ಬೆಂಗಳೂರು: ನಾನು ನೀಡಿರುವ ದೂರಿನ ಬಗ್ಗೆ ಮಾಹಿತಿ ಪಡೆದುಕೊಂಡರು. ನಾನು ನೀಡಿರುವ ದೂರನ್ನು ಪೊಲೀಸರು ಸ್ವೀಕರಿಸಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ವಿಡಿಯೋ ಬಗ್ಗೆ ಕಬ್ಬನ್ಪಾರ್ಕ್ ಠಾಣೆ ಸಮೀಪ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಹೇಳಿದರು. ಸಂತ್ರಸ್ತೆ ಕುಟುಂಬ ಬಹಳ ಭಯದಲ್ಲಿ ಬದುಕುತ್ತಿದ್ದಾರೆ. ಸಂತ್ರಸ್ತೆ ಕುಟುಂಬದ ಸದಸ್ಯರೊಬ್ಬರು ಸಂಪರ್ಕಿಸಿದ್ದರು. ನಿನ್ನೆ ನನ್ನನ್ನು ಸಂಪರ್ಕಿಸಿದ್ದ ಸಂತ್ರಸ್ತೆ ಕುಟುಂಬ ಸದಸ್ಯರು. ವಕೀಲರ ಜೊತೆ ಚರ್ಚಿಸಿ ಪೊಲೀಸರಿಗೆ ದೂರು ನೀಡಿದ್ದೇನೆ. ಇದೊಂದು ಬಹಳ ಸೂಕ್ಷ್ಮ ಪ್ರಕರಣವಾಗಿರುವುದರಿಂದ ಸಂತ್ರಸ್ತೆ, ಕುಟುಂಬದ ಬಗ್ಗೆ ವಿವರಣೆ ನೀಡಲಾಗುವುದಿಲ್ಲ ಎಂದು ದಿನೇಶ್ ಹೇಳಿದರು.
ಅಧಿವೇಶನದ ಸಂದರ್ಭವೆಂದು ಈಗ ನಾನು ದೂರು ನೀಡಿಲ್ಲ. ಅಧಿವೇಶನ ಯಾವಾಗ ಇದೆ ಎಂದು ನನಗೆ ಗೊತ್ತಿಲ್ಲ. ಸಂತ್ರಸ್ತೆ ಕುಟುಂಬಸ್ಥರ ಮಾಹಿತಿ ಮೇರೆಗೆ ದೂರು ನೀಡಿದ್ದೇನೆ ಎಂದು ಕಬ್ಬನ್ಪಾರ್ಕ್ ಸಮೀಪ ದಿನೇಶ್ ಕಲ್ಲಹಳ್ಳಿ ಹೇಳಿದರು.
ಪೊಲೀಸ್ ಎಸ್ಕಾರ್ಟ್ನಲ್ಲಿ ಹೊರಟ ದಿನೇಶ್
ಈ ನಡುವೆ, ದಿನೇಶ್ ಕಲ್ಲಹಳ್ಳಿಯಿಂದ ದೂರು ಸ್ವೀಕರಿಸಿದ ಪೊಲೀಸರು ಕಾರ್ಯಕರ್ತನ ಹೇಳಿಕೆಯನ್ನ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಬಳಿಕ ಕಬ್ಬನ್ಪಾರ್ಕ್ ಠಾಣೆಯಿಂದ ಭದ್ರತೆಯಲ್ಲಿ ದಿನೇಶ್ ಠಾಣೆಯಿಂದ ಹೊರಟರು. ದಿನೇಶ್ ಕಲ್ಲಹಳ್ಳಿ ತೆರಳ್ತಿರುವ ಕಾರಿನಲ್ಲಿ ಪೊಲೀಸರೂ ಇದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಸಿಎಂ ಜೊತೆ ಚರ್ಚಿಸಿದ ಗೃಹಸಚಿವ ಬೊಮ್ಮಾಯಿ
ಈ ಮಧ್ಯೆ, ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ವಿಡಿಯೋ ಬಯಲಾಗುತ್ತಿದ್ದಂತೆ ಸಿಎಂ ಜೊತೆ ಗೃಹಸಚಿವ ಬೊಮ್ಮಾಯಿ ಚರ್ಚೆ ನಡೆಸಿದರು. ಸಿಎಂ ಅಧಿಕೃತ ನಿವಾಸ ಕಾವೇರಿಗೆ ತೆರಳಿದ ಬೊಮ್ಮಾಯಿ ಮುಖ್ಯಮಂತ್ರಿ ಜೊತೆ ಗುಪ್ತಚರ ಇಲಾಖೆಯ ಎಡಿಜಿಪಿ ದಯಾನಂದ್ ಸಹ ಆಗಮಿಸಿದರು.
ಇದನ್ನೂ ಓದಿ: ‘ಇದು ಪಕ್ಷಕ್ಕೆ ಮುಜುಗರ ತರುವ ಸನ್ನಿವೇಶ, BJPಯಲ್ಲಿ ಇಂಥದ್ದು ಸಹಿಸಲ್ಲ.. ತಪ್ಪು ಸಾಬೀತಾದ್ರೆ ಕ್ರಮ ಖಚಿತ’
ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ‘ಸಿಡಿ’ದ ರಾಸಲೀಲೆ ಕರ್ಮಕಾಂಡ: ರಮೇಶ್ ಜಾರಕಿಹೊಳಿ ಹಸಿಬಿಸಿ ದೃಶ್ಯ ರಿಲೀಸ್