ನಡುಕ ಹುಟ್ಟಿಸಿದೆ.. ಸೋಂಕಿತ ವಿದ್ಯಾರ್ಥಿ SSLC ಪರೀಕ್ಷೆ ಬರೆದಿದ್ದಾನೆ! ಎಲ್ಲಿ?

| Updated By: ಸಾಧು ಶ್ರೀನಾಥ್​

Updated on: Jun 27, 2020 | 1:59 PM

ಹಾಸನ: ಕೋವಿಡ್​ ಪರೀಕ್ಷೆಯ ರಿಸಲ್ಟ್​ನಲ್ಲಿ ಪಾಸಿಟಿವ್ ಬಂದಿರುವ ವಿದ್ಯಾರ್ಥಿ ಅರಕಲಗೂಡು ತಾಲೂಕಿನಲ್ಲಿ SSLC ಪರೀಕ್ಷೆ ಬರೆಯುತ್ತಿದ್ದಾನೆ. ಎರಡು ದಿನಗಳ ಹಿಂದೆ ವಿದ್ಯಾರ್ಥಿಗೆ ಜ್ವರ ಬಂದಿದ್ದ ಹಿನ್ನೆಲೆಯಲ್ಲಿ ಆತನ ಪೋಷಕರು ಕೋವಿಡ್​ ಪರೀಕ್ಷೆ ಮಾಡಿಸಿದ್ದರು. ಇದೀಗ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಆದರೆ, ರಿಸಲ್ಟ್​ ಬರೋ ಮುನ್ನವೇ ಪರೀಕ್ಷೆಗೆ ವಿದ್ಯಾರ್ಥಿ ಹಾಜರಾಗಿದ್ದಾನೆ. ಸದ್ಯಕ್ಕೆ ಆತ ತಾಲೂಕಿನ ಮಲ್ಲಿಪಟ್ಟಣ ಗ್ರಾಮದ ಪರೀಕ್ಷಾ ಕೇಂದ್ರದಲ್ಲಿ ಎಕ್ಸಾಂ ಬರೆಯುತ್ತಿದ್ದಾನೆ ಎಂದು ತಿಳಿದುಬಂದಿದೆ. ಈ ಪ್ರಕರಣ ಎಲ್ಲರಲ್ಲಿ ನಡುಕ ಹುಟ್ಟಿಸಿದೆ.

ನಡುಕ ಹುಟ್ಟಿಸಿದೆ.. ಸೋಂಕಿತ ವಿದ್ಯಾರ್ಥಿ SSLC ಪರೀಕ್ಷೆ ಬರೆದಿದ್ದಾನೆ! ಎಲ್ಲಿ?
Follow us on

ಹಾಸನ: ಕೋವಿಡ್​ ಪರೀಕ್ಷೆಯ ರಿಸಲ್ಟ್​ನಲ್ಲಿ ಪಾಸಿಟಿವ್ ಬಂದಿರುವ ವಿದ್ಯಾರ್ಥಿ ಅರಕಲಗೂಡು ತಾಲೂಕಿನಲ್ಲಿ SSLC ಪರೀಕ್ಷೆ ಬರೆಯುತ್ತಿದ್ದಾನೆ.

ಎರಡು ದಿನಗಳ ಹಿಂದೆ ವಿದ್ಯಾರ್ಥಿಗೆ ಜ್ವರ ಬಂದಿದ್ದ ಹಿನ್ನೆಲೆಯಲ್ಲಿ ಆತನ ಪೋಷಕರು ಕೋವಿಡ್​ ಪರೀಕ್ಷೆ ಮಾಡಿಸಿದ್ದರು. ಇದೀಗ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಆದರೆ, ರಿಸಲ್ಟ್​ ಬರೋ ಮುನ್ನವೇ ಪರೀಕ್ಷೆಗೆ ವಿದ್ಯಾರ್ಥಿ ಹಾಜರಾಗಿದ್ದಾನೆ. ಸದ್ಯಕ್ಕೆ ಆತ ತಾಲೂಕಿನ ಮಲ್ಲಿಪಟ್ಟಣ ಗ್ರಾಮದ ಪರೀಕ್ಷಾ ಕೇಂದ್ರದಲ್ಲಿ ಎಕ್ಸಾಂ ಬರೆಯುತ್ತಿದ್ದಾನೆ ಎಂದು ತಿಳಿದುಬಂದಿದೆ. ಈ ಪ್ರಕರಣ ಎಲ್ಲರಲ್ಲಿ ನಡುಕ ಹುಟ್ಟಿಸಿದೆ.

Published On - 1:23 pm, Sat, 27 June 20