HD ಕುಮಾರಸ್ವಾಮಿಗೆ ನಾಚಿಕೆಯಾಗಬೇಕು -ಸಿದ್ದರಾಮಯ್ಯ ಕೆಂಡಾಮಂಡಲ
ದೇವೇಗೌಡರು ರೈತರ ಪರವಾಗಿದ್ದೇವೆ ಎಂದು ಹೇಳುತ್ತಾರೆ. ಹೆಚ್.ಡಿ.ರೇವಣ್ಣ ಸಹ ರೈತರ ಪರವಾಗಿದ್ದೇವೆ ಎನ್ನುತ್ತಾರೆ. ಆದರೆ ಹೆಚ್.ಡಿ.ಕುಮಾರಸ್ವಾಮಿ ಹೇಗೆ ಇದನ್ನು ಒಪ್ಪುತ್ತಾರೆ. ರೈತರ ಭೂಮಿ ರೈತರ ಬಳಿಯೇ ಇರಬೇಕು. ಅದರೆ, ಕುಮಾರಸ್ವಾಮಿ ರೈತರ ದಾರಿ ತಪ್ಪಿಸುವುದಕ್ಕೆ ಮುಂದಾಗಿದ್ದಾರೆ. H.D.ಕುಮಾರಸ್ವಾಮಿಗೆ ನಾಚಿಕೆ ಆಗಬೇಕು

ಬೆಂಗಳೂರು: ನಾವು ರೈತರ ಹೋರಾಟಕ್ಕೆ ಬೆಂಬಲ ನೀಡಲು ಬಂದಿದ್ದೇವೆ. ಯಾವುದೇ ರಾಜಕಾರಣ ಮಾಡುವುದಕ್ಕೆ ಇಲ್ಲಿಗೆ ಬಂದಿಲ್ಲ ಎಂದು ಫ್ರೀಡಂ ಪಾರ್ಕ್‌ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ಸರ್ಕಾರ ಕಾರ್ಪೊರೇಟ್ ಬಾಡಿಗಳ ಕೈಗೊಂಬೆಯಾಗಿದೆ. ರಾಜ್ಯ ಬಿಜೆಪಿ ಸರ್ಕಾರ ಲೂಟಿ ಮಾಡುವುದಕ್ಕೆ ಮುಂದಾಗಿದೆ. ಕಾರ್ಮಿಕರು, ರೈತರು, ಬಡವರು, ದಲಿತರಿಗೆ ಅನ್ಯಾಯವಾದರೆ ನಾವು ಸುಮ್ಮನೆ ಕೂರುವುದಿಲ್ಲ, ಅವರ ಪರವಾಗಿ ನಿಲ್ಲುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಫ್ರೀಡಂ ಪಾರ್ಕ್‌ನಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಸ್ಥಳಕ್ಕೆ ಭೇಟಿ ಕೊಟ್ಟ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಸಿಲು ಲೆಕ್ಕಿಸದೆ ಪ್ರತಿಭಟನೆಯಲ್ಲಿ ಭಾಗಿಯಾದರು. ರೈತರ ಪ್ರತಿಭಟನೆಗೆ ಕಾಂಗ್ರೆಸ್ ನಾಯಕರು ತಮ್ಮ ಬೆಂಬಲ ಸೂಚಿಸಿದರು. ಇದೇ ವೇಳೆ, ಪ್ರತಿಭಟನಾಕಾರರು ಕೃಷಿ ತಿದ್ದುಪಡಿ ವಿಧೇಯಕಗಳ ಪ್ರತಿ ಸುಟ್ಟು ಆಕ್ರೋಶ ಹೊರಹಾಕಿದರು. ಜೊತೆಗೆ, ಸ್ಥಳದಲ್ಲಿ ಸರ್ಕಾರದ ಪ್ರತಿಗಳಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಕಿ ಇಟ್ಟರು.

