ರಕ್ಷಕನನ್ನೇ ಭಕ್ಷಿಸಿದ ಹಾವು: 1 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಉರಗ ತಜ್ಞ ಸ್ನೇಕ್ ಡ್ಯಾನಿ ಸಾವು

ಹಾವುಗಳನ್ನು ಸಂರಕ್ಷಿಸುವ ಮೂಲಕ ಜಿಲ್ಲೆಯ ಹಲವಾರು ಹಳ್ಳಿಗಳಲ್ಲಿ ಸ್ನೇಕ್ ಡ್ಯಾನಿ ಎಂದೇ ಚಿರಪರಿಚಿತರಾಗಿದ್ದ ಉರಗ ತಜ್ಞ ಡೇನಿಯಲ್ ನ್ಯೂಟನ್ ಹಾವು ಹಿಡಿಯುವ ವೇಳೆ ಸಾವಿಗೀಡಾಗಿದ್ದಾರೆ. ಜಿಲ್ಲೆಯ ಸೀಗಿಕೇರಿಯ ಗ್ರಾಮದ ಮನೆಯೊಂದರಲ್ಲಿ ನಾಗರಹಾವನ್ನು ಹಿಡಿಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ರಕ್ಷಕನನ್ನೇ ಭಕ್ಷಿಸಿದ ಹಾವು: 1 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಉರಗ ತಜ್ಞ ಸ್ನೇಕ್ ಡ್ಯಾನಿ ಸಾವು
ಉರಗ ತಜ್ಞ ಸ್ನೇಕ್​ ಡ್ಯಾನಿ
Follow us
guruganesh bhat
| Updated By: KUSHAL V

Updated on:Dec 15, 2020 | 6:42 PM

ಬಾಗಲಕೋಟೆ: ಹಾವುಗಳನ್ನು ಸಂರಕ್ಷಿಸುವ ಮೂಲಕ ಜಿಲ್ಲೆಯ ಹಲವಾರು ಹಳ್ಳಿಗಳಲ್ಲಿ ಸ್ನೇಕ್ ಡ್ಯಾನಿ ಎಂದೇ ಚಿರಪರಿಚಿತರಾಗಿದ್ದ ಉರಗ ತಜ್ಞ ಡೇನಿಯಲ್ ನ್ಯೂಟನ್ ಹಾವು ಹಿಡಿಯುವ ವೇಳೆ ಸಾವಿಗೀಡಾಗಿದ್ದಾರೆ. ಜಿಲ್ಲೆಯ ಸೀಗಿಕೇರಿಯ ಗ್ರಾಮದ ಮನೆಯೊಂದರಲ್ಲಿ ನಾಗರಹಾವನ್ನು ಹಿಡಿಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ನಗರದ ಜಯನಗರ ನಿವಾಸಿಯಾದ 43 ವರ್ಷದ ಡೇನಿಯಲ್ ಈ ತನಕ 1,036 ನಾಗರಹಾವುಗಳು ಸೇರಿದಂತೆ 3,279 ಹಾವುಗಳನ್ನು ರಕ್ಷಿಸಿದ್ದರು. ಈ ಹಿಂದೆ, ಒಂದಲ್ಲ, ಎರಡಲ್ಲ ಬರೋಬ್ಬರಿ 75 ಬಾರಿ ಹಾವಿನಿಂದ ಕಚ್ಚಿಸಿಕೊಂಡಿದ್ದರೂ ಪವಾಡ ಸದೃಶವೆಂಬಂತೆ ಪಾರಾಗಿದ್ದರು. ಅಲ್ಲದೆ ಕಳೆದ ಜೂನ್​ನಲ್ಲಿ ಮರಿ ನಾಗರಹಾವಿನಿಂದ ಕಚ್ಚಿಸಿಕೊಂಡ ಇವರು ಸಾವು-ಬದುಕಿನ ಮಧ್ಯೆ ಹೋರಾಡಿ ಗೆದ್ದಿದ್ದರು. ಆದರೆ ದುರದೃಷ್ಟವಶಾತ್​, ಡ್ಯಾನಿ ಈ ಬಾರಿ ಬದುಕುಳಿಯಲಿಲ್ಲ.

ದುಃಖದ ವಿಷಯವೆಂದರೆ, ಡೇನಿಯಲ್​ ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಇದೀಗ, ಹಲವಾರು ಉರಗಗಳನ್ನು ರಕ್ಷಿಸಿ ಸಾರ್ಥಕ ಬದುಕು ನಡೆಸಿದ್ದ ಡೇನಿಯಲ್​ ತಾವು ಬದುಕಿದ್ದಾಗಲೇ ತಮ್ಮ ದೇಹವನ್ನು ದಾನ ಮಾಡಿದ್ದರು ಎಂದು ಹೇಳಲಾಗಿದೆ. ಈ ಮೂಲಕ ಡ್ಯಾನಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

Published On - 6:40 pm, Tue, 15 December 20