ಕೇತುಗ್ರಸ್ತ ಸೂರ್ಯಗ್ರಹಣ ಮಧ್ಯಾಹ್ನ 2.15 ಕ್ಕೆ ಆರಂಭ, ಮನೆಗಳಿಂದ ಹೊರಬರಕೂಡದು ಅಂತ ಜ್ಯೋತಿಷಿ ಹಾಗೂ ವಿಜ್ಞಾನಿಗಳಿಂದ ಎಚ್ಚರಿಕೆ!
ವಿಜ್ಞಾನಿಗಳು ಮತ್ತು ಜ್ಯೋತಿಷಿಗಳು ಸೂರ್ಯಗ್ರಹಣ ಆರಂಭವಾಗಿ ಅದು ಮುಗಿಯುವವರೆಗೆ ಮನೆಗಳಿಂದ ಹೊರಬರಬಾರದೆಂದು ಎಚ್ಚರಿಸಿದ್ದಾರೆ. ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರು ಯಾವ ಕಾರಣಕ್ಕೂ ಹೊರಗೆ ಕಾಲಿಡಕೂಡದು ಅಂತ ಅವರು ಹೇಳಿದ್ದಾರೆ.
ಬೆಂಗಳೂರು: ಸುದೀರ್ಘ ಅವಧಿಯ ಕೇತುಗ್ರಸ್ತ ಸೂರ್ಯಗ್ರಹಣಕ್ಕೆ (Solar Eclipse) ಕ್ಷಣಗಣನೆ ಆರಂಭವಾಗಿದೆ. ಗ್ರಹಣದ ಸ್ಪರ್ಶಕಾಲ (beginning) ಅಂದರೆ ಶುರುವಾಗೋದು ಮಧ್ಯಾಹ್ನ 2.15 ಅಂತ ಹೇಳಲಾಗಿದೆ. ಗ್ರಹಣ ಗರಿಷ್ಠ ಹಂತ ತಲುಪುವುದು ಮಧ್ಯಾಹ್ನ 4.18 ಕ್ಕೆ ಮತ್ತು ಅದರ ಮೋಕ್ಷಕಾಲ ಅಂದರೆ ಗ್ರಹಣ ಬಿಡೋದು ಸಾಯಂಕಾಲ 6.30ಕ್ಕೆ. ವಿಜ್ಞಾನಿಗಳು ಮತ್ತು ಜ್ಯೋತಿಷಿಗಳು (astrologers) ಸೂರ್ಯಗ್ರಹಣ ಆರಂಭವಾಗಿ ಅದು ಮುಗಿಯುವವರೆಗೆ ಮನೆಗಳಿಂದ ಹೊರಬರಬಾರದೆಂದು ಎಚ್ಚರಿಸಿದ್ದಾರೆ. ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರು ಯಾವ ಕಾರಣಕ್ಕೂ ಹೊರಗೆ ಕಾಲಿಡಕೂಡದು ಅಂತ ಅವರು ಹೇಳಿದ್ದಾರೆ.
Latest Videos