‘HD ಕುಮಾರಸ್ವಾಮಿಗೆ ನಾಚಿಕೆಯಾಗಬೇಕು’ ದೇವೇಗೌಡರು ರೈತರ ಪರವಾಗಿದ್ದೇವೆ ಎಂದು ಹೇಳುತ್ತಾರೆ. ಹೆಚ್.ಡಿ.ರೇವಣ್ಣ ಸಹ ರೈತರ ಪರವಾಗಿದ್ದೇವೆ ಎನ್ನುತ್ತಾರೆ. ಆದರೆ ಹೆಚ್.ಡಿ.ಕುಮಾರಸ್ವಾಮಿ ಹೇಗೆ ಇದನ್ನು ಒಪ್ಪುತ್ತಾರೆ. ರೈತರ ಭೂಮಿ ರೈತರ ಬಳಿಯೇ ಇರಬೇಕು. ಅದರೆ, ಕುಮಾರಸ್ವಾಮಿ ರೈತರ ದಾರಿ ತಪ್ಪಿಸುವುದಕ್ಕೆ ಮುಂದಾಗಿದ್ದಾರೆ.
ಕುಮಾರಸ್ವಾಮಿಗೆ ನಾಚಿಕೆ ಆಗಬೇಕು ಎಂದು ಸಿದ್ದರಾಮಯ್ಯ ಗುಡುಗಿದರು. ಯಾರಿಗಾದ್ರೂ ಒಂದು ನಿಲುವು ಇರಬೇಕು. ನಾವು ರೈತರ ಪರವಾಗಿ ಇದ್ದೇವೆಂದು ಹೆಚ್ಡಿಕೆ ಹೇಳಬೇಕು. ಇಲ್ಲಾ ಸರ್ಕಾರದ ಪರ ಇದ್ದೇವೆಂದು ಹೆಚ್ಡಿಕೆ ಹೇಳಬೇಕು. ಕುಮಾರಸ್ವಾಮಿ ಎರಡೆರಡು ಹೇಳಿಕೆಗಳನ್ನು ನೀಡಬಾರದು ಎಂದು ಸಿದ್ದರಾಮಯ್ಯ ತಮ್ಮ ವಾದ ಸರಣಿ ಮಂಡಿಸಿದರು.
‘ಕೇಸ್ ವಜಾ ಮಾಡಿ ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ’ ಭೂವಿವಾದ ಸಂಬಂಧ 13,817 ಕೇಸ್ ವಜಾ ಮಾಡಿದ್ದಾರೆ. ಕೇಸ್ ವಜಾ ಮಾಡಿ ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ ಎಂದು ಫ್ರೀಡಂ ಪಾರ್ಕ್‌ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಬಿಎಸ್ವೈ ಹಸಿರು ಶಾಲು ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆದರೆ, ಪ್ರಮಾಣ ವಚನ ಮುಗಿದ ಕೂಡಲೇ ಶಾಲು ತೆಗೆದುಹಾಕ್ತಾರೆ. ಸಿಎಂ ಯಡಿಯೂರಪ್ಪಗೆ ನಾಚಿಕೆಯಾಗಬೇಕೆಂದು ಕಿಡಿಕಾರಿದರು.
ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಇವರು ಮಾಡಿರುವುದಲ್ಲ. ಕೇಂದ್ರ ಸರ್ಕಾರ ಹೇಳಿದಂತೆ ಇವರು ಮಾಡುತ್ತಿದ್ದಾರೆ. ಕಾರ್ಪೊರೇಟ್ ಕಂಪನಿಗಳು ಅಮಿತ್ ಶಾಗೆ ಹೇಳಿದ್ದಾರೆ. ಕಾರ್ಪೊರೇಟ್ ಕಂಪನಿಗಳು ಹೇಳಿದಂತೆ ರಾಜ್ಯಗಳಿಗೆ ಪತ್ರ ಬರೆದು ಕಾಯ್ದೆಗಳು ಜಾರಿ ಮಾಡುವಂತೆ ಅಮಿತ್ ಶಾ ಹೇಳಿದ್ದಾರೆ. ಇವರೇನು ಗುಲಾಮರಾ ಎಂದು ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಪ್ರಶ್ನಿಸಿದರು.
