ರಾಯಚೂರು: ಬಸ್ ಓಡಿಸುವಾಗಲೇ ಚಾಲಕನಿಗೆ ಹೃದಯಾಘಾತ, ಸಾವು; ವಾಹನ ನೆಲಕ್ಕುರುಳಿ 14 ಜನರಿಗೆ ಗಾಯ

ರಾಯಚೂರು: ಬಸ್ ಓಡಿಸುವಾಗಲೇ ಚಾಲಕನಿಗೆ ಹೃದಯಾಘಾತ, ಸಾವು; ವಾಹನ ನೆಲಕ್ಕುರುಳಿ 14 ಜನರಿಗೆ ಗಾಯ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Oct 24, 2022 | 2:33 PM

ಬಸ್ ಓಡಿಸುತ್ತಿದ್ದ ಚಾಲಕ ಶ್ರೀನಿವಾಸ್ ಕೈಯಲ್ಲಿ ಸ್ಟೀಯರಿಂಗ್ ಹಿಡಿದಿರುವಾಗಲೇ ಹೃದಯಾಘಾತಕ್ಕೊಳಗಾಗಿ ದುರದೃಷ್ಟವಶಾತ್ ಬಸ್ಸಿನಲ್ಲೇ ಮರಣಹೊಂದಿದ್ದಾರೆ.

ರಾಯಚೂರು: ಇದು ದುರಂತವಲ್ಲದೆ ಮತ್ತೇನೂ ಅಲ್ಲ. ರಾಯಚೂರಿನಿಂದ ಬೆಳಗಾವಿಗೆ (Belagavi) ಹೊರಟಿದ್ದ ರಾಜಹಂಸ ಬಸ್ಸೊಂದು ಲಿಂಗಸೂಗೂರಿನ ಚಿಕ್ಕಹೆಸರೂರು ಗ್ರಾಮದ ಬಳಿ ರಸ್ತೆ ಬದಿ ನೆಲಕ್ಕುರುಳಿರುವುದನ್ನು ಚಿತ್ರದಲ್ಲಿ ನೋಡಬಹುದು. ಬಸ್ ಪಲ್ಟಿ ಹೊಡೆದಿದ್ದು ಯಾಕೆ ಗೊತ್ತಾ? ಅದನ್ನು ಓಡಿಸುತ್ತಿದ್ದ ಚಾಲಕ ಶ್ರೀನಿವಾಸ್ (Srinivas) ಕೈಯಲ್ಲಿ ಸ್ಟೀಯರಿಂಗ್ ಹಿಡಿದಿರುವಾಗಲೇ ಹೃದಯಾಘಾತಕ್ಕೊಳಗಾಗಿ (heart attack) ದುರದೃಷ್ಟವಶಾತ್ ಬಸ್ಸಿನಲ್ಲೇ ಮರಣಹೊಂದಿದ್ದಾರೆ. ಬಸ್ ಅವರ ನಿಯಂತ್ರಣ ತಪ್ಪಿದ್ದರಿಂದ ರಸ್ತೆ ಬಿಟ್ಟು ಪಕ್ಕದ ಜಮೀನೊಂದಕ್ಕೆ ನುಗ್ಗಿ ಉರುಳಿಬಿದ್ದಿದೆ. ಬಸ್ಸಲ್ಲಿದ್ದ ಪ್ರಯಾಣಿಕರ ಪೈಕಿ 14 ಜನ ಗಾಯಗೊಂಡಿದ್ದು ಅವರನ್ನು ಲಿಂಗಸೂಗೂರು ತಾಲ್ಲೂಕು ಆಸ್ಪತ್ರೆಗೆ ಸೇರಿಸಲಾಗಿದೆ.

Published on: Oct 24, 2022 02:32 PM