AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಡಿ ಬಾಂಬ್ ಸಿಡಿಯುತ್ತಿದ್ದಂತೆ ‘ಸಾಹುಕಾರ್​’ ನಾಪತ್ತೆ.. ರಮೇಶ್ ಜಾರಕಿಹೊಳಿ ಸ್ವಕ್ಷೇತ್ರದಲ್ಲಿ ಪವರ್​ ಕಟ್​

ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ಬಯಲಾಗುತ್ತಿದ್ದಂತೆ ವಿದ್ಯುತ್ ಕಡಿತಗೊಂಡಿದೆ. ರಮೇಶ್ ಜಾರಕಿಹೊಳಿ‌ ಸ್ವಕ್ಷೇತ್ರ ಗೋಕಾಕ್​ನಲ್ಲಿ ಪವರ್ ಕಟ್ ಆಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಾದ್ಯಂತ ಪವರ್ ಕಟ್ ಸಂಭವಿಸಿದೆ.

ಸಿಡಿ ಬಾಂಬ್ ಸಿಡಿಯುತ್ತಿದ್ದಂತೆ ‘ಸಾಹುಕಾರ್​’ ನಾಪತ್ತೆ.. ರಮೇಶ್ ಜಾರಕಿಹೊಳಿ ಸ್ವಕ್ಷೇತ್ರದಲ್ಲಿ ಪವರ್​ ಕಟ್​
ರಮೇಶ್​ ಜಾರಕಿಹೊಳಿ (ಎಡ); ದಿನೇಶ್​ ಕಲ್ಲಹಳ್ಳಿ (ಬಲ)
KUSHAL V
| Updated By: Digi Tech Desk|

Updated on:Jun 23, 2021 | 1:27 PM

Share

ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ಬಗ್ಗೆ ದೂರು ಸಲ್ಲಿಸಿದ ದಿನೇಶ್​ ಕಲ್ಲಹಳ್ಳಿ ಸಿಡಿ ಬಿಡುಗಡೆ ಮಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ. ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಹೇಳಿದರು.

ಸಾಕ್ಷ್ಯಚಿತ್ರಕ್ಕೆ ನೆರವು ಕೇಳಿ ಸಚಿವರ ಬಳಿ ಬಂದಿದ್ದ ಸಂತ್ರಸ್ತೆಗೆ ಸಾಕ್ಷ್ಯಚಿತ್ರ ಬೇಡ ನಿನಗೆ ನೌಕರಿ ಕೊಡಿಸುವೆ ಎಂದಿದ್ದರು. ನೌಕರಿ ಆಮಿಷವೊಡ್ಡಿ ಲೈಂಗಿಕವಾಗಿ ಬಳಕೆಮಾಡಿದ್ದಾರೆ. ಹಲವು ಬಾರಿ ಸಚಿವ ರಮೇಶ್ ಜಾರಕಿಹೊಳಿ ದುರ್ಬಳಕೆ ಮಾಡಿದ್ದಾರೆ. ಮೊದಲು ನೌಕರಿ ಕೊಡಿಸುವುದಾಗಿ ಭರವಸೆ ನೀಡಿದ್ದ ಮಂತ್ರಿ ಕೆಲ ದಿನಗಳ ಬಳಿಕ ಯುವತಿಯನ್ನು ಸೈಡ್​ಲೈನ್​ ಮಾಡಿದ್ದರು ಎಂದು ದಿನೇಶ್​ ಕಲ್ಲಹಳ್ಳಿ ಹೇಳಿದರು.

ಯಾವುದೇ ನೌಕರಿ ಕೊಡಿಸದಿದ್ದರಿಂದ ಯುವತಿ ಕಂಗಾಲಾಗಿದ್ದಾಳೆ. ಈ ನಡುವೆ, ಯುವತಿ ಬಳಿ ವಿಡಿಯೋ ಇದ್ದ ಬಗ್ಗೆ ಸಚಿವರಿಗೆ ಗೊತ್ತಾಗಿತ್ತು. ಹಾಗಾಗಿ, ಸಂತ್ರಸ್ತ ಯುವತಿ, ಕುಟುಂಬಸ್ಥರಿಗೆ ಜೀವ ಬೆದರಿಕೆ ಹಾಕಿದ್ದರು. ಈ ಬಗ್ಗೆ ದೂರು ನೀಡಬೇಕೇ ಬೇಡವೇ ಎಂದು ಯುವತಿ, ಕುಟುಂಬ ಸದಸ್ಯರು ಗೊಂದಲಕ್ಕೆ ಸಿಲುಕಿದ್ದರು. ಅಂತಿಮವಾಗಿ ಕುಟುಂಬ ಸದಸ್ಯರು ನನ್ನನ್ನು ಭೇಟಿಯಾಗಿದ್ದರು. ಹೀಗಾಗಿ ಸತ್ಯಾಸತ್ಯತೆ ಬಗ್ಗೆ ಗೊತ್ತಾಗಲಿ ಎಂದು ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಲಿದ್ದೇನೆ ಎಂದು ದಿನೇಶ್ ಹೇಳಿದರು. ಯುವತಿ ಹೇಳಿಕೆ, ಸಿಡಿ ಸತ್ಯಾಸತ್ಯತೆ ಬಗ್ಗೆ ತನಿಖೆಗೆ ಮನವಿ ಮಾಡಿದ್ದೇನೆ ಎಂದು ದಿನೇಶ್ ಕಲ್ಲಹಳ್ಳಿ ಹೇಳಿದರು.

ವಿಡಿಯೋ ಬಯಲಾಗುತ್ತಿದ್ದಂತೆ ಸಚಿವರು ನಾಪತ್ತೆ ಇತ್ತ, ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ಬಯಲಾಗುತ್ತಿದ್ದಂತೆ ಸಚಿವರು ನಾಪತ್ತೆಯಾಗಿದ್ದಾರೆ. ಮೈಸೂರಿಗೆ ಆಗಮಿಸಿದ್ದ ಸಚಿವ ರಮೇಶ್ ಜಾರಕಿಹೊಳಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಈ ನಡುವೆ, ರಾಸಲೀಲೆ ವಿಡಿಯೋ ಬಿಡುಗಡೆಯಾಗುತ್ತಿದ್ದಂತೆ ರಮೇಶ್ ಜಾರಕಿಹೊಳಿ ಎಸ್ಕಾರ್ಟ್ ಬಿಟ್ಟು ನಾಪತ್ತೆಯಾಗಿದ್ದಾರೆ. ಯಾವ ಸ್ಥಳಕ್ಕೆ ತೆರಳಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ರಾಸಲೀಲೆ ವಿಡಿಯೋ ಬಯಲಾಗುತ್ತಿದ್ದಂತೆ ಗೋಕಾಕ್​ನಲ್ಲಿ ವಿದ್ಯುತ್ ಕಡಿತ ಅತ್ತ, ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ಬಯಲಾಗುತ್ತಿದ್ದಂತೆ ವಿದ್ಯುತ್ ಕಡಿತಗೊಂಡಿದೆ. ರಮೇಶ್ ಜಾರಕಿಹೊಳಿ‌ ಸ್ವಕ್ಷೇತ್ರ ಗೋಕಾಕ್​ನಲ್ಲಿ ಪವರ್ ಕಟ್ ಆಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಾದ್ಯಂತ ಪವರ್ ಕಟ್ ಆಗಿದೆ.

Published On - 6:51 pm, Tue, 2 March 21