ರಾಜ್ಯ ರಾಜಕೀಯದಲ್ಲಿ ಸಿಡಿದ ರಾಸಲೀಲೆ ಕರ್ಮಕಾಂಡ: ರಮೇಶ್ ಜಾರಕಿಹೊಳಿ ಹಸಿಬಿಸಿ ದೃಶ್ಯ ರಿಲೀಸ್
Ramesh Jarkiholi: ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ರಾಸಲೀಲೆ ಕರ್ಮಕಾಂಡವೊಂದು ‘ಸಿಡಿ’ದಿದೆ. ಸಚಿವರೊಬ್ಬರ ರಾಸಲೀಲೆ ಪ್ರಕರಣ ಬಟಾಬಯಲಾಗಿದೆ. ಜಲಸಂಪನ್ಮೂಲ ಖಾತೆ ಸಚಿವ ರಮೇಶ್ ಜಾರಕಿಹೊಳಿಯವರ ರಾಸಲೀಲೆಯ ಸಿಡಿ ಬಿಡುಗಡೆಯಾಗಿದೆ. ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷರಾದ ದಿನೇಶ್ ಕಲ್ಲಹಳ್ಳಿ ಎಂಬುವವರು ಸಿಡಿ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ರಾಸಲೀಲೆ ಕರ್ಮಕಾಂಡವೊಂದು ‘ಸಿಡಿ’ದಿದೆ. ಸಚಿವರೊಬ್ಬರ ರಾಸಲೀಲೆ ಪ್ರಕರಣ ಬಟಾಬಯಲಾಗಿದೆ. ಜಲಸಂಪನ್ಮೂಲ ಖಾತೆ ಸಚಿವ ರಮೇಶ್ ಜಾರಕಿಹೊಳಿಯವರ ರಾಸಲೀಲೆಯ ಸಿ.ಡಿ. ಬಿಡುಗಡೆಯಾಗಿದೆ. ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷರಾದ ದಿನೇಶ್ ಕಲ್ಲಹಳ್ಳಿ ಎಂಬುವವರು ಸಿ.ಡಿ. ಬಿಡುಗಡೆ ಮಾಡಿದ್ದಾರೆ.
ಇದಲ್ಲದೆ, ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ವಿಡಿಯೋ ಬಗ್ಗೆ ದಿನೇಶ್ ದೂರು ಸಲ್ಲಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಆಯುಕ್ತ ಕಮಲ್ ಪಂತ್ಗೆ ದಿನೇಶ್ ದೂರು ನೀಡಿದ್ದಾರೆ.
ಯವತಿಯೊಬ್ಬರು ಎರಡು ತಿಂಗಳ ಹಿಂದೆ ಉದ್ಯೋಗ ಅರಸಿ ರಮೇಶ್ ಜಾರಕಿಹೊಳಿ ಅವರ ಬಳಿ ಬರುತ್ತಾರೆ. ಆಗ ಸಮಾಧಾನ ಪಡಿಸಿದ ರಮೇಶ್ ಜಾರಕಿಹೊಳಿ ಉದ್ಯೋಗ ನೀಡುವ ಭರವಸೆ ನೀಡುತ್ತಾರೆ. ಆದರೆ ಮುಂದೆ ಅವರು ಯವತಿಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಹಾತೊರೆಯುತ್ತಾರೆ. ಇದನ್ನು ಅರಿತ ಯುವತಿ (ಸಂತ್ರಸ್ತೆ), ಗೌಪ್ಯವಾಗಿ ವಿಡಿಯೋ ರೆಕಾರ್ಡ್ ಮಾಡುತ್ತಾರೆ.
