SSLC ಪರೀಕ್ಷಾ ಕೇಂದ್ರದಲ್ಲಿ ಅವ್ಯವಸ್ಥೆ: ಕೊಠಡಿಯಲ್ಲಿ ಗುಟ್ಕಾ ಉಗುಳು, ಗಲೀಜು
ಗದಗ: SSLC ಪರೀಕ್ಷಾ ಕೇಂದ್ರದ ಕೊಠಡಿಯಲ್ಲಿ ಗುಟ್ಕಾ ಉಗುಳಿ ಗಲೀಜು ಮಾಡಿರುವ ಘಟನೆ ಜಿಲ್ಲೆಯ ಮುನ್ಸಿಪಲ್ ಕಾಲೇಜಿನಲ್ಲಿ ಕಂಡು ಬಂದಿದೆ. ಪರೀಕ್ಷಾ ಕೇಂದ್ರದ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಮಕ್ಕಳು ಗಲೀಜಿನಲ್ಲೇ ಕುಳಿತು ಪರೀಕ್ಷೆ ಬರೆಯುವ ದುಃಸ್ಥಿತಿ ಎದುರಾಗಿದೆ. ಗಣಿತದ ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಕೊಠಡಿಯ ಪರಿಸ್ಥಿತಿ ಕಂಡು ಆತಂಕ ಸಹ ಉಂಟಾಯಿತು. ಪರೀಕ್ಷಾ ಕೇಂದ್ರದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಪರೀಕ್ಷಾ ಕೇಂದ್ರದ ಆವರಣದಲ್ಲಿ ಕ್ರಿಕೆಟ್ ಆಟ ಇದಲ್ಲದೆ ಇದೇ ಪರೀಕ್ಷಾ ಕೇಂದ್ರದಲ್ಲಿ ಮತ್ತೊಂದು […]
ಗದಗ: SSLC ಪರೀಕ್ಷಾ ಕೇಂದ್ರದ ಕೊಠಡಿಯಲ್ಲಿ ಗುಟ್ಕಾ ಉಗುಳಿ ಗಲೀಜು ಮಾಡಿರುವ ಘಟನೆ ಜಿಲ್ಲೆಯ ಮುನ್ಸಿಪಲ್ ಕಾಲೇಜಿನಲ್ಲಿ ಕಂಡು ಬಂದಿದೆ. ಪರೀಕ್ಷಾ ಕೇಂದ್ರದ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಮಕ್ಕಳು ಗಲೀಜಿನಲ್ಲೇ ಕುಳಿತು ಪರೀಕ್ಷೆ ಬರೆಯುವ ದುಃಸ್ಥಿತಿ ಎದುರಾಗಿದೆ. ಗಣಿತದ ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಕೊಠಡಿಯ ಪರಿಸ್ಥಿತಿ ಕಂಡು ಆತಂಕ ಸಹ ಉಂಟಾಯಿತು. ಪರೀಕ್ಷಾ ಕೇಂದ್ರದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಪರೀಕ್ಷಾ ಕೇಂದ್ರದ ಆವರಣದಲ್ಲಿ ಕ್ರಿಕೆಟ್ ಆಟ ಇದಲ್ಲದೆ ಇದೇ ಪರೀಕ್ಷಾ ಕೇಂದ್ರದಲ್ಲಿ ಮತ್ತೊಂದು ನಿರ್ಲಕ್ಷ್ಯ ಕಂಡುಬಂತು. ಕೇಂದ್ರದ ಆವರಣದಲ್ಲಿ ಸ್ಥಳೀಯ ಯುವಕರು ಕ್ರಿಕೆಟ್ ಆಡುತ್ತಿದ್ದರೂ ಕೇಂದ್ರದ ಭದ್ರತಾ ಸಿಬ್ಬಂದಿ ಅವರನ್ನು ಹೊರಕ್ಕೆ ಕಳುಹಿಸದೆ ಸುಮ್ಮನಿದ್ದರು. ಪರೀಕ್ಷಾ ಸಮಯ ಹತ್ತಿರವಾದ್ರು ಯುವಕರು ತಮ್ಮ ಆಟವನ್ನು ಮುಂದುವರೆಸಿದರು. ಕೊನೆಗೆ ಇದರ ಬಗ್ಗೆ ಟಿವಿ 9ನಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಪೊಲೀಸರು ಯುವಕರನ್ನು ಹೊರಗೆ ಕಳುಹಿಸಿದರು.