ಹಣಕಾಸು ವ್ಯವಹಾರ ಹಾಗೂ ತಾಯಿಗೆ ಬೈದಿದ್ದಕ್ಕೆ ಕೊಲೆ ಮಾಡಿದೆ: ಬಂಧಿತ ಆರೋಪಿ..

ಚಿಕ್ಕಬಳ್ಳಾಫುರ: ಆಗಸ್ಟ್​ 28 ರಂದು ಜಂಗಮಕೋಟೆ ಕ್ರಾಸ್​ನಲ್ಲಿ ನಡೆದಿದ್ದ ದಿನಸಿ ಅಂಗಡಿ ವ್ಯಾಪಾರಿ ನಿರಂಜನಮೂರ್ತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಡ್ಲಘಟ್ಟ (ಗ್ರಾ) ಠಾಣೆ ಪೊಲೀಸರಿಂದ ಆರೋಪಿ ನವೀನ್​ನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ನವೀನ್ ಹೊಸಕೋಟೆಯವನ್ನಾಗಿದ್ದು, ಹಣಕಾಸು ವ್ಯವಹಾರ ಹಾಗೂ ತನ್ನ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಕ್ಕೆ ನಿರಂಜನಮೂರ್ತಿಯನ್ನು ಕೊಲೆ ಮಾಡಿದ್ದಾಗಿ ಆರೋಪಿ ನವೀನ್ ಪೊಲೀಸರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಮೂಲತಃ ಆರೋಪಿ ನವೀನ್ ಹಳೆ ವಾಹನಗಳ ಮಾರಾಟ ಮಾಡುವ ಕಾರ್ಯ ನಿರ್ವಹಿಸುತ್ತಿದ್ದ. ಇದನ್ನೂ ಓದಿ:ದಿನಸಿ ಅಂಗಡಿ […]

ಹಣಕಾಸು ವ್ಯವಹಾರ ಹಾಗೂ ತಾಯಿಗೆ ಬೈದಿದ್ದಕ್ಕೆ ಕೊಲೆ ಮಾಡಿದೆ: ಬಂಧಿತ ಆರೋಪಿ..

Updated on: Sep 07, 2020 | 6:10 PM

ಚಿಕ್ಕಬಳ್ಳಾಫುರ: ಆಗಸ್ಟ್​ 28 ರಂದು ಜಂಗಮಕೋಟೆ ಕ್ರಾಸ್​ನಲ್ಲಿ ನಡೆದಿದ್ದ ದಿನಸಿ ಅಂಗಡಿ ವ್ಯಾಪಾರಿ ನಿರಂಜನಮೂರ್ತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಡ್ಲಘಟ್ಟ (ಗ್ರಾ) ಠಾಣೆ ಪೊಲೀಸರಿಂದ ಆರೋಪಿ ನವೀನ್​ನನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿ ನವೀನ್ ಹೊಸಕೋಟೆಯವನ್ನಾಗಿದ್ದು, ಹಣಕಾಸು ವ್ಯವಹಾರ ಹಾಗೂ ತನ್ನ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಕ್ಕೆ ನಿರಂಜನಮೂರ್ತಿಯನ್ನು ಕೊಲೆ ಮಾಡಿದ್ದಾಗಿ ಆರೋಪಿ ನವೀನ್ ಪೊಲೀಸರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಮೂಲತಃ ಆರೋಪಿ ನವೀನ್ ಹಳೆ ವಾಹನಗಳ ಮಾರಾಟ ಮಾಡುವ ಕಾರ್ಯ ನಿರ್ವಹಿಸುತ್ತಿದ್ದ.

ಇದನ್ನೂ ಓದಿ:ದಿನಸಿ ಅಂಗಡಿ ವ್ಯಾಪಾರಿಯ ಕತ್ತು ಕೊಯ್ದು ಬರ್ಬರ ಹತ್ಯೆ

Published On - 6:07 pm, Mon, 7 September 20