ಸೋಂಕಿನ ವಿರುದ್ಧದ ಸಮರದಲ್ಲಿ ಕೊನೆಯುಸಿರೆಳೆದ ಕೊಡಗಿನ ಯೋಧ

ಕೊಡಗು: ಕೊರೊನಾ ಸೋಂಕಿಗೆ ಜಿಲ್ಲೆಯ ನಲ್ವತ್ತೊಕ್ಲುನ ಯೋಧರೊಬ್ಬರು ಕೊನೆಯುಸಿರೆಳೆದಿರುವ ಘಟನೆ ಬೆಳಕಿಗೆ ಬಂದಿದೆ. ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದ ಜಿಲ್ಲೆಯ ಯೋಧ ದುದ್ದಿಯಂಡ ಎ. ಮಜೀದ್ (50) ಕೊನೆಯುಸಿರೆಳೆದಿದ್ದಾರೆ. ಮಜೀದ್​ಗೆ ಸೆಪ್ಟೆಂಬರ್ ಮೊದಲ ವಾರ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಯೋಧನನ್ನು ಕೇರಳದ ತಿರುವನಂತಪುರಂ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿತ್ತು. ಆದರೆ, ಇಂದು ಚಿಕಿತ್ಸೆ ಫಲಿಸದೆ ಮಜೀದ್​ ಸಾವನ್ನಪ್ಪಿದ್ದಾರೆ. ದುದ್ದಿಯಂಡ ಎ. ಮಜೀದ್ ಕಳೆದ 30 ವರ್ಷಗಳಿಂದ BSFನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ, ಕೊರೊನಾ ನಿಯಮದ ಅನುಸಾರ ತಿರುವನಂತಪುರಂನಲ್ಲೇ […]

ಸೋಂಕಿನ ವಿರುದ್ಧದ ಸಮರದಲ್ಲಿ ಕೊನೆಯುಸಿರೆಳೆದ ಕೊಡಗಿನ ಯೋಧ
Edited By:

Updated on: Sep 24, 2020 | 3:51 PM

ಕೊಡಗು: ಕೊರೊನಾ ಸೋಂಕಿಗೆ ಜಿಲ್ಲೆಯ ನಲ್ವತ್ತೊಕ್ಲುನ ಯೋಧರೊಬ್ಬರು ಕೊನೆಯುಸಿರೆಳೆದಿರುವ ಘಟನೆ ಬೆಳಕಿಗೆ ಬಂದಿದೆ. ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದ ಜಿಲ್ಲೆಯ ಯೋಧ ದುದ್ದಿಯಂಡ ಎ. ಮಜೀದ್ (50) ಕೊನೆಯುಸಿರೆಳೆದಿದ್ದಾರೆ.

ಮಜೀದ್​ಗೆ ಸೆಪ್ಟೆಂಬರ್ ಮೊದಲ ವಾರ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಯೋಧನನ್ನು ಕೇರಳದ ತಿರುವನಂತಪುರಂ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿತ್ತು. ಆದರೆ, ಇಂದು ಚಿಕಿತ್ಸೆ ಫಲಿಸದೆ ಮಜೀದ್​ ಸಾವನ್ನಪ್ಪಿದ್ದಾರೆ.

ದುದ್ದಿಯಂಡ ಎ. ಮಜೀದ್ ಕಳೆದ 30 ವರ್ಷಗಳಿಂದ BSFನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ, ಕೊರೊನಾ ನಿಯಮದ ಅನುಸಾರ ತಿರುವನಂತಪುರಂನಲ್ಲೇ ಮಜೀದ್​ ಅಂತ್ಯಕ್ರಿಯೆಯನ್ನು ನೆರವೇರಿಸುವ ಸಾಧ್ಯತೆಯಿದೆ.