ಹಾಸನ: ವಿಧವೆಯ ಜೊತೆ ಮಧುವೆಯಾಗಿರೊ ವಿಚಾರ ಮುಚ್ಚಿಟ್ಟು (cheat) ಎರಡನೆ ಮದುವೆ (marriage) ತಯಾರಿ ನಡೆಸಿದ್ದ ಯೋಧ ಕಿರಣ್ ಕುಮಾರ್ ಮದುವೆ ರಾದ್ಧಾಂತವಾಗಿ ನಿಂತುಹೋಗಿತ್ತು. ಇದರಿಂದ ಮನನೊಂದ ಯೋಧ army (soldier) ಕಿರಣ್ ಕುಮಾರ್ ಮಹಿಳೆ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಿರಣ್ ಹಾಗು ಆಶಾ ಮೃತದುರ್ದೈವಿಗಳು. ಇಂದು (ನ. 11) ಯೋಧ ಕಿರಣ್ ಕುಮಾರ್ ಮತ್ತು ಆಶಾ ಹಾಸನ (hassan) ತಾಲ್ಲೂಕಿನ ಹೊಂಗೆರೆ ಗ್ರಾಮದ ಬಳಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆ ಹಿನ್ನೆಲೆ
ಯೋಧ ಕಿರಣ್ ಕುಮಾರ್ ವಿಧವೆ ಆಶಾ ಎಂಬುವರನ್ನು ಮದುವೆಯಾಗಿದ್ದರು. ಈಗ ಯೋಧ ಕಿರಣ ಕುಮಾರ್ ಎರಡನೇ ಮದುವೆಯಾಗಲು ತಯಾರಿ ನಡೆಸಿದ್ದನು. ಈ ಸಂಬಂಧ ನಿನ್ನೆ (ನ. 10) ರಂದು ಹಾಸನ ನಗರದ ಹೊರ ವಲಯದ ಬೂವನಹಳ್ಳಿ ಬಳಿಯ ಕಲ್ಯಾಣ ಮಂಟಪದಲ್ಲಿ ಮದುವೆಗೆ ಸಕಲ ಸಿದ್ಧತೆಯಾಗಿತ್ತು. ವಧು-ವರ ಸಪ್ತಪದಿ ತುಳಿಯುವುದೊಂದೆ ಬಾಕಿ ಇತ್ತು. ಈ ವೇಳೆ ಕಿರಣ ಕುಮಾರನ ಮೊದಲನೇ ಹೆಂಡತಿ ಆಶಾ ಕಲ್ಯಾಣ ಮಂಟಪಕ್ಕ ಬಂದು ಮದುವೆ ನಿಲ್ಲಿಸಿದ್ದಾರೆ.
ಆರು ತಿಂಗಳ ಹಿಂದೆ ಮನೆಯೊಳಗೇ ದೇವರ ಮುಂದೆ ತಾಳಿ ಕಟ್ಟಿ ಮದುವೆಯಾಗಿದ್ದು, ಈಗ ಮತ್ತೊಂದು ಮದುವೆ ಆಗುತ್ತಿದ್ದಾರೆಂಬುದು ಆಶಾ ಆರೋಪ ಮಾಡಿದ್ದಾರೆ. ಮಹಿಳೆ ಬಂದು, ವರ (ಯೋಧ) ಕಿರಣ್ ಕುಮಾರ್ ವಿಚಾರ ಬಹಿರಂಗ ಮಾಡುತ್ತಲೇ ಹುಡುಗಿ ಮನೆಯವರು ಮದುವೆ ನಿಲ್ಲಿಸಿದರು.
ಯೋಧನ ವಂಚನೆ ಬಗ್ಗೆ ಮಹಿಳೆ ಮಾಹಿತಿ ನೀಡುತ್ತಲೆ ಮದುವೆ ಮಂಟಪದಲ್ಲಿ ಅಲ್ಲೋಲಕಲ್ಲೋಲ ಪರಿಸ್ಥಿತಿ ಸೃಷ್ಟಿಯಾಯಿತು. ಮಹಿಳೆಯ ಹೇಳಿಕೆ ಸಂಭ್ರಮದಲ್ಲಿದ್ದವರಿಗೆ ಶಾಕ್ ನೀಡಿತು. ಹಣಕಾಸು ವಿಚಾರದ ಹಿನ್ನೆಲೆಯಲ್ಲಿ ಮದುವೆ ಆಗಿರೊದಾಗಿ ಮಹಿಳೆ ಹೇಳುತ್ತಿರೋದಾಗಿ ಕಿರಣ್ ಪ್ರತಿ ಆರೋಪ ಮಾಡಿದ್ದಾರೆ. ವಿಷಯ ತಿಳಿದು ತಕ್ಷಣ ಸ್ಥಳೀಯ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದ್ದರು. ನಂತರ ಪೊಲೀಸರು ಎಲ್ಲರನ್ನೂ ಠಾಣೆಗೆ ಕರೆದೊಯ್ದು, ವಿಚಾರಣೆ ನಡೆಸಿದರು.
ನಂತರ ಪೊಲೀಸರ ಸಮ್ಮುಖದಲ್ಲಿ ರಾಜಿ ಸಂಧಾನವಾದ ಬಳಿಕ ಯೋಧ ಕಿರಣ್ ಕುಮಾರ್ ಮತ್ತು ಆಶಾ ಹೊಂಗೆರೆ ಅರಣ್ಯದ ಬಳಿ ತೆರಳಿದ್ದಾರೆ. ಅಲ್ಲಿ ತನ್ನ ಸಂಬಂದಿಯೊಬ್ಬರಿಗೆ ವಾಟ್ಸಾಪ್ ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:20 pm, Fri, 11 November 22