AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಠಿಣ ಮನಃಸ್ಥಿತಿಯಲ್ಲಿ ಪರೀಕ್ಷೆ ಬರೆದಿದ್ದ ತನುಜಾಗೆ ಈಗ ಮೆಡಿಕಲ್ ಸೀಟ್ ಕಟ್ಟಿಟ್ಟ ಬುತ್ತಿ

ಬೆಂಗಳೂರು: ಕೋವಿಡ್ ಕಾರಣದಿಂದಾಗಿ ನೀಟ್ ಪರೀಕ್ಷೆ ಬರೆಯಲು ಸಾಧ್ಯವಾಗದೆ ಭವಿಷ್ಯದ ಬಗ್ಗೆ ತೀವ್ರ ಆತಂಕದ ಕ್ಷಣಗಳನ್ನು ಎದುರಿಸಿದ್ದ ಒಬ್ಬ ವಿದ್ಯಾರ್ಥಿನಿ, ಕೊನೆಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ನೆರವಿನಲ್ಲಿ ಪರೀಕ್ಷೆ ಬರೆದಿದ್ದು ಎಲ್ಲರಿಗೂ ತಿಳಿದ ವಿಷಯವೇ. ಬಹಳಷ್ಟು ತ್ರಾಸಿನಿಂದ.. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಮಲ್ಲೇನಹಳ್ಳಿಯ ವಿದ್ಯಾರ್ಥಿನಿ ತನುಜಾ ಕರೇಗೌಡ್ರ ಬೆಂಗಳೂರಿನ ಬಸವನಗುಡಿಯ ಕೇಂದ್ರದಲ್ಲಿ ನೀಟ್ ಪರೀಕ್ಷೆ ಬರೆದಿದ್ದಳು . ಕೋವಿಡ್ ನಿಂದಾದ ಬದಲಾವಣೆಗಳು ತನುಜಾಗೆ ನೀಟ್ […]

ಕಠಿಣ ಮನಃಸ್ಥಿತಿಯಲ್ಲಿ ಪರೀಕ್ಷೆ ಬರೆದಿದ್ದ ತನುಜಾಗೆ ಈಗ ಮೆಡಿಕಲ್ ಸೀಟ್ ಕಟ್ಟಿಟ್ಟ ಬುತ್ತಿ
ಸಾಧು ಶ್ರೀನಾಥ್​
|

Updated on: Oct 17, 2020 | 11:41 AM

Share

ಬೆಂಗಳೂರು: ಕೋವಿಡ್ ಕಾರಣದಿಂದಾಗಿ ನೀಟ್ ಪರೀಕ್ಷೆ ಬರೆಯಲು ಸಾಧ್ಯವಾಗದೆ ಭವಿಷ್ಯದ ಬಗ್ಗೆ ತೀವ್ರ ಆತಂಕದ ಕ್ಷಣಗಳನ್ನು ಎದುರಿಸಿದ್ದ ಒಬ್ಬ ವಿದ್ಯಾರ್ಥಿನಿ, ಕೊನೆಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ನೆರವಿನಲ್ಲಿ ಪರೀಕ್ಷೆ ಬರೆದಿದ್ದು ಎಲ್ಲರಿಗೂ ತಿಳಿದ ವಿಷಯವೇ.

ಬಹಳಷ್ಟು ತ್ರಾಸಿನಿಂದ.. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಮಲ್ಲೇನಹಳ್ಳಿಯ ವಿದ್ಯಾರ್ಥಿನಿ ತನುಜಾ ಕರೇಗೌಡ್ರ ಬೆಂಗಳೂರಿನ ಬಸವನಗುಡಿಯ ಕೇಂದ್ರದಲ್ಲಿ ನೀಟ್ ಪರೀಕ್ಷೆ ಬರೆದಿದ್ದಳು .

ಕೋವಿಡ್ ನಿಂದಾದ ಬದಲಾವಣೆಗಳು ತನುಜಾಗೆ ನೀಟ್ ಪರೀಕ್ಷೆ ಬರೆಯಲು ಅಡ್ಡಿ ಮಾಡಿದ್ದವು. ಈ ಸಮಸ್ಯೆಯನ್ನರಿತು ಮಧ್ಯಪ್ರವೇಶಿಸಿದ್ದ ಮುಖ್ಯಮಂತ್ರಿ ಹಾಗೂ ಸಚಿವರು ಯಾವುದೇ ಅಡ್ಡಿ, ಆತಂಕವಿಲ್ಲದೆ ಆಕೆ ಪರೀಕ್ಷೆ ಬರೆಯುವಂತೆ ಮಾಡಿದ್ದರು.

ಇದೀಗ ಶಿಕಾರಿಪುರದ ವಿದ್ಯಾರ್ಥಿನಿ ತನುಜಾ ಬರೆದಿದ್ದ ನೀಟ್ ಪರೀಕ್ಷೆ ಫಲಿತಾಂಶ ಬಂದಿದೆ. ನಿರೀಕ್ಷೆಯಂತೆ ತನುಜಾ ಉತ್ತಮ ಸಾಧನೆ ತೋರಿದ್ದಾಳೆ. 720 ಕ್ಕೆ 586 ಅಂಕ ಪಡೆದಿದ್ದಾಳೆ! ದುರ್ಭರ ಪರಿಸ್ಥಿತಿ, ಕಠಿಣ ಮನಸ್ಥಿತಿಯಲ್ಲಿ ಪರೀಕ್ಷೆ ಬರೆದಿದ್ದ ತನುಜಾಗೆ ಈಗ ಮೆಡಿಕಲ್ ಸೀಟ್ ಕಟ್ಟಿಟ್ಟ ಬುತ್ತಿ.

ಕೊರೊನಾ ಕಾಲದಲ್ಲಿ ಇಡೀ ಜಗತ್ತು ತತ್ತರಿಸಿದ್ದನ್ನು ಕಂಡು, ಮುಂದೆ ತಾನು ವೈದ್ಯೆಯಾಗಿ ನಾಡಿನ ಜನತೆಗೆ ಸೇವೆ ಸಲ್ಲಿಸುವೆ ಎಂದು ಕಂಕಣ ತೊಟ್ಟಿದ್ದ ತನುಜಾಗೆ ಈಗ ಕನಸು ನನಸಾಗುವ ಕಾಲ ಕೂಡಿಬಂದಿದೆ. ಆಕೆಯ ಮುಂದಿನ ವೈದ್ಯಕೀಯ ವ್ಯಾಸಂಗಕ್ಕೆ ಶುಭವಾಗಲಿ. ಕೊರೊನಾ ಕರಾಳತೆ, ನೀಟ್​ಗೆ ಅಡ್ಡಿ: ವಿದ್ಯಾರ್ಥಿನಿಗೆ ಸಿಎಂ ಯಡಿಯೂರಪ್ಪ, ಆರೋಗ್ಯ ಸಚಿವರ ನೆರವು