
ಮುಂಬೈ: ಕಳೆದ ವರ್ಷದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಹೀನಾಯವಾಗಿ ಸೋತಿದ್ದ ಊರ್ಮಿಳಾ ಮಾತೋಂಡ್ಕರ್ ಇಂದು ಶಿವಸೇನೆ ಸೇರಿಕೊಂಡಿದ್ದಾರೆ. ವಿಶೇಷವೆಂದರೆ ಶಿವಸೇನೆಗೆ ಸೇರಿದ ಒಂದು ತಾಸಿನಲ್ಲೇ ಅವರನ್ನು ಮಹಾರಾಷ್ಟ್ರ ವಿಧಾನ ಪರಿಷತ್ ಸದಸ್ಯರನ್ನಾಗಿಸಿ ನಾಮನಿರ್ದೇಶನ ಮಾಡಲಾಗಿದೆ.
ಪಕ್ಷದ ಮುಖ್ಯಸ್ಥ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಊರ್ಮಿಳಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಉದ್ಧವ್ ಠಾಕ್ರೆ ಪತ್ನಿ ರಶ್ಮಿ ಠಾಕ್ರೆ ಮಾತೋಂಡ್ಕರ್ ಕೈಗೆ ಶಿವ ಬಂಧನ್ ಕಟ್ಟಿ ಶಿವಸೇನೆಗೆ ಬರಮಾಡಿಕೊಂಡರು.
ಊರ್ಮಿಳಾ ಮಾತೋಂಡ್ಕರ್ ಶಿವಸೇನೆ ಸೇರುವುದು ನಿಶ್ಚಿತವಾಗಿತ್ತಾದರೂ ಪಕ್ಷಕ್ಕೆ ಸೇರಿದ ಕೂಡಲೇ ವಿಧಾನ ಪರಿಷತ್ ಸದಸ್ಯೆ ಸ್ಥಾನಕ್ಕೆ ನಾಮಿನೇಟ್ ಮಾಡಿರುವ ಶಿವಸೇನೆಯ ನಡೆ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ.
Published On - 7:12 pm, Tue, 1 December 20