ಸರಿಲೇರು ಸಕ್ಸಸ್ ನಂತರ ರಶ್ಮಿಕಾ ಮಂದಣ್ಣಗೆ ಐಟಿ ಶಾಕ್
ಮಡಿಕೇರಿ: ‘ಕಿರಿಕ್ ಪಾರ್ಟಿ’ ಬೆಡಗಿ ನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ದಾಳಿ ನಡೆಸಿದೆ. ಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿರುವ ರಶ್ಮಿಕಾ ನಿವಾಸಕ್ಕೆ ಮುಂಜಾನೆಯೇ 7.30ಕ್ಕೆ ಐಟಿ ಅಧಿಕಾರಿಗಳು ಟ್ಯಾಕ್ಸಿ ಮೂಲಕ ಆಗಮಿಸಿದ್ದಾರೆ. ರಶ್ಮಿಕಾ ಮಂದಣ್ಣ ನಿವಾಸದಲ್ಲಿ ಬೆಂಗಳೂರು ನೋಂದಣಿ ಇರೋ ಮೂರು ಟ್ಯಾಕ್ಸಿಗಳ ಮೂಲಕ 10 ಅಧಿಕಾರಿಗಳ ತಂಡದಿಂದ ದಾಖಲೆ ಪರಿಶೀಲನೆ ಮಾಡಲಾಗುತ್ತಿದೆ. ರಶ್ಮಿಕಾ ಸಿನಿ ಜರ್ನಿ: 2016ರಲ್ಲಿ ‘ಕಿರಿಕ್ ಪಾರ್ಟಿ’ ಮೂಲಕ ಚಿತ್ರರಂಗ ಪ್ರವೇಶ ಮಾಡಿದ ರಶ್ಮಿಕಾ ಮಂದಣ್ಣ. ಕಿರಿಕ್ ಪಾರ್ಟಿ ಬೆಡಗಿ ಸಾನ್ವಿಯಾಗಿ […]
ಮಡಿಕೇರಿ: ‘ಕಿರಿಕ್ ಪಾರ್ಟಿ’ ಬೆಡಗಿ ನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ದಾಳಿ ನಡೆಸಿದೆ. ಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿರುವ ರಶ್ಮಿಕಾ ನಿವಾಸಕ್ಕೆ ಮುಂಜಾನೆಯೇ 7.30ಕ್ಕೆ ಐಟಿ ಅಧಿಕಾರಿಗಳು ಟ್ಯಾಕ್ಸಿ ಮೂಲಕ ಆಗಮಿಸಿದ್ದಾರೆ. ರಶ್ಮಿಕಾ ಮಂದಣ್ಣ ನಿವಾಸದಲ್ಲಿ ಬೆಂಗಳೂರು ನೋಂದಣಿ ಇರೋ ಮೂರು ಟ್ಯಾಕ್ಸಿಗಳ ಮೂಲಕ 10 ಅಧಿಕಾರಿಗಳ ತಂಡದಿಂದ ದಾಖಲೆ ಪರಿಶೀಲನೆ ಮಾಡಲಾಗುತ್ತಿದೆ.
ರಶ್ಮಿಕಾ ಸಿನಿ ಜರ್ನಿ: 2016ರಲ್ಲಿ ‘ಕಿರಿಕ್ ಪಾರ್ಟಿ’ ಮೂಲಕ ಚಿತ್ರರಂಗ ಪ್ರವೇಶ ಮಾಡಿದ ರಶ್ಮಿಕಾ ಮಂದಣ್ಣ. ಕಿರಿಕ್ ಪಾರ್ಟಿ ಬೆಡಗಿ ಸಾನ್ವಿಯಾಗಿ ಮನೆ ಮಾತಾದರು. 2017ರಲ್ಲಿ ಪುನಿತ್ ಅಭಿನಯದ ‘ಅಂಜಿನಿಪುತ್ರ’ದ ನಾಯಕಿಯಾಗಿ ಮಿಂಚಿದ್ದರು. ಹಾಗೂ ಅದೇ ವರ್ಷ ‘ಚಮಕ್’ ಚಿತ್ರದಲ್ಲಿ ಗಣೇಶ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದರು. 2019ರಲ್ಲಿ ತೆರಕಂಡ ‘ಯಜಮಾನ’ ಸಿನಿಮಾದಲ್ಲೂ ಯಜಮಾನನ ರಾಣಿಯಾಗಿ ನಟನೆ ಮಾಡಿದ್ದಾರೆ.
