BBMP ಯಲ್ಲಿ ‘ಮೇಯರ್ ಮುತ್ತಣ್ಣ’ ಪುತ್ಥಳಿ ಅನಾವರಣ : ಫಂಕ್ಷನ್​ನಲ್ಲಿ ಶಿವಣ್ಣ ಹಾಡು-ಡ್ಯಾನ್ಸ್​ ಮೋಡಿ!

BBMP ಕೇಂದ್ರ ಕಚೇರಿಯಲ್ಲಿ ಇಂದು ನಡೆದ ಅದ್ದೂರಿ ಸಮಾರಂಭದಲ್ಲಿ ಡಾ.ರಾಜ್​ಕುಮಾರ್​ ಅವರ ಪುತ್ಥಳಿಯನ್ನು ಅನಾವರಣಗೊಳಿಸಲಾಯಿತು.

BBMP ಯಲ್ಲಿ ‘ಮೇಯರ್ ಮುತ್ತಣ್ಣ’ ಪುತ್ಥಳಿ ಅನಾವರಣ : ಫಂಕ್ಷನ್​ನಲ್ಲಿ ಶಿವಣ್ಣ ಹಾಡು-ಡ್ಯಾನ್ಸ್​ ಮೋಡಿ!
Updated By: ಪೃಥ್ವಿಶಂಕರ

Updated on: Nov 27, 2020 | 8:48 PM

ಬೆಂಗಳೂರು: BBMP ಕೇಂದ್ರ ಕಚೇರಿಯಲ್ಲಿ ಇಂದು ನಡೆದ ಅದ್ದೂರಿ ಸಮಾರಂಭದಲ್ಲಿ ಡಾ.ರಾಜ್​ಕುಮಾರ್​ ಅವರ ಪುತ್ಥಳಿಯನ್ನು ಅನಾವರಣಗೊಳಿಸಲಾಯಿತು. ನಟಸಾರ್ವಭೌಮರ ಸುಪುತ್ರ ನಟ ಶಿವರಾಜ್ ಕುಮಾರ್​​ ಪುತ್ಥಳಿ‌ ಅನಾವರಣಗೊಳಿಸಿದರು.

ಒಬ್ಬ ಸಾಮನ್ಯ ಹಳ್ಳಿ ಹೈದ ಛಲವೆತ್ತಿ ಬೆಂಗಳೂರು ಮಹಾನಗರದ ಮೇಯರ್​ ಆಗಿ ಯಶಸ್ಸು ಕಾಣುವ ಮೇಯರ್ ಮುಟ್ಟಣ್ಣ ಸಿನಿಮಾದಲ್ಲಿ ಅಣ್ಣಾವ್ರ ಮನೋಜ್ಞ ನಟನೆ ಮತ್ತು ಮುಗ್ಧತೆ ಎಲ್ಲರ ಮನಗೆದ್ದಿತ್ತು. ಅದೇ ಚಿತ್ರದಲ್ಲಿ ರಾಜ್​ಕುಮಾರ್​ರ ಪಾತ್ರದ ರೂಪದಲ್ಲಿರುವ ಪುತ್ಥಳಿಯೊಂದನ್ನು ಬಿಬಿಎಂಪಿ ನೌಕರರ ಸಂಘದಿಂದ ಇಂದು ಲೋಕಾರ್ಪಣೆ ಮಾಡಲಾಯಿತು.

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್​ ಜೊತೆ ಪುತ್ಥಳಿ ಅನಾವರಣಗೊಳಿಸಿದ ಶಿವಣ್ಣ ಬಳಿಕ ಸಂಘದ ಪ್ರಮುಖ ಸದಸ್ಯರನ್ನು ಸನ್ಮಾನಿಸಿದರು. ಜೊತೆಗೆ, ನೆರೆದಿದ್ದವರು ಕೋರಿಕೆ ಮೇರೆಗೆ ಎರಡು ಹಾಡುಗಳನ್ನು ಸಹ ಹಾಡಿದರು. ಆದರೆ, ನಮ್ಮ ಕರುನಾಡ ಚಕ್ರವರ್ತಿ ಅಷ್ಟಕ್ಕೇ ನಿಲ್ಲದೆ ಹಾಡಿಗೆ ಸಖತ್​ ಸ್ಟೆಪ್ಸ್​ ಹಾಕಿ ಎಲ್ಲರ ಮನಗೆದ್ದರು.

Published On - 8:24 pm, Fri, 27 November 20