ಕಾರವಾರದಲ್ಲಿ ಗಿಲಿ ಗಿಚ್ಚಿ ಹಿಡಿದು ಸಖತ್ ಸ್ಟೆಪ್ ಹಾಕಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
ಈ ಹಿಂದೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪಂಚೆ ಕಟ್ಟಿ ತೋಟಕ್ಕಿಳಿದು ಕೆಲಸದಲ್ಲಿ ನಿರತರಾಗಿದ್ದರು. ಅಡಿಕೆ ಕೊನೆ ಹಿಡಿಯಲು ನಿಂತಿದ್ದರು. ಶಿರಸಿಯ ತಮ್ಮ ತೋಟದಲ್ಲಿ ಅಡಿಕೆ ಮರದ ಕೆಳಗೆ ಹಗ್ಗ ಹಿಡಿದು ಅಡಿಕೆ ಕೊನೆ ಇಳಿಸಿದ್ದರು.
ಕಾರವಾರ: ಶಿರಸಿ ತಾಲೂಕಿನ ಬರೂರ ಗ್ರಾಮದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಸಖತ್ ಸ್ಟೆಪ್ ಹಾಕಿದ್ದಾರೆ. ಗಿಲಿ ಗಿಚ್ಚಿ ಹಿಡಿದು ಹೆಜ್ಜೆ ಹಾಕುವ ಮೂಲಕ ಎಂಜಾಯ್ (Enjoy) ಮಾಡಿದ್ದಾರೆ. ಶ್ರೀಲಕ್ಷ್ಮಿ ನರಸಿಂಹ ದೇವರ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೃತ್ಯ ಮಾಡಿದ್ದಾರೆ. ಡೊಳ್ಳು ಕುಣಿತದ ತಂಡದೊಂದಿಗೆ ಗಿಲಿ ಗಿಚ್ಚಿ ಬಾರಿಸುತ್ತ ಡ್ಯಾನ್ಸ್ ಮಾಡಿದ್ದಾರೆ. ಸ್ಪೀಕರ್ ಕಾಗೇರಿ ಹೆಜ್ಜೆ ಹಾಕುವಾಗ ನೂರಾರು ಜನರು ಭಾಗವಹಿಸಿ, ಅವರಿಗೆ ಸಾಥ್ ನೀಡಿದರು.
ಪಂಚೆ ಕಟ್ಟಿ ತೋಟಕ್ಕಿಳಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ: ಈ ಹಿಂದೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪಂಚೆ ಕಟ್ಟಿ ತೋಟಕ್ಕಿಳಿದು ಕೆಲಸದಲ್ಲಿ ನಿರತರಾಗಿದ್ದರು. ಅಡಿಕೆ ಕೊನೆ ಹಿಡಿಯಲು ನಿಂತಿದ್ದರು. ಶಿರಸಿಯ ತಮ್ಮ ತೋಟದಲ್ಲಿ ಅಡಿಕೆ ಮರದ ಕೆಳಗೆ ಹಗ್ಗ ಹಿಡಿದು ಅಡಿಕೆ ಕೊನೆ ಇಳಿಸಿದ್ದರು. ಕೊನೆಗಾರ ಅಡಕೆ ಮರದ ತುದಿಯಲ್ಲಿ ನಿಂತು ಕೊನೆಗಳನ್ನು ಹಗ್ಗದ ಮುಖಾಂತರ ಕೆಳಗೆ ಕೊಡುತ್ತಾರೆ. ಹಗ್ಗದಲ್ಲಿ ಬಂದ ಕೊನೆಗಳನ್ನ ಸ್ಪೀಕರ್ ಹಿಡಿದು ಕೆಳಗೆ ಹಾಕುತ್ತಾರೆ. ಇದೇ ರೀರಿ ಸ್ವಲ್ಪ ಹೊತ್ತು ಕೆಲಸಗಾರರೊಂದಿಗೆ ಕಾಲ ಕಳೆದಿದ್ದರು.
ಕ್ರಿಕೆಟ್ ಆಡಿದ್ದ ಕಾಗೇರಿ: ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಜನರೊಂದಿಗೆ ಬೆರೆತು ಕ್ರಿಕೆಟ್ ಆಡಿದ್ದರು. ಕಾಗೇರಿ ಅವರು ಬಿಡುವಿನ ವೇಳೆ ತಮ್ಮ ಹುಟ್ಟೂರಾದ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕುಳವೆಯಲ್ಲಿ ಈ ಹಿಮದೆ ಮಕ್ಕಳು ಮತ್ತು ಸ್ಥಳೀಯರೊಂದಿಗೆ ಸೇರಿ ಕ್ರಿಕೆಟ್ ಆಡಿದ್ದರು. ಸ್ಪೀಕರ್ ಕ್ರಿಕೆಟ್ ಆಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಶಿರಸಿ-ಸಿದ್ಧಾಪುರ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದ ಅವರು, ತಮ್ಮ ಕೆಲಸಗಳನ್ನು ಮುಗಿಸಿ ಬಿಡುವಾದ ವೇಳೆ ಜನರೊಂದಿಗೆ ಬೆರೆತು ಸ್ವಲ್ಪ ಸಮಯ ಕಾಲ ಕಳೆದಿದ್ದರು.
ಇದನ್ನೂ ಓದಿ
ಪ್ರಧಾನಿ ನರೇಂದ್ರ ಮೋದಿಗೆ ಇಂಥ ಭಾಷಣ ಶೋಭೆಯಲ್ಲ; ಅರವಿಂದ್ ಕೇಜ್ರಿವಾಲ್, ಪ್ರಿಯಾಂಕಾ ಗಾಂಧಿ ವಾಗ್ದಾಳಿ
3ಡಿ ಲೇಸರ್ ಶೋ ಮೂಲಕ ಇತಿಹಾಸ ಅನಾವರಣ; ಆಧುನಿಕ ಸ್ಪರ್ಶದೊಂದಿಗೆ ಕಂಗೊಳಿಸುತಿದೆ ಏಳು ಸುತ್ತಿನ ಕೋಟೆಯ ವೈಭವ