ಪ್ರಾಣಿಪ್ರಿಯರೇ ಸೋನಾಕ್ಷಿ ಸಿನ್ಹಾಳ ‘ಗಬ್ರು’ ನೋಡಿದ್ದೀರಾ?

‘ಅದು ಯಾರಾದರೂ ಸರಿ ಅವರ ಮುಖದಲ್ಲಿ ಒಂದೆಳೆಯಾದರೂ ನಗುವನ್ನರಳಿಸುವ ಪ್ರಯತ್ನವನ್ನು ಗಬ್ರು ಮಾಡುತ್ತಿದ್ದಾನೆ’ ಎಂಬ ಸಾಲಿನೊಂದಿಗೆ ಈ ಹಿಂದೆ ಸೋನಾಕ್ಷಿ ಪೋಸ್ಟ್​ ಮಾಡಿದ್ದರು.

ಪ್ರಾಣಿಪ್ರಿಯರೇ ಸೋನಾಕ್ಷಿ ಸಿನ್ಹಾಳ ‘ಗಬ್ರು’ ನೋಡಿದ್ದೀರಾ?
ಗಬ್ರು ಜೊತೆಗೆ ಸೋನಾಕ್ಷಿ ಸಿನ್ಹಾ
Edited By:

Updated on: Dec 18, 2020 | 9:06 PM

ಇಡೀ ಜಗತ್ತೇ ಕೊರೋನಾ ಸಂಕಷ್ಟದಲ್ಲಿ ಮುಳುಗಿದ್ದರೂ ಸಾಮಾಜಿಕ ಜಾಳತಾಣದ ಕಿಟಕಿಯ ಮೂಲಕವೇ  ತಮ್ಮ ಅಭಿಮಾನಿಗಳನ್ನು ರಂಜಿಸುವ ಪ್ರಯತ್ನವನ್ನು ನಟನಟಿಯರು ಮಾಡುತ್ತಲೇ ಇದ್ದಾರೆ.  ಈ ಪೈಕಿ ಸದ್ಯಕ್ಕೆ ಸುದ್ದಿ ಮಾಡುತ್ತಿರುವುದು ದಬಾಂಗ್​-3 ನಾಯಕಿ ಸೋನಾಕ್ಷಿ ಸಿನ್ಹಾ ಮತ್ತು ಅವರ ಮನೆಯ ನಾಯಿ ತೆಗೆಸಿಕೊಂಡ ಫೋಟೋ.

ಹೌದು, ಲಾಕ್​ಡೌನ್​ ಸ್ಟಾರ್ಟ್​ ಆದ ನಂತರದಲ್ಲಿ ಸಾಕಷ್ಟು ನಟ-ನಟಿಯರು ತಾವು ಮನೆಯಲ್ಲಿ ಏನು ಮಾಡುತ್ತಿದ್ದೇವೆ ಎನ್ನುವ ಪಿನ್​ ಟು ಪಿನ್​ ಅಪ್ಡೇಟ್​ ಕೊಡುತ್ತಿದ್ದಾರೆ. ಕೆಲವರು ಮನೆಯಲ್ಲಿ ಮಾಡುವ ರುಚಿರುಚಿಯಾದ ಅಡುಗೆ ಫೋಟೋ ಹಾಕಿಕೊಂಡರೆ ಇನ್ನೂ ಕೆಲವರು ಯೋಗಾಸನದ ಚಿತ್ರಗಳನ್ನು ಹಾಕಿಕೊಂಡಿದ್ದಾರೆ. ಅದೇ ರೀತಿ ನಟಿ ಸೋನಾಕ್ಷಿ ತಮ್ಮ ಮನೆಯ ಮುದ್ದಿನ ನಾಯಿ ಚಿತ್ರ ಅಪ್​ಲೋಡ್​ ಮಾಡಿದ್ದಾರೆ.

‘ಅದು ಯಾರಾದರೂ ಸರಿ ಅವರ ಮುಖದಲ್ಲಿ ಒಂದೆಳೆಯಾದರೂ ನಗುವನ್ನರಳಿಸುವ ಪ್ರಯತ್ನವನ್ನು ಗಬ್ರು ಮಾಡುತ್ತಿದ್ದಾನೆ’ ಎಂಬ ಸಾಲಿನೊಂದಿಗೆ ಈ ಹಿಂದೆ ಸೋನಾಕ್ಷಿ ಪೋಸ್ಟ್​ ಮಾಡಿದ್ದರು. ಈಗ ಸೋನಾಕ್ಷಿ ಗಬ್ರು ಜೊತೆ ಇರುವ ಹೊಸ ಫೋಟೋ ಹಾಕಿದ್ದಾರೆ. ಈ ಫೋಟೋದಲ್ಲಿ ಪರಸ್ಪರ ಕಣ್ಣೋಟವೇ ಜೀವಾಳ. ಹೀಗಾಗಿ ಇದು ಏಕಕಾಲಕ್ಕೆ ಸಿನಿಪ್ರಿಯರೊಂದಿಗೆ ಪ್ರಾಣಿಪ್ರಿಯರ ಗಮನವನ್ನೂ ಸೆಳೆದು ಲಕ್ಷಾಂತರ ಲೈಕುಗಳನ್ನು ಗಳಿಸಿದೆ.

ಸಿನಿಮಾ ವಿಚಾರಕ್ಕೆ ಬರೋದಾದರೆ ಸೋನಾಕ್ಷಿ ಸಿನ್ಹಾ ಈಗ ಮೊದಲಿನಷ್ಟು ಮಾರುಕಟ್ಟೆ ಉಳಿಸಿಕೊಂಡಿಲ್ಲ. ಸಲ್ಮಾನ್​ ಖಾನ್​ ನಟನೆಯ ದಬಾಂಗ್​ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ ಅವರಿಗೆ ಸಾಲುಸಾಲು ಚಿತ್ರಗಳು ಸಿಕ್ಕವು. ಆದರೆ, ಇತ್ತೀಚೆಗೆ ಅವರು ನಟಿಸಿದ ಸಿನಿಮಾಗಳು ಪ್ಲಾಫ್​ ಆಗುತ್ತಿವೆ. ಹೀಗಾಗಿ, ನಿರ್ಮಾಪಕರು ಅವರ ಮನೆಯ ಕದ ತಟ್ಟುತ್ತಿಲ್ಲ. ಸದ್ಯ, ಭುಜ್​: ದಿ ಪ್ರೈಡ್​ ಆಫ್​ ಇಂಡಿಯಾ ಚಿತ್ರದಲ್ಲಿ ಸೋನಾಕ್ಷಿ ನಟಿಸುತ್ತಿದ್ದಾರೆ. ಸಲ್ಮಾನ್​-ಸುದೀಪ್​ ಒಟ್ಟಾಗಿ ಕಾಣಿಸಿಕೊಂಡಿದ್ದ ದಬಾಂಗ್​-3 ಅವರ ಕೊನೆಯ ಚಿತ್ರ. ಈ ಸಿನಿಮಾ ಅಂದುಕೊಂಡಷ್ಟು ಮಟ್ಟಿಗೆ ಹಿಟ್​ ಆಗಿಲ್ಲ.