ಫೋನಿನಲ್ಲೇ ಸಿಟಿ ಕಮಿಷನರ್​ಗೆ ಸಿದ್ದು ಹಿಗ್ಗಾಮುಗ್ಗಾ ಜಾಡಿ ಸಿದ್ದು ಯಾಕೆ?

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ವೇದಿಕೆಯಿಂದಲೇ ದೂರವಾಣಿ ಮೂಲಕ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್​ಗೆ ಜಾಡಿಸಿದ್ದಾರೆ. ಇದೆಲ್ಲ ಸರಿ ಇರಲ್ಲ ಕಮಿಷನರ್! ಎನ್ರೀ ಕಮಿಷನರ್ ನಮ್ಮ ಕಾರ್ಯಕ್ರಮಕ್ಕೆ ಬರೋ ಕಾರ್ಯಕರ್ತರಿಗೆ ನಿಮ್ಮ ಪೊಲೀಸ್ ನವರು ಅಡ್ಡ ಹಾಕ್ತಿದ್ದಾರಂತೆ. ಅವರನ್ನ ಅಡ್ಡಗಟ್ಟಿ ಕಾರ್ಯಕರ್ತರಿಗೆ ಆದೂ ಇದೂ ಅಂತಾ ಹೇಳ್ತಿದ್ದಾರಂತೆ, ಇದೆಲ್ಲ ಸರಿ ಇರೊಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪೊಲೀಸ್ ಆಯುಕ್ತರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಯಶವಂತಪುರದಲ್ಲಿ ನಮ್ಮ ಕಾರ್ಯಕರ್ತರ ಮೇಲೆ ರೌಡಿಸಂ ಅಲ್ಲದೆ ಯಶವಂತಪುರ […]

ಫೋನಿನಲ್ಲೇ ಸಿಟಿ ಕಮಿಷನರ್​ಗೆ ಸಿದ್ದು ಹಿಗ್ಗಾಮುಗ್ಗಾ ಜಾಡಿ ಸಿದ್ದು ಯಾಕೆ?
ಸಾಧು ಶ್ರೀನಾಥ್​

Updated on: Nov 22, 2019 | 2:15 PM

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ವೇದಿಕೆಯಿಂದಲೇ ದೂರವಾಣಿ ಮೂಲಕ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್​ಗೆ ಜಾಡಿಸಿದ್ದಾರೆ.

ಇದೆಲ್ಲ ಸರಿ ಇರಲ್ಲ ಕಮಿಷನರ್!
ಎನ್ರೀ ಕಮಿಷನರ್ ನಮ್ಮ ಕಾರ್ಯಕ್ರಮಕ್ಕೆ ಬರೋ ಕಾರ್ಯಕರ್ತರಿಗೆ ನಿಮ್ಮ ಪೊಲೀಸ್ ನವರು ಅಡ್ಡ ಹಾಕ್ತಿದ್ದಾರಂತೆ. ಅವರನ್ನ ಅಡ್ಡಗಟ್ಟಿ ಕಾರ್ಯಕರ್ತರಿಗೆ ಆದೂ ಇದೂ ಅಂತಾ ಹೇಳ್ತಿದ್ದಾರಂತೆ, ಇದೆಲ್ಲ ಸರಿ ಇರೊಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪೊಲೀಸ್ ಆಯುಕ್ತರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಯಶವಂತಪುರದಲ್ಲಿ ನಮ್ಮ ಕಾರ್ಯಕರ್ತರ ಮೇಲೆ ರೌಡಿಸಂ
ಅಲ್ಲದೆ ಯಶವಂತಪುರ ಕ್ಷೇತ್ರದಲ್ಲಿ ನಮ್ಮ ಕಾರ್ಯಕರ್ತರ ಮೇಲೆ ರೌಡಿಸಂ ಮಾಡ್ತಿದಾರೆ. ನಮ್ಮ ಕಾರ್ಯಕರ್ತರ ಬಸ್ ತಡೆದು ಬಿಜೆಪಿ ಅಭ್ಯರ್ಥಿ ಬೆಂಬಲಿಗರು ದಬ್ಬಾಳಿಕೆ ಮಾಡ್ತಿದ್ದಾರೆ. ಬಿಜೆಪಿ ಬೆಂಬಲಿಗರನ್ನು ಪೊಲೀಸರು ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆ. ತಕ್ಷಣ ಅವರ ಮೇಲೆ ಕ್ರಮಕೈಗೊಳ್ಳಿ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್​ಗೆ ದೂರವಾಣಿ ಕರೆ ಮಾಡಿ ಸಿದ್ದು ದೂರು ನೀಡಿದ್ದಾರೆ.

Published On - 2:04 pm, Fri, 22 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us