಜನರ ಮಧ್ಯೆ ನುಗ್ಗಿದ ಪರಿಣಾಮ ನಾಲ್ವರಿಗೆ ಗಾಯಗಳಾಗಿರುವ ಘಟನೆ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದಿದೆ. ನಿನ್ನೆ ಸಂಜೆ ಸಂಕ್ರಾಂತಿ ಕಿಚ್ಚು ಹಾಯಿಸುವಾಗ ಬೆಂಕಿ ಹಾಗೂ ಪಟಾಕಿ ಶಬ್ದಕ್ಕೆ ಬೆದರಿದ ಗೂಳಿ ಏಕಾಏಕಿ ಸಂಕ್ರಾಂತಿ ಕಿಚ್ಚು ವೀಕ್ಷಣೆಗೆ ನಿಂತಿದ್ದ ಜನರ ಮಧ್ಯೆ ನುಗ್ಗಿದೆ.

ಗೂಳಿ ಓಟದ ರಭಸಕ್ಕೆ ನಾಲ್ವರಿಗೆ ಗಾಯಗಳಾಗಿವೆ. ಭಯಭೀತ ಗೊಂಡಿದ್ದ ಗೂಳಿ ಹಿಡಿಯಲು ಜನ ಪರದಾಡಿದ್ದಾರೆ. ಸುಮಾರು ಅರ್ಧ ಗಂಟೆಯ ಬಳಿಕ ಗೂಳಿ ನಿಯಂತ್ರಣಕ್ಕೆ ಬಂದಿದೆ.

Published On - 9:15 am, Thu, 16 January 20