ಅದಾದನಂತರ ಸಂತ್ರಸ್ತ ಯುವತಿಯು ನನ್ನನ್ನು ಸಂಪರ್ಕಿಸಿ, ಆರೋಪಿಯು ಪ್ರಭಾವಶಾಲಿಯಾಗಿದ್ದು, ನನಗೆ ಮತ್ತು ನನ್ನ ಕುಟುಂಬದವರಿಗೆ ಅವರನ್ನು ಎದುರಿಸಲು ಸಾಧ್ಯವಿಲ್ಲ. ಹಾಗಾಗಿ, ನೀವು ನೆರವು ನೀಡಬೇಕು. ನಿಮ್ಮ ಮೂಲಕ ಇದನ್ನು ಪೊಲೀಸರಿಗೆ ದೂರು ನೀಡುವಂತೆ ಮಾಡಬೇಕು ಎಂದು ನನ್ನನ್ನು ಭೇಟಿಯಾದರು. ಮತ್ತು ಆ ವೇಳೆ ಸದರಿ ಸಿ.ಡಿ. ಯನ್ನು ನನಗೆ ನೀಡಿದರು. ಅದರಂತೆ ನಾನು ನಿಮಗೆ (ಬೆಂಗಳೂರು ಪೊಲೀಸ್ ಕಮೀಷನರ್) ದೂರು ನೀಡುತ್ತಿದ್ದೇನೆ ಎಂದು ದೂರುದಾರರಾದ ದಿನೇಶ್ ಕಲ್ಲಹಳ್ಳಿ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಸಿದ್ದಾರೆ.
‘ಸಿಡಿಯಲ್ಲಿರುವ ಸಂತ್ರಸ್ತೆಗೆ ಜೀವಭಯವಿದೆ’ ರಮೇಶ್ ಜಾರಕಿಹೊಳಿ ರಾಸಲೀಲೆ ಬಗ್ಗೆ ತನಿಖೆಗಾಗಿ ದೂರು ಸಲ್ಲಿಸಿದ್ದೇನೆ ಎಂದು ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಹೇಳಿದರು. ಕೆಲವು ತಿಂಗಳ ಹಿಂದೆ ನಡೆದಿರುವ ರಾಸಲೀಲೆ ಪ್ರಕರಣವಿದು. ಇಂತಹ ವಿಚಾರಗಳಲ್ಲಿ ಸಂತ್ರಸ್ತೆಯ ದೂರು ಮುಖ್ಯವಾಗಲಿದೆ. ಸಿ.ಡಿ.ಯಲ್ಲಿರುವ ಸಂತ್ರಸ್ತೆಗೆ ಜೀವಭಯವಿದೆ ಎಂದು ದಿನೇಶ್ ಕಲ್ಲಹಳ್ಳಿ ಟಿವಿ9 ಕನ್ನಡ ಡಿಜಿಟಲ್ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಸಿಡಿ ಬಾಂಬ್ ಸಿಡಿಯುತ್ತಿದ್ದಂತೆ ‘ಸಾಹುಕಾರ್’ ನಾಪತ್ತೆ.. ರಮೇಶ್ ಜಾರಕಿಹೊಳಿ ಸ್ವಕ್ಷೇತ್ರದಲ್ಲಿ ಪವರ್ ಕಟ್
ಸಂತ್ರಸ್ತ ಮಹಿಳೆ ನನ್ನನ್ನು ಸಂಪರ್ಕಿಸಿ ನೋವು ಹೇಳಿಕೊಂಡಿದ್ದರು. ಆಕೆಯ ಪರವಾಗಿ ನಾನು ಆಯುಕ್ತರಿಗೆ ದೂರು ನೀಡಿದ್ದೇನೆ. ಗೌಪ್ಯತೆ ಕಾರಣದಿಂದ ಸಂತ್ರಸ್ತೆಯನ್ನು ಸಾರ್ವಜನಿಕವಾಗಿ (ಪೊಲೀಸ್ ಠಾಣೆಗೆ) ಕರೆದು ತಂದಿಲ್ಲ ಎಂದೂ ಪೊಲೀಸ್ ಆಯುಕ್ತರ ಭೇಟಿಗೆ ತೆರಳಿದ ವೇಳೆ ದಿನೇಶ್ ಕಲ್ಲಹಳ್ಳಿ ಹೇಳಿದ್ದಾರೆ.
Published On - 6:10 pm, Tue, 2 March 21