ವಿಜಯ್ ದೇವರಕೊಂಡ ಜೊತೆಗೆ ತೆಲುಗು ಚಿತ್ರಗಳಲ್ಲಿ ನಟನೆ ಮಾಡಿದ್ದು 2018ರಲ್ಲಿ ರಿಲೀಸ್ ಆದ ‘ಗೀತಾ ಗೋವಿಂದಂ’ ರಶ್ಮಿಕಾಗೆ ಬಿಗ್ ಸಕ್ಸೆಸ್ ತಂದುಕೊಟ್ಟಿದ್ದು, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಮೋಡಿ ಮಾಡಿತ್ತು. ನಂತರ 2019ರಲ್ಲಿ ‘ಡಿಯರ್ ಕಾಮ್ರೇಡ್ ‘ ಚಿತ್ರದಲ್ಲಿ ಮತ್ತೆ ಈ ಜೋಡಿ ಒಂದಾಗಿ ನಟಿಸಿದೆ. ಈ ರೀತಿ ಬಹು ಬೇಡಿಕೆಯ, ಲಕ್ಕಿ ಗರ್ಲ್ ಆಗಿ ರಶ್ಮಿಕಾ ಗೆಲುವಿನ ಹಾದಿಯಲ್ಲಿದ್ದಾರೆ. ಅತಿ ಹೆಚ್ಚು ಸಂಭಾವನೆ ಗಳಿಸಿದ್ದಾರೆ.
ಸರಿಲೇರು ನೀಕೆವ್ವರು ಸಕ್ಸಸ್ ಬೆನ್ನಲ್ಲೇ ದಾಳಿ: ತೆಲುಗಿನಲ್ಲಿ ಮಿಂಚಿರುವ ನಟಿ ರಶ್ಮಿಕಾ ಮಂದಣ್ಣ ಮೊನ್ನೆಯಷ್ಟೇ ರಿಲೀಸ್ ಆಗಿರುವ ‘ಸರಿಲೇರು ನೀಕೆವ್ವರು’ ಚಿತ್ರದಲ್ಲಿ ಮಹೇಶ್ ಬಾಬು ಜತೆ ನಟಿಸಿದ್ದಾರೆ. ಚಿತ್ರದ ಸಕ್ಸಸ್ ಬೆನ್ನಲ್ಲೇ ಐಟಿ ದಾಳಿ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ರಿಲೀಸ್ಗೆ ರೆಡಿಯಾಗಿರುವ ಚಿತ್ರಗಳು: ರಶ್ಮಿಕಾ ನಟನೆಯ ‘ಪೊಗರು’ ಚಿತ್ರ ರಿಲೀಸ್ಗೆ ರೆಡಿಯಾಗಿದೆ. ‘ಪೊಗರು’ ಚಿತ್ರದಲ್ಲಿ ಧ್ರುವ ಸರ್ಜಾ ಜತೆ ನಟಿಸಿದ್ದಾರೆ. ರಶ್ಮಿಕಾ ನಿತಿನ್ ರೆಡ್ಡಿ ಜತೆ ನಟಿಸಿರೋ ತೆಲುಗಿನ ‘ಭೀಷ್ಮ’ ಚಿತ್ರ ಕೂಡ ರಿಲೀಸ್ಗೆ ರೆಡಿಯಾಗಿದೆ.
Published On - 10:18 am, Thu, 16 January 20