ವಿಜಯೇಂದ್ರ ಯಾವತ್ತಾದ್ರೂ ಶಿರಾಗೆ ಹೋಗಿ ಏನಾದ್ರೂ ಕೆಲಸ ಮಾಡಿದ್ದಾನಾ? -ಸಿದ್ದು ಪ್ರಶ್ನೆ
ಬೆಳಗಾವಿ: ಶಿರಾಗೂ ವಿಜಯೇಂದ್ರಗೂ ಏನಪ್ಪಾ ಸಂಬಂಧ? ಯಾವತ್ತಾದ್ರೂ ವಿಜಯೇಂದ್ರ ಅಲ್ಲಿ ಹೋಗಿ ಏನಾದ್ರೂ ಕೆಲಸ ಮಾಡಿದ್ನಾ? ಶಿರಾ ಮತದಾರರು ವಿಜಯೇಂದ್ರಗೆ ಗೊತ್ತಾ? ವಿಜಯೇಂದ್ರ ಸಿಎಂ ಬಿಎಸ್‌ವೈ ಪುತ್ರ ಅನ್ನೋದು ಬಿಟ್ರೆ ಏನಪ್ಪಾ ಸಂಬಂಧ? ಎಂದು ಬಿಜೆಪಿ ಮುಖಂಡ B.Y. ವಿಜಯೇಂದ್ರ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿದ್ದರಾಮಯ್ಯ ವಿಜಯೇಂದ್ರ ದುಡ್ಡು ಖರ್ಚು ಮಾಡಲು ಹೋಗಿ ಶಿರಾದಲ್ಲಿ ಕುಳಿತಿದ್ದಾನೆ. ದುಡ್ಡು ಖರ್ಚು ಮಾಡಿ ಕೆ.ಆರ್.ಪೇಟೆಯಲ್ಲಿ ಗೆದ್ದು ಬಿಟ್ಟರು. ಅದೇನೋ ಸ್ಟ್ರಾಟಜಿ […]

ಬೆಳಗಾವಿ: ಶಿರಾಗೂ ವಿಜಯೇಂದ್ರಗೂ ಏನಪ್ಪಾ ಸಂಬಂಧ? ಯಾವತ್ತಾದ್ರೂ ವಿಜಯೇಂದ್ರ ಅಲ್ಲಿ ಹೋಗಿ ಏನಾದ್ರೂ ಕೆಲಸ ಮಾಡಿದ್ನಾ? ಶಿರಾ ಮತದಾರರು ವಿಜಯೇಂದ್ರಗೆ ಗೊತ್ತಾ? ವಿಜಯೇಂದ್ರ ಸಿಎಂ ಬಿಎಸ್‌ವೈ ಪುತ್ರ ಅನ್ನೋದು ಬಿಟ್ರೆ ಏನಪ್ಪಾ ಸಂಬಂಧ? ಎಂದು ಬಿಜೆಪಿ ಮುಖಂಡ B.Y. ವಿಜಯೇಂದ್ರ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿದ್ದರಾಮಯ್ಯ ವಿಜಯೇಂದ್ರ ದುಡ್ಡು ಖರ್ಚು ಮಾಡಲು ಹೋಗಿ ಶಿರಾದಲ್ಲಿ ಕುಳಿತಿದ್ದಾನೆ. ದುಡ್ಡು ಖರ್ಚು ಮಾಡಿ ಕೆ.ಆರ್.ಪೇಟೆಯಲ್ಲಿ ಗೆದ್ದು ಬಿಟ್ಟರು. ಅದೇನೋ ಸ್ಟ್ರಾಟಜಿ ಮಾಡ್ತಾರಂತೆ. ಅದ್ಯಾವುದಪ್ಪಾ ನನಗೆ ಗೊತ್ತಿಲ್ಲದೆ ಇರೋ ಸ್ಟ್ರಾಟಜಿ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕೆ.ಆರ್.ಪೇಟೆಯಲ್ಲಿ ಮಾಡಿದ ಸ್ಟ್ರಾಟಜಿ ಶಿರಾದಲ್ಲೂ ಮಾಡ್ತೀವಿ ಅಂತಾನೆ. ಬೈಎಲೆಕ್ಷನ್ನಲ್ಲಿ ನಾವೇ ಗೆಲ್ತೀವಿ. ಶಿರಾ ಮತ್ತು ಆರ್.ಆರ್.ನಗರದಲ್ಲಿ ನಾವು ಗೆಲ್ತೀವಿ. ಆದ್ರೆ, ರೂಲಿಂಗ್ ಪಾರ್ಟಿಗೆ ಅಡ್ವಾಂಟೇಜ್ ಜಾಸ್ತಿ ಎಂದು ಹೇಳಿದರು.
ಆರ್.ಆರ್.ನಗರದಲ್ಲಿ ಪಾಪ ಹೆಣ್ಣುಮಗಳ ಮೇಲೆ ಕೇಸ್ ಹಾಕಿಬಿಟ್ರೇ ಅವಳೇನು ಹೆದರಲ್ಲ. ನಾನು ಹೋಗಿದ್ದೇ 12 ಗಂಟೆಗೆ. 11.15ಕ್ಕೆ ಕೇಸ್ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಸುಳ್ಳು ಕಂಪ್ಲೇಂಟ್ ರಿಜಿಸ್ಟರ್ ಮಾಡಿ ಅಭ್ಯರ್ಥಿಗಳನ್ನು ಹೆದರಿಸೋಕೆ ಮುಂದಾಗಿದ್ದಾರೆ. ನಮ್ಮ ಅಧ್ಯಕ್ಷರು ಹೇಳಿದ ಹಾಗೆ, ನಾವು ಬಗ್ಗೋದೂ ಇಲ್ಲ ಜಗ್ಗೋದು ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿಗೆ ತಿರುಗೇಟು ನೀಡಿದರು.
Published On - 1:30 pm, Mon, 19 October 20