‘ಕಾರ್ಪೊರೇಟ್ ಕಂಪನಿಗಳು ಬಂದ್ರೆ ಕೈಕಟ್ಟಿ ನಿಲ್ಲಬೇಕು’ ಎಪಿಎಂಸಿ ರದ್ದು ಮಾಡುವುದಕ್ಕೆ ಸಕಾಲ ಎಂದು ಹೇಳಿದ್ದಾರೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಪ್ರಧಾನಿ ಮೋದಿ ನಿಕಟವರ್ತಿ ಸಚಿವೆ ನಿರ್ಮಲಾ ಹೇಳಿದ್ದಾರೆ. ಆದರೆ ಪ್ರಧಾನಿ ಮೋದಿ ಮಾತ್ರ ಉಲ್ಟಾ ಹೇಳಿಕೆ ನೀಡ್ತಿದ್ದಾರೆ. ನಾವು ಎಪಿಎಂಸಿ ಮುಚ್ಚುವುದಿಲ್ಲ ಎಂದು ಮೋದಿ ಹೇಳ್ತಾರೆ.
ಈಗ 126 ಎಪಿಎಂಸಿ ಮಾರ್ಕೆಟ್‌ಗಳು ಮಾತ್ರ ಇವೆ. ಎಪಿಎಂಸಿ ಮಾರ್ಕೆಟ್‌ಗಳಲ್ಲಿ ಅಷ್ಟೋ ಇಷ್ಟೋ ನ್ಯಾಯ ಸಿಗ್ತಿದೆ. ಈ ಕಾರ್ಪೊರೇಟ್ ಕಂಪನಿಗಳು ಬಂದ್ರೆ ಕೈಕಟ್ಟಿ ನಿಲ್ಲಬೇಕು. ನಮ್ಮ ಬಳಿ ಈ ಬೆಳೆ ಇದೆ ತೆಗೆದುಕೊಳ್ಳಿ ಎಂದು ಕೇಳಬೇಕು. ಕೈಕಟ್ಟಿ ನಿಂತು ಕೇಳಿಕೊಳ್ಳುವ ಸ್ಥಿತಿ ಬರುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸುತ್ತೇವೆ. ಆಲ್ ಇಂಡಿಯಾ ಕಾಂಗ್ರೆಸ್ ಹೋರಾಟಕ್ಕೆ ಬೆಂಬಲಿಸುತ್ತದೆ. ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿದೆ. ಎಪಿಎಂಸಿ ಕಾಯ್ದೆಗಳಿಗೂ ತಿದ್ದುಪಡಿ ತರಲಾಯಿತು.
ಕಾರ್ಮಿಕ, ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತಂದಿದ್ದಾರೆ. ಹೀಗಾಗಿ ರೈತ, ಕಾರ್ಮಿಕ, ದಲಿತ ಸಂಘಟನೆಗಳ ಜೊತೆ ನಮ್ಮ ಮನೆಯಲ್ಲಿ ಸಭೆ ಕರೆದು ಮಾನಾಡಿದ್ದೇನೆ. ನಾಗೇಂದ್ರ, ಕೋಡಿಹಳ್ಳಿ ಚಂದ್ರಶೇಖರ್ ಸಭೆಗೆ ಬಂದಿದ್ದರು. ಅಂದಿನ ಸಭೆಯಲ್ಲೇ ಹೋರಾಟಕ್ಕೆ ನಾವು ನಿರ್ಧರಿಸಿದ್ದೆವು ಎಂದು ಹೇಳಿದರು.
ರೈತ ನಾಯಕರು ಎನಿಸಿಕೊಂಡ ಕೆಲವರ ಹಿಂದೆ ಕಾಂಗ್ರೆಸ್ ಈಗ ಅಡಗಿ ಕುಳಿತಿದೆ -HDK ಟಾಂಗ್
Published On - 4:26 pm, Thu, 10 December